ಜನಾರ್ಧನ ಮಾಸ್ಟರ್ ಗಣಿತ ಕೇಂದ್ರ, ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ವತಿಯಿಂದ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಎಣ್ಮೂರಿನ ದೀಪಕ್, ಸುಬ್ರಹ್ಮಣ್ಯದ ಹಾಗು ಗುತ್ತಿಗಾರಿನ ತಾಲೂಕು ವಿದ್ಯಾರ್ಥಿಗಳಿಗೆ, ಕಳೆದ ವರ್ಷ ಎನ್. ಎಮ್.ಎಮ್.ಎಸ್. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಅಶ್ವಿತಾ, ಪೌರ್ಣಮಿ, ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು. ಗಣಿತ ಕೇಂದ್ರದ ಅಧ್ಯಕ್ಷರಾದ ಎಂ. ಬಿ. ಸದಾಶಿವ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೀತಲ್ ಯು ಅತಿಥಿಗಳಾಗಿದ್ದರು. ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಸಂಚಾಲಕರಾದ ಡಾ. ಜ್ಞಾನೇಶ್ ಎನ್. ಎ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಗಣಿತ ಕೇಂದ್ರದ ಕೋಶಾಧಿಕಾರಿಗಳಾದ ರಾಮಚಂದ್ರ ಜೊತೆ ಕಾರ್ಯದರ್ಶಿಗಳಾದ ಪುರುಷೋತ್ತಮ ಎಂ.ಎಸ್., ಎಸ್.ಡಿ.ಎಮ್.ಸಿ. ಸದಸ್ಯರಾದ ಅಹಮ್ಮದ್ ಕಬೀರ್, ಲೋಕೇಶ್ ಗುಡ್ಡಮನೆ, ಹಿರಿಯ ಶಿಕ್ಷಕರಾದ ಡಾ. ಸುಂದರ ಕೇನಾಜೆ ಉಪಸ್ಥಿತರಿದ್ದರು. ಗಣಿತ ಶಿಕ್ಷಕರಾದ ಪೂರ್ಣಿಮಾ, ಹೇಮಲತಾ, ಲತಾ ಪೈ ಇವರು ಸಹಕರಿಸಿದರು.
- Friday
- November 8th, 2024