ದುಗಲಡ್ಕ ಘನತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ಒಂದು ವಾರದಲ್ಲಿ ನೀಡುವಂತೆ ಸೂಚನೆ.
ಬಡ ರೈತರ ಜಾಗ ಗುರುತಿಸುವಾಗ ಅರಣ್ಯದ ಆಕ್ಷೇಪಣೆ ಕುರಿತು ಗಮನ ಸೆಳೆದೆ ತಾಶೀಲ್ದಾರ್.
ಗುಳಿಕಾನ ಸಂತ್ರಸ್ತರ ನಿವೇಶನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಗಿರೀಶ್ ನಂದನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಮಳೆಗಾಲದ ಗುಡ್ಡ ಕುಸಿತ ಮುಂಜಾಗ್ರತೆ ಕ್ರಮ ವಹಿಸುವ ಬಗ್ಗೆ ಈ ಹಿಂದಿನ ಸಭೆಯ ಪಾಲನ ವರದಿ ಉಲ್ಲೇಖಿಸಿ ವಿಚಾರ ಪ್ರಸ್ತಾಪಿಸಿದ ಗಿರೀಶ್ ನಂದನ್ ಅವರು ಕಲ್ಮಕಾರಿನ ಗುಳಿಕಾನದ ೯ ಮಂದಿ ಸಂತ್ರಸ್ತರಿಗೆ ನಿವೇಶನಾ ಹಂಚಿಕೆ ಏನಾಗಿದೆ ಎಂದು ಪ್ರಶ್ನಿಸಿದರು. ವಲಯ ಅರಣ್ಯಾಧಿಕಾರಿ ಮಂಜುನಾಥ್ ಉತ್ತರಿಸಿ, ಅರಣ್ಯ ಇಲಾಖೆಯಿಂದ ನಾವು ವರದಿ ಸಲ್ಲಿಸಿದ್ದೇವೆ. ಇನ್ನು ಕಂದಾಯ ಇಲಾಖೆ ಮುಂದುವರಿಯಬೇಕಿದೆ ಎಂದರು. ಬಳಿಕ ಮಾತನಾಡಿದ ಗಿರೀಶ್ ನಂದನ್ ಅವರು ಗುಳಿಕಾನದ ಸಂತ್ರಸ್ತರಿಗೆ ನಿವೇಶನಾವನ್ನು ಆದಷ್ಟು ಬೇಗ ಒಗಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ತಹಶೀಲ್ದಾರ್ ಮಂಜುಳಾ ಅವರಿಗೆ ಸೂಚಿಸಿದರು.
ಒಂದು ವಾರದಲ್ಲಿ ವರದಿ ನೀಡಲು ಅರಣ್ಯ ಇಲಾಖೆಗೆ ಸೂಚನೆ:
ಸುಳ್ಯ ನ.ಪಂ. ವ್ಯಾಪ್ತಿಯ ದುಗ್ಗಲಡ್ಕದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಜಮೀನು ನಿಗದಿಪಡಿಸಿದ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಇದಕ್ಕೆ ಪುತ್ತೂರು ಸಹಾಯಕ ಆಯುಕ್ತರು ಅರಣ್ಯ ಇಲಾಖೆ ಅವರಿಂದ ನಿರಾಪೇಕ್ಷಣಾ ಪತ್ರ ಪಡೆಯುವಂತೆ ಹಾಗೂ ಆಕ್ಷೇಪನೆ ಇದ್ದಲ್ಲಿ ಬದಲಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಅರಣ್ಯ ಇಲಾಖೆ ಹಾಗೂ ಕೆಎಫ್‌ಡಿಸಿಎಲ್ ಜಂಟಿಯಾಗಿ ಸ್ಥಳ ತನಿಖೆ ನಡೆಸಿದ್ದು, ವಲಯ ಅರಣ್ಯಾಧಿಕಾರಿ ಅವರಿಂದ ಅಂತಿಮ ವರದಿ ಬರಬೇಕಿದೆ ಎಂದು ನಡಾವಳಿಯಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಅಂತಿಮ ವರದಿಯನ್ನು ಒಂದು ವಾರದಲ್ಲಿ ನೀಡುವಂತೆ ಆಡಳಿತಾಧಿಕಾರಿ ಗಿರೀಶ್ ನಂದನ್ ವಲಯ ಅರಣ್ಯಾಧಿಕಾರಿ ಅವರಿಗೆ ಸೂಚಿಸಿದರು.
ಜಾಗ ಗುರುತಿಸುವ ವೇಳೆ ಅರಣ್ಯ ಇಲಾಖೆ ಆಕ್ಷೇಪಣೆ ಸಲ್ಲಿಸಿ ಬಳಿಕದ ವರದಿ ನೀಡುವಲ್ಲಿ ತಡ ಮಾಡುತ್ತಿರುವ ಬಗ್ಗೆ ತಹಶೀಲ್ದಾರ್ ಮಂಜುಳಾ ಸಭೆಯಲ್ಲಿ ಗಮನ ಸೆಳೆದರು. ಅರಣ್ಯ ಇಲಾಖೆ ಆಕ್ಷೇಪಣೆ ಸಲ್ಲಿಸಿ ಆದಷ್ಟು ಬೇಗ ತಮ್ಮ ವರದಿ ನೀಡಬೇಕು ಎಂದು ತಿಳಿಸಿದರು. ಆಡಳಿತಾಧಿಕಾರಿ ಗಿರೀಶ್ ನಂದನ್ ಅವರು ಕೂಡ ಪೂರಕ ಸಹಕಾರ ನೀಡಲು ಸೂಚಿಸಿದರು. ಈ ಭಾಗದಲ್ಲಿ ಡೀಮ್ಡ್, ಭಾಗಶಃ ಅರಣ್ಯದಿಂದಾಗಿ ಸಮಸ್ಯೆ ಆಗುತ್ತಿದೆ. ಗಡಿ ಗುರುತು ಆಗದೇ ಸಮಸ್ಯೆ ಇದೆ. ಕಂದಾಯ ಇಲಾಖೆ ಗಡಿ ಗುರುತು ಮಾಡಿ ನೀಡಿದಲ್ಲಿ ನಮಗೆ ಪೂರಕವಾಗಲಿದೆ ಎಂದರು.
ಶಿಥಿಲ ಕಟ್ಟಡ ತೆರವು ವೇಳೆ ಮುನ್ನೆಚ್ಚರಿಕೆ ವಹಿಸಿ:
ಹಳೆಯ ಶಿಥಿಲ ಕಟ್ಟಡಗಳ ತೆರವು ಮಾಡುವ ಬಗ್ಗೆ ಸಭೆಯಲ್ಲಿ ಅನುಮತಿ ಬಗ್ಗೆ ಚರ್ಚೆ ನಡೆಯಿತು. ಈವೇಳೆ ಮಾತನಾಡಿದ ಗಿರೀಶ್ ನಂದನ್ ಅವರು, ಶಾಲಾ ಶಿಥಿಲ ಕಟ್ಟಡ ಸೇರಿದಂತೆ ಯಾವುದೇ ಶಿಥಿಲ ಕಟ್ಟಡ ತೆರವು ಮಾಡುವ ವೇಳೆ ಜಾಗ್ರತೆ ಹಾಗೂ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿ ತೆರವು ಕಾರ್ಯ ನಡೆಸಬೇಕು. ಕಡಬದ ಕುಂತೂರಿನಲ್ಲಿ ಸಂಭವಿಸಿದ ದುರಂತದAತೆ ಆಗಲು ಅವಕಾಶ ನೀಡದಿರಿ ಎಂದು ಸಲಹೆ ನೀಡಿದರು.
ಹಾಸ್ಟೇಲ್‌ಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದ ತಂಡ ಭೇಟಿಗೆ ನಿರ್ದೇಶಿಸಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಽಕಾರಿ ರಾಜಣ್ಣ ಸಭೆಯಲ್ಲಿ ಮಾಹಿತಿ ನೀಡಿದರು. ಗಿರೀಶ್ ನಂದನ್ ಮಾತನಾಡಿ, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಾಸ್ಟೇಲ್‌ಗಳಿಗೆ ಆಯಾ ಇಲಾಖೆಯ ಅಽಕಾರಿಗಳ ಜೊತೆಗೆ ಭೇಟಿ ನೀಡಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯ, ಅಲ್ಲಿನ ಸೌಕಾರ್ಯಗಳ ಬಗ್ಗೆ ವರದಿ ನೀಡಲು ಸೂಚಿಸಿದರು. ಸಭೆಯಲ್ಲಿ ಅಂಬೇಡ್ಕರ್ ಭವನದ ಬಳಿ ರಸ್ತೆ , ಪಶು ವೈದ್ಯಕೀಯ ಆಸ್ಪತ್ರೆಯ ಮುಂಭಾಗದ ಹಳೆಯ ಕಟ್ಟಡ ತೆರವು , ರಸ್ತೆ ಚರಂಡಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಸುಳ್ಯ ತಹಶೀಲ್ದಾರ್ ಮಂಜುಳಾ ತಾ.ಪಂ ಇ ಒರಾಜಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ತಾ.ಪಂ. ಕಾರ್ಯನಿರ್ವಹರ್ಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.