Ad Widget

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ಅಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ವೈಧ್ಯರ ನಡುವೆ ಮುಗಿಯದ ಗೊಂದಲ – ಮಂಗಳೂರಿಗೆ ರೋಗಿಯನ್ನು ಕರೆದೊಯ್ಯಲು ನಿರಾಕರಿಸಿದ ಸಿಬ್ಬಂದಿ

. . . . . .

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯರು ಹಾಗೂ 108 ಅಂಬ್ಯುಲೆನ್ಸ್ ಸಿಬ್ಬಂದಿಗಳ ನಡುವೆ ಶೀತಲ ಸಮರ ಮುಂದುವರೆದಿದ್ದು, ಇವರಿಬ್ಬರ ಜಗಳದಲ್ಲಿ ರೋಗಿಗಳನ್ನು ಕಂಗಾಲಾಗುವಂತೆ ಮಾಡಿದೆ. 

ಇದೀಗ ರೋಗಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ಯಲು 108 ಆಂಬುಲೆನ್ಸ್ ನವರು ಒಪ್ಪದೇ ಇದ್ದು ಬಳಿಕ ರೋಗಿಯನ್ನು ಬೇರೆ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆವರವಾನಿಸಿದ ಘಟನೆ ಇಂದು ನಡೆದಿದೆ.

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ವಾಹನ ನಿಲುಗಡೆ ಮತ್ತು ಸಿಬ್ಬಂದಿಗಳಿಗೆ ವಿಶ್ರಾಂತಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಇತ್ತೀಚೆಗೆ 108 ಸಿಬ್ಬಂದಿಗಳು ಸಚಿವರಿಗೆ ದೂರು ನೀಡಿದ್ದರು. ಇದೀಗ ವಿವಾದದಿಂದ ರೋಗಿಗಳಿಗೆ ಸಮಸ್ಯೆಯಾಗಿದ್ದು ಸರಕಾರಿ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆ ಗೆ ರೋಗಿಗಳನ್ನು ಕರೆದೊಯ್ಯುವುದಿಲ್ಲ ಎಂದು 108 ಸಿಬ್ಬಂದಿಗಳು ಪಟ್ಟುಹಿಡಿದಿದ್ದಾರೆ.

ಸುಳ್ಯ ಸರಕಾರಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹರ ಮಾಡಿದ್ದರು.‌ಈ ವೇಳೆ ರೋಗಿಯನ್ನು ಕರೆದುಕೊಂಡು ಹೋಗಲು 108 ಗೆ ಕರೆ ಮಾಡಿದಾಗ ನಾವು ಬೇರೆ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವುದಿಲ್ಲ ಎಂದು ಸಿಬ್ಬಂದಿಗಳು ಹೇಳಿದ್ದಾರೆ.

ಈ ಬಗ್ಗೆ ಚರ್ಚೆ ನಡೆದು ಕೊನೆಗೂ ಒಪ್ಪದೇ ವೈಧ್ಯರು ಆಸ್ಪತ್ರೆಯ ಬೇರೆ ಆಂಬುಲೆನ್ಸ್ ವಾಹನದಲ್ಲಿ ರೋಗಿಯನ್ನು ಮಂಗಳೂರಿಗೆ ರವಾನಿಸಿದ್ದಾರೆಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!