Ad Widget

ನಾಲ್ಕೂರು : ಸಾಮಾಜಿಕ ಅರಣೀಕರಣ ಕಾರ್ಯಕ್ರಮದಲ್ಲಿ ಹಣ್ಣು ಹಂಪಲು ಗಿಡಗಳ ನಾಟಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ಅರಣೀಕರಣ ಕಾರ್ಯದಡಿಯಲ್ಲಿ ಹಣ್ಣು ಹಂಪಲು ಗಿಡಗಳ ನಾಟಿಯ ಕಾರ್ಯಕ್ರಮವನ್ನು ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ವಿಜಯ ಕುಮಾರ್ ಚಾರ್ಮತರವರು ಗಿಡ ನಾಟಿ ಮಾಡುವ ಮುಖೇನ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕೃಷಿ ಮೇಲ್ವಿಚಾರಕರಾದ ಶ್ರೀ ರಮೇಶ್ ರವರು, ನಾಲ್ಕೂರು ಅರಣ್ಯ ರಕ್ಷಕರಾದ ಶ್ರೀ ಬಸಪ್ಪರವರು, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ರವರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಶಿವರಾಮ ಉತ್ರಂಬೆರವರು, ನಡುಗಲ್ಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೇಶರಾಜ್ ರವರು, ಹಾಲೆಮಜಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಲೋಹಿತ್ ಚೆಮ್ನೂರುರವರು, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹರೀಶ ಕೊಯಿಲಾರವರು, ನಾಲ್ಕೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಶ್ರೀ ಸತೀಶ್ ಬಂಬುಳಿರವರು, ವಲಯದ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡರವರು, ಜ್ಞಾನ ದೀಪ ಶಿಕ್ಷಕಿ ರವರಾದ ಶ್ರೀಮತಿ ಸವಿತಾರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾಲ್ಕೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮತ್ತು ಒಕ್ಕೂಟದ ಸದಸ್ಯರು ಶಾಲಾ ವಠಾರದಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಹಣ್ಣು ಹಂಪಲುಗಳ ಗಿಡ ನಾಟಿಯನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ನಾಲ್ಕೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಶ್ರೀ ಹರಿಶ್ಚಂದ್ರ ಕೆ. ರವರು ಸ್ವಾಗತಿಸಿ, ಧನ್ಯವಾದವಿತ್ತರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!