ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ “ಸ್ವಚ್ಛ ಭಾರತ ವಿಷನ್” ಯೋಜನೆ ಅಂಗವಾಗಿ ಗಾಂಧಿ ಜಯಂತಿಯ ದಿನದಂದು ಪ್ರತಿಯೊಬ್ಬ ನಾಗರೀಕನು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಾಗೂ ಸೇವಾ ಪಾಕ್ಷಿಕ ಕಾರ್ಯಯೋಜನೆ ಮಾಡಬೇಕು ಎಂದು ಕರೆ ನೀಡಿದ್ದರು. ಇದರ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಳಲಂಬೆ ಯವರ ನೇತೃತ್ವದಲ್ಲಿ ಗುತ್ತಿಗಾರು ಶಕ್ತಿ ಕೇಂದ್ರ ವ್ಯಾಪ್ತಿಯ 4 ಬೂತ್ ಗೆ ಒಳಪಟ್ಟ ಸ್ವಯಂ ಸೇವಕರು ಸ್ವಯಂ ಇಚ್ಛೆಯಿಂದ ಸ್ವಚ್ಛತಾ ಕಾರ್ಯ ನಡೆಸಿದರು. ವಳಲಂಬೆಯ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸ್ವಚ್ಛತೆ ಹಾಗೂ ಭೋಜನ ಶಾಲೆಯ ಮೇಲ್ಭಾಗದಲ್ಲಿ ತುಂಬಿ ಬಿದ್ದಿರುವ ಕಸಗಳ ವಿಲೇವಾರಿ, ಕುಡಿಯುವ ನೀರಿನ ಟ್ಯಾಂಕ್ ನ ಶುಚಿತ್ವ ಹಾಗೂ ಅಪಾಯಕಾರಿ ಮರ ಹಾಗೂ ಸತ್ತಿರುವ ತೆಂಗಿನ ಮರಗಳ ತೆರವು ಕಾರ್ಯ ಕೈಗೊಂಡರು.
- Friday
- November 1st, 2024