ಆಗಸ್ಟ್ 2022 ರಲ್ಲಿ ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿ ಇಡೀ ಸರಕಾರವನ್ನು ಮತ್ತು ಕೇಂದ್ರ ನಾಯಕರನ್ನು ತಿರುಗಿ ನೋಡುವಂತೆ ಮಾಡಿದ ಅತೀ ಭೀಕರ ಕೊಲೆಯ ಬಗ್ಗೆ ಇದೀಗ ವ್ಯಕ್ತಿಯೋರ್ವರ ಪೋಸ್ಟ್ ಭಯ ಬೀಳಿಸುವಂತೆ ಮಾಡಿದೆ.
ಇಬ್ರಾಹಿಂ ಕಲೀಲ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮಸೀದಿಯ ಸಮಿತಿಯು ಬೆಳ್ಳಾರೆ ಪೋಲಿಸರಿಗೆ ದೂರು ನೀಡಿದ್ದು ಇದೀಗ ಈ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇಬ್ರಾಹಿಂ ಕಲೀಲ್ ರವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಮಾಡಿದ ಆರೋಪವೇನು?
ಪ್ರವೀಣ್ ನೆಟ್ಟರು ಕೊಲೆ ಮಾಡಲು ಮೊತ್ತ ಮೊದಲು ಬೆಳ್ಳಾರೆ ಝಕರಿಯಾ ಮಸ್ಜಿದ್ ವಠಾರದಲ್ಲಿ ಮೊದಲು ಮಾತನ್ನು ಆರಂಭಿಸಿದವರೇ ಈ ಇಬ್ಬರಾದ Jamalks Bellare ಮತ್ತು Azaruddin Bellare
ಇದನ್ನು ನಾನು ಎಲ್ಲಿ ಬೇಕಾದ್ರೂ ಹೇಳಲು ತಯಾರಾಗಿದ್ದೇನೆ
ಮತ್ತು ಇವತ್ತು ಬೆಳಿಗ್ಗೆ TV.9 ಮಂಗಳೂರು ರಿಪೋರ್ಟ ಕಾಲ್ ಮಾಡಿದ್ರು. ಅವರಲ್ಲಿ ನಡೆದ ಘಟನೆ ಹೇಳಿರುತ್ತೇನೆ.
ಅವರಲ್ಲಿ ಕೂಡ ಸತ್ಯ ಹೇಳಿರುತ್ತೇನೆ ಸತ್ಯ ಹೇಳಲು ಎಲ್ಲಿ ಕೂಡ ಭಯಪಡಬೇಕಾಗಿ ಬರುವುದಿಲ್ಲಾ
ಈ ಇಬ್ಬರನ್ನು ಮತ್ತು ಮಸ್ಜಿದ್ ಅಧ್ಯಕ್ಷರು ಮಂಗಳ ವಾ ಇಲ್ಲ ಸುಮಂಗಲವಾ ಯಾರೇ ಇರಲಿ ಕೋರ್ಟು ಹತ್ತಿಸಿ ಹೇ ತಿರುವೆನು….
ಬೆಳ್ಳಾರೆಯಾ ಕೇಂದ್ರ ಮಸ್ಜಿದ್’ನಲ್ಲಿ ಅಲ್ಲಿನ ಮೊಯಿಲರುಗಳು ನೇರವಾದ ಕಾರ್ಯ ಕಳಿಸಿ ಕೊಡ್ತಾ ಇಲ್ಲ ಅ ಕಾರಣದಿಂದ ಅಲ್ಲಿನ ಸರ್ವ ಅನುಯಾಯಿಗಳ ಕುರಿತು ಅಲ್ಲ ಕೆಲ ಮಂದಿಗಳು ಗೂoಡಗಳು ರೌಡಿಗಳು ಅಲ್ಲಿಂದ ಜನ್ಮ ತಾಳುತ್ತಾರೆ
ಇದನ್ನು ನಾವೆಲ್ಲರೂ ಸೇರಿ ಚಿಗುರಲು ಬಿಡಬಾರದು ಪ್ರಾರಂಭದಲ್ಲೆ ಚಿವುಟಿ ಹಾಕಬೇಕು.. ಎಂದು ಬರೆಯಲಾಗಿದ್ದು ಅಲ್ಲದೇ ಈ ಕುರಿತು ಎನ್ ಐ ಎ ಕೂಡ ತನಿಖೆ ನಡೆಸಬೇಕು ಎಂದು ಮತ್ತೊಂದು ಪೋಸ್ಟ್ ಹಾಕಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿದ ವಿಷಯ ಪ್ರಸ್ತಾಪವಾಗಿರುವ ಕುರಿತು ಗೃಹ ಇಲಾಖೆ ಮತ್ತು ಎನ್ ಐ ಎ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಿದೆ.
ಈ ಬಗ್ಗೆ ಪೋಲಿಸ್ ಇಲಾಖೆಯ ಉನ್ನತ ಮೂಲಗಳ ಮಾಹಿತಿ ಪ್ರಕಾರ ಇಬ್ರಾಹಿಂ ಕಲೀಲ್ ಈ ವಿಚಾರವನ್ನು ಕೇಂದ್ರ ತನಿಖಾ ಸಂಸ್ಥೆಗೆ ನೀಡ ಬಹುದಾಗಿದ್ದು ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಬರವಣಿಗೆ ಹಾಕುವುದು ಸರಿಯಲ್ಲ ಅಲ್ಲದೇ ಶಾಂತಿ ಕದಡುವ ಪ್ರಯತ್ನವನ್ನು ಯಾರು ಮಾಡಬಾರದು ಎಂದು ತಿಳಿಸಿದ್ದು ಇಬ್ರಾಹಿಂ ಕಲೀಲ್ ವಿರುದ್ದ ಮಸೀದಿ ಸಮಿತಿ ದೂರು ನೀಡಿದ್ದಾರೆ. ಈ ಬಗ್ಗೆ ಕಲೀಲ್ ಕೂಡ ಇಬ್ಬರ ವಿರುದ್ದ ದೂರು ನೀಡಿದ್ದು, ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ.
ನೆಟ್ಟಾರು ಪ್ರಕರಣದಲ್ಲಿ ಈ ಇಬ್ಬರ ಕೈವಾಡ ಮತ್ತು ಮಸೀದಿಯ ಹೆಸರು ಬಳಕೆ ಮಾಡಿರುವುದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.