ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ )ಸುಳ್ಯ ತಾಲೂಕು ಬೆಳ್ಳಾರೆ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ( ರಿ )ಬೆಳ್ಳಾರೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಡಾ. ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ದಿನಾಂಕ 27. 9 .2024ರಂದು ಡಾ. ಶಿವರಾಮ ಕಾರಂತ ಕಾಲೇಜು ಬೆಳ್ಳಾರೆ ಯಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ ರವರು ಉದ್ಘಾಟನೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಮಾದವ ಗೌಡ ರವರು ಸ್ವಾಸ್ಥ ಸಂಕಲ್ಪದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಹದಿ ಹರೆಯದಲ್ಲಿ ದಾರಿ ತಪ್ಪುವ ದುಶ್ಚಟ ದುರಭ್ಯಾಸ ಗಳಿಂದ ಆಗುವ ದುಷ್ಪರಿಣಾಮ ಗಳ ಮಧ್ಯಪಾನ ಧೂಮಪಾನ ಡ್ರಗ್ಸ್ ಗಳು ಯಾವುದೆಲ್ಲ ದೇಹ ವನ್ನು ನಾಶ ಗೊಳಿಸುವ ಬಗ್ಗೇವಿವರವಾಗೀ ಮನ ಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಿದರು . ಡಾ. ಶಿವರಾಮ ಕಾರಂತ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಯಸ್ ಮೇಡಂ ರವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ವಲಯ ಶ್ರೀ ಆನಂದ ಗೌಡ ಪೆರಿಯಣ ಅಧ್ಯಕ್ಷರು ಜನಜಾಗೃತಿ ವೇದಿಕೆ ಬೆಳ್ಳಾರೆ ವಲಯ, ವಲಯ ಶ್ರೀಮತಿ ವೇದ ಎಚ್.ಶೆಟ್ಟಿ.ಅಧ್ಯಕ್ಷರು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಬೆಳ್ಳಾರೆ ವಲಯ. ಢಾ.ರಾಮಚಂದ್ರ ಕೆ.ಸಂಚಾಲಕರು lQAC.ಶ್ರೀ. ಗಿರೀಶ್ ಸಿ.ಆರ್.ಯೋಜನಾಧಿಕಾರಿಗಳು N S S. ಶ್ರೀ ಸುಂದರ ನಾಯ್ಕ.ಅಧ್ಯಕ್ಷರು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಪೆರುವಾಜೆ ಸೇವಪ್ರತಿನಿದಿಯವರಾದ ಶ್ರೀಮತಿ ಹರೀನಾಕ್ಷಿ ಶ್ರೀಮತಿ ಉಷಾ , ಪೆರುವಾಜೆ ಒಕ್ಕೂಟದ ಉಪಾಧ್ಯಕ್ಷರು ಅದ ಶ್ರೀಮತಿ ಸುನೀತಾ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಯಾದ ಕು ಶ್ರಾವ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಲಯ ಮೇಲ್ವಿಚಾರಕರು ಶ್ರೀಮತಿ ವಿಶಾಲ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ವಿನ್ಯಾಸ್ ವಂದಿಸಿದರು ವಿದ್ಯಾರ್ಥಿಗಳಾದ ಸ್ನೇಹ ಮತ್ತು ಚರಣ್ ಅವರು ಕಾರ್ಯಕ್ರಮ ದ ಅನಿಸಿಕೆ ವ್ಯಕ್ತ ಪಡಿಸಿದರು ಡ್ರಗ್ಸ್ ನಿಂದ ಆಗುವ ದುಷ್ಪಪರಿಣಾಮ ದ ಬಗ್ಗೇ ” ನಶೆಯೆಂಬ ನರಕ ” ಕಿರು ಚಿತ್ರ ವೀಕ್ಷಣೆ ಮಾಡಲಾಯಿತು
- Thursday
- November 28th, 2024