ಅನ್ಯ ಕೋಮಿನ ಯುವಕ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಸೆ.23 ರಂದು ಸುಳ್ಯ ನಗರ ಭಜರಂಗದಳ ಮುಖಂಡ ವರ್ಷಿತ್ ಮತ್ತು ಮಿಥುನ್ ಎಂಬ ಇಬ್ಬರು ಕಾರ್ಯಕರ್ತರನ್ನು ಹಲ್ಲೆ ಪ್ರಕರಣದ ಸೆಕ್ಷನ್ ಅಳವಡಿಸದೆ ಕೊಲೆಯತ್ನ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ ಎಂದು ಆರೋಪಿಸಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮುಂಜಾನೆ 9 ಗಂಟೆಯ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆಯ ಮೂಲಕ ಸಾಗಿ ಬಂದು ಕಲ್ಕುಡ ದೈವದ ಸನ್ನಿಧಿಯಲ್ಲಿ ಸೇರಿದರು. ಬಳಿಕ ಸೋಮಶೇಖರ ಪೈಕ ಮತ್ತು ವಿನಯ ಕುಮಾರ್ ಕಂದಡ್ಕರ ನೇತೃತ್ವದಲ್ಲಿ ಸುಳ್ಳು ಕೇಸು ದಾಖಲಿಸಿದವರ ವಿರುದ್ದ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.
ಬಳಿಕ ಮೆರವಣಿಗೆಯ ಮೂಲಕ ಬಸ್ಸು ನಿಲ್ದಾಣದ ಬಳಿಗೆ ಬರುತ್ತಿದ್ದಂತೆ ಆಕ್ರೋಶಗೊಂಡ ಕಾರ್ಯಕರ್ತರು ಠಾಣೆಯ ಗೇಟಿನ ಬಳಿಯಲ್ಲಿ ಜೈಕಾರ ಕೂಗಿ ಪೋಲಿಸ್ ಅಧಿಕಾರಿಯಾದ ಪ್ರಕಾಶ್ ವಿರುದ್ದ ಆಕ್ರೋಶ ಭರಿತರಾಗಿ ದಿಕ್ಕಾರ ಕೂಗ ತೊಡಗಿದರು. ಈ ಸಂದರ್ಭದಲ್ಲಿ ಎ ವಿ ತೀರ್ಥರಾಮ , ಹರೀಶ್ ಕಂಜಿಪಿಲಿ ಸೇರಿದಂತೆ ಇತರ ನಾಯಕರು ಕಾರ್ಯಕರ್ತರನ್ನು ಸಮಧಾನ ಪಡಿಸಿದರು . ಬಳಿಕ ಕಾರ್ಯಕರ್ತರ ಆಕ್ರೋಶದ ಹಿನ್ನೆಲೆಯಲ್ಲಿ ಠಾಣೆಯ ಗೇಟಿನ ಬಳಿಯಲ್ಲೆ ಪ್ರತಿಭಟನೆ ಆರಂಭಿಸಲಾಯಿತು ಪ್ರತಿಭಟನೆಯಲ್ಲಿ ಭಜರಂಗದಳ ಮುಖಂಡ ಹರಿಪ್ರಸಾದ್ ಎಲಿಮಲೆ ನಿನ್ನೆ ನಡೆದ ಘಟನೆಯ ಕುರಿತಾಗಿ ವಿವರಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಹಿಂದು ಕಾರ್ಯಕರ್ತರ ಮೇಲೆ ಪ್ರತಿಕಾರ ತೀರಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ಪೋಲಿಸ್ ಎಸ್ ಬಿ ಪ್ರಕಾಶ್ ರವರು ವೀಡಿಯೋ ಇದೆ ಎಂದು ಹೇಳುತ್ತಿದ್ದಾರೆ ಅದನ್ನು ತೋರಿಸಲಿ ಎಂದು ಬಹಿರಂಗವಾಗಿ ಸವಾಲು ಎಸೆದರು.
ಬಳಿಕ ಮಾತನಾಡಿದ ಹರೀಶ್ ಕಂಜಿಪಿಲಿ ಕಾರ್ಯಕರ್ತರು ಪೋಲಿಸ್ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ ಆದರೆ ಪೋಲಿಸರು ಕ್ರಮ ಜರುಗಿಸದೇ ಇರುವುದರಿಂದ ಈ ಘಟನೆ ನಡೆಯುವಂತಾಗಿದೆ ಅಲ್ಲದೆ ವಿದ್ಯಾರ್ಥಿನಿ ನೀಡಿದ ದೂರಿನ ಪ್ರಕಾರ ಅನ್ಯ ಕೋಮಿನ ಯುವಕನ ವಿರುದ್ದವು ಕ್ರಮ ಜರುಗಿಸಬೇಕಿತ್ತು. ಅದನ್ನು ಬಿಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾತ ಹೇಗೆ ಅಲ್ಲಿಂದ ನಾಪತ್ತೆಯಾದ ಮತ್ತು ಆತನನ್ನು ಸುಬ್ರಹ್ಮಣ್ಯದಿಂದಲೇ ಕರೆ ತಂದಿದ್ದರೆ ಈ ಘಟನೆ ಆಗುತ್ತಾ ಇರುತ್ತಿರಲಿಲ್ಲ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ಭರಿತರಾಗಿ ಮಾತನಾಡಿದರು. ಅಲ್ಲದೇ ಇದೀಗ ಕಾರ್ಯಕರ್ತರ ಮೇಲೆ ಕೋಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ ಇದು ಎಷ್ಟು ಸರಿಯಾದ ಕ್ರಮವೆಂದು ಪ್ರಶ್ನಿಸಿದರು. ಅಲ್ಲದೇ ಇಲ್ಲಿ ಓರ್ವ ಪ್ರಕಾಶ್ ಎಂಬ ಎಸ್.ಬಿ. ಹೊಯಿಗೆ ವ್ಯಾಪರಿಗಳಿಂದ ದುಡ್ಡು ಪಡೆಯುವ ಕೆಲಸ ಮಾಡುತ್ತಿದ್ದಾರೆ ಅದು ಅಲ್ಲದೇ ಮರ್ಕಂಜದಲ್ಲಿ ಮೊನ್ನೆ ಕಾಂಗ್ರೆಸ್ ಕಾರ್ಯಕರ್ತ ಕರೆ ಮಾಡಿದಾಗ ಹತ್ತು ಸಾವಿರ ನೀಡಬೇಕು ಎಂದು ಮರಳು ಸಾಗಾಟದ ಪಿಕಪ್ ನಲ್ಲಿದ್ದ ಮರಳನ್ನು ಇಳಿಸಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದರು. ಮುಸ್ಲಿಂ ಎಲ್ಲರೂ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರು ಮಾತ್ರ ಮುಸ್ಲಿಮರೇ ಎಂದು ಕಿಡಿ ಕಾರಿದರು . ಕಾರ್ಯಕರ್ತರಲ್ಲಿ ಆಕ್ರೋಶ ಇದೆ ಪೋಲಿಸ್ ಅಧಿಕಾರಿಗಳು ಒಂದು ವಾರಗಳ ಒಳಗೆ ಪ್ರಕಾಶ್ ವಿರುದ್ದ ಕ್ರಮ ಜರುಗಿಸಬೇಕು ಎಂದು ಹೇಳಿದರು .
ಬಿಜೆಪಿ ಮುಖಂಡ ತೀರ್ಥರಾಮ ಎ ವಿ ಮಾತನಾಡುತ್ತಾ ಸುಳ್ಯದ ಇತಿಹಾಸ ನಿಮಿಗೆಲ್ಲ ಗೊತ್ತಿದೆ ಹಾಗಾಗಿ ಇಲ್ಲಿ ಕೇಸ್ ಗಳಿಗೆ ಭಯ ಪಡುವವರು ಯಾರು ಇಲ್ಲಾ, ನಾವೆಲ್ಲ ಕೇಸ್ ಗಳನ್ನು ಹಾಕಿಸಿಕೊಂಡು ಬಂದವರೇ ಅಲ್ಲದೇ ಸುಳ್ಯದ ಕೆಲ ವರ್ಷಗಳ ಹಿಂದೆ ನಡೆದ ಘಟನೆ ನಿಮಗೆ ನೆನಪು ಇದೆ ಅಲ್ಲವೇ. ಇತ್ತೀಚೆಗೆ ಆರೋಪ ಹೊರಿಸಿದ್ದ ಕಾರ್ಯಕರ್ತರನ್ನು ವೇದಿಕೆಗೆ ತಂದು ನಿಲ್ಲಿಸಿದ್ದೇವೆ. ನೆನಪು ಇದೆಯಲ್ಲವೇ ಎಂದು ಹೇಳಿದರು . ಹಿಂದು ಸಮಾಜದ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ, ನೀವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕು ಹೊರತು ಕೈ ಗೊಂಬೆಗಳಾಗಿ ಕೆಲಸ ಮಾಡಬಾರದು ಎಂದು ಹೇಳಿದರು .
ಶಾಸಕಿ ಕು.ಭಾಗೀರಥಿ ಮುರುಳ್ಯ ಮಾತನಾಡಿ ಕಳ್ಳರನ್ನು ಹಿಡಿಯಬೇಕಾದ ಪೋಲಿಸರು ಕಾರ್ಯಕರ್ತರನ್ನು ಇಲ್ಲಸಲ್ಲದ ಆರೋಪ ಹೊರಿಸಿ ಜೈಲಿಗೆ ಅಟ್ಟುತ್ತಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನದ ಪ್ರಕಾರ ಕೆಲಸಗಳನ್ನು ಮಾಡಿ ಪೋಲಿಸ್ ಅಧಿಕಾರಿಗಳೇ ಎಂದು ಆಗ್ರಹಿಸಿದರು .ಅಲ್ಲದೇ ಅಧಿಕಾರಿಗಳಿಗೆ ಶಾಸಕಿಯಾಗಿ ನಾನೇ ಕರೆ ಮಾಡಿದಾಗ ಉತ್ತರಿಸದ ಅಧಿಕಾರಿಗಳು ಇಲ್ಲಿ ಇರುವುದು ಪ್ರಶ್ನಿಸಿದರು ಅಲ್ಲದೇ ಇಂತಹ ಗಂಭೀರವಾಗಿ ಆರೋಪ ಇರುವ ಪೋಲಿಸ್ ಪೇದೆ
ನನ್ನ ಕ್ಷೇತ್ರದಲ್ಲಿ ಇರುವುದು ಬೇಡ, ಮುಂದುವರೆದರೆ ನಾನೇ ಠಾಣೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತೆನೆ ಎಂದು ಹೇಳಿದರು .
ಹಿಂದೂ ಮುಖಂಡ ನವೀನ್ ನೆರಿಯ ಮಾತನಾಡಿ ಸುಳ್ಯ ಕಾರ್ಯಕರ್ತರ ತಾಕತ್ತು ಏನು ಎಂಬುವುದನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು. ನಿಮ್ಮ ಹೆಂಡತಿ ಮತ್ತು ತಂಗಿಯ ಮೇಲೆ ಕೈ ಇಡುತ್ತಿದ್ದರೆ ಏನು ಮಾಡುತ್ತಿದ್ದಿರಿ ಎಂದು ಹೇಳಿದರು . ಸಂವಿಧಾನ ಪ್ರಕಾರ ಕೆಲಸ ಮಾಡಿ ಎಂದು ಹೇಳಿದರು. ವಿದ್ಯಾರ್ಥಿನಿಗೆ ಕಿರುಕುಳ ನೀಡಿದಾತನನ್ನು ಆರೇಸ್ಟ್ ಮಾಡದೇ ಇದ್ರೆ ನಮಿಗೆ ಗೊತ್ತಿದೆ ಯಾವ ರೀತಿಯಲ್ಲಿ ಹೋರಾಟದ ಮಾಡಬೇಕು ಎಂಬುವುದು ಎಂದು ಹೇಳಿದರು . ಕೇಸರಿ ಶಾಲು ನಮ್ಮ ಯೂನಿಫಾರ್ಮ್ , ನಿಮಗೆ ಕಾಕಿ ಕೇವಲ 60 ವರ್ಷಗಳ ವರೆಗೆ ಮಾತ್ರ ಅದನ್ನು ನೆನಪಿನಲ್ಲಿಟ್ಟುಕೊಳ್ಳಿ, ಮತ್ತೆ ನಿಮಗೆ ನಾವೇ ರಕ್ಷಣೆ ಕೊಡುವುದು ಎಂದು ಅಧಿಕಾರಿಗಳಿಗೆ ಹೇಳಿದರು. ಕ್ರಮ ಜರುಗಿಸದೇ ಇದ್ದಲ್ಲಿ ಸುಳ್ಯವನ್ನು ಬಂದ್ ಮಾಡಿ ಠಾಣೆಗೆ ಬರುತ್ತೇವೆ ಎಂದು ಹೇಳಿದರು . ಪ್ರತಿಭಟನ ಸಭೆಯಲ್ಲಿ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯರು ಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಸುಭೋದ್ ಶೆಟ್ಟಿ ಮೇನಾಲ, ಸಂತೋಷ್ ಕುತ್ತಮೊಟ್ಟೆ, ವಿಕ್ರಮ ಅಡ್ಡಂಗಾಯ, ಎ.ಟಿ. ಕುಸುಮಾಧರ, ಜಗನ್ನಾಥ ಜಯನಗರ, ನಾರಾಯಣ ಶಾಂತಿನಗರ, ಮಹೇಶ ಉಗ್ರಾಣಿಮನೆ, ದಯಾನಂದ ಕುರುಂಜಿ, ಕೇಶವ ಬನ, ಪಿ.ಕೆ. ಉಮೇಶ್, ಹೇಮಂತ್ ಕಂದಡ್ಕ ಗಣೇಶ ಪಿಲಿಕಜೆ, ಪ್ರಭೋದ್ ಶೆಟ್ಟಿ ಮೇನಾಲ, ಪ್ರಕಾಶ್ ಯಾದವ್, ಅವಿನಾಶ್ ಕುರುಂಜಿ, ಲತೀಶ್ ಗುಂಡ್ಯ, ನವೀನ್ ಎಲಿಮಲೆ, ರಕ್ಷಿತ್, ಶಿವ ಪೂಜಾರಿ, ನಿಕೇಶ್ ಉಬರಡ್ಕ, ರೂಪೇಶ್ ಪೂಜಾರಿಮನೆ, ಪ್ರಶಾಂತ್ ಕಾಯರ್ತೋಡಿ, ರಾಜೇಶ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ, ಪ್ರಕಾಶ್ ಯಾದವ್ , ಚಿದಾನಂದ , ಸುನಿಲ್ ಕೇರ್ಪಳ, ಪ್ರಸಾದ್ ಕಾಟೂರು ,ಗಿರಿಧರ ನಾರಾಲು ,ಗುಣವತಿ ಕೊಲ್ಲಂತಡ್ಕ , ಸುರೇಶ್ ಕಣೆಮರಡ್ಕ, ದೇವಿಪ್ರಸಾದ್ ಅತ್ಯಾಡಿ, ಭಾನುಪ್ರಕಾಶ್ ದೊಡ್ಡತೋಟ, ಮನೋಜ್ ಮಾರುತಿ, ಕೌಶಲ್ ಸುಳ್ಯ, ನ.ಪಂ.ಸದಸ್ಯೆ ಕಿಶೋರಿ ಶೇಟ್, ದುರ್ಗಾವಾಹಿನಿಯ ಪ್ರೀತಿಕಾ, ಎ.ಬಿ.ವಿ.ಪಿ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.