ಅರಂತೋಡು: ನಿನ್ನೆ ಬೈಕ್ ಕದ್ದ ಕಳ್ಳ ಇಂದು ಮತ್ತೆ ಅರಂತೋಡಿನಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಇದೀಗ ವರದಿಯಾಗಿದೆ.
ಸೆ. 22 ರಂದು ಬೈಕ್ ನಲ್ಲಿ ಹೋಗುತ್ತಿದ್ದ ಶಂಕಿತ ವ್ಯಕ್ತಿಯನ್ನು ಕನಕಮಜಲು ಪರಿಸರದಲ್ಲಿ ಸ್ಥಳೀಯರು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತ ಬೈಕ್ ಕಳ್ಳನೆಂದು ತಿಳಿದಿದ್ದು, ಬಳಿಕ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಮತ್ತೆ ಅದೇ ವ್ಯಕ್ತಿ ಅರಂತೋಡಿನಲ್ಲಿ ಇದೇ ರೀತಿಯ ಬೈಕ್ ಕಳ್ಳತನಕ್ಕೆ ಮುಂದಾಗಿದ್ದು ಸ್ಥಳೀಯರು ಆತನನ್ನು ಹಿಡಿದು ಸಮೃದ್ಧಿ ಮಾರ್ಟ್ ಎದುರು ನಿಲ್ಲಿಸಿದ್ದಾರೆ. ಬೈಕ್ ಕದ್ದು ಪರಾರಿಯಾಗಲು ಪ್ರಯತ್ನ ಮಾಡುತ್ತಿರುವಾಗ ಅಲ್ಲಿ ನಿಂತಿದ್ದ ಸ್ಥಳೀಯರಾದ ಶರತ್ ಹಾಗೂ ಇತರರು ಅವನನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈತ ನೋಡಲು ಮಾನಸಿಕನಂತೆ ಕಂಡು ಬರುತ್ತಿದ್ದರು ನಿಜ ಏನೆಂಬುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೇ ಪೊಲೀಸರು ವಿಚಾರಣೆ ನಡೆಸಿ ಸುಲಭವಾಗಿ ಬಿಡುತ್ತಿದ್ದು, ಈ ಕಾರಣದಿಂದ ಆತ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿರಬಹುದು ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದು ಇನ್ನಾದರೂ ಪೋಲಿಸ್ ಇಲಾಖೆಯು ಎಚ್ಚೆತ್ತು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳದೇ ಹೋದಲ್ಲಿ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಬಹುದಾಗಿದ್ದು ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕಬೇಕಿದೆ ಪೋಲಿಸ್ ಇಲಾಖೆ ?