“ಕಬಡ್ಡಿ ಪಂದ್ಯಾಟವು ಗ್ರಾಮೀಣ ಮಟ್ಟದ ಕ್ರೀಡೆ. ಗ್ರಾಮೀಣ ಜನರು ಬಹಳ ಹಿಂದಿನಿಂದಲೂ ಈ ಕ್ರೀಡೆಯನ್ನು ಮೆಚ್ಚಿಕೊಂಡು ಸಾಂಸ್ಕೃತಿಕ ಕ್ರೀಡೆಯನ್ನಾಗಿ ಅಪ್ಪಿಕೊಂಡಿದ್ದಾರೆ. ಹಾಗೂ ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಹಳ್ಳಿಯಿಂದ ಆರಂಭವಾದ ಈ ಕ್ರೀಡೆ ಇಂದು ರಾಜ್ಯ, ರಾಷ್ಟ್ರ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿದೆ.
ಗುತ್ತಿಗಾರಿನಂತ ಗ್ರಾಮೀಣ ಪ್ರದೇಶದಲ್ಲಿ ಜನರು ಬಹಳ ಉತ್ಸುಕತೆಯಿಂದ ಕಬ್ಬಡಿ ಪಂದ್ಯಾಟಕ್ಕೆ ಅದ್ದೂರಿಯ ತಯಾರಿ ಮಾಡಿದ್ದಾರೆ, ಹಾಗೆಯೇ ಕ್ರೀಡಾಪಟುಗಳು ಕೂಡ ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಜಿ ನುಡಿದರು. ಅವರು ಗುತ್ತಿಗಾರಿನಲ್ಲಿ ಶುಕ್ರವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಗುತ್ತಿಗಾರು ಪಿ ಎಮ್ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ಆಶಾ ನಾಯಕ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯುಕೆ, ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವ ಗೌಡ ಕಾಂತಿಲ, ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಚೆನ್ನಮ್ಮ ಕೆ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಕೆ, ಪಿಎಂಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯ ಮುಖ್ಯೋಪಾಧ್ಯಾಯನಿ ಉಮಾವತಿ ಎನ್, ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ, ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸೂಪಿ ಪೆರಾಜೆ, ಇಸಿಓ ಸಂಧ್ಯಾ, ಪ್ರಾಥಮಿಕ ದೈಹಿಕ ಶಿಕ್ಷಣ ಸಂಘ ಅಧ್ಯಕ್ಷ ಧನಂಜಯ ಎನ್, ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ, ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಮಾಧವ ಬಿಕೆ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಪ್ರಸನ್ನ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಧನಲಕ್ಷ್ಮಿ, ಕಬಡ್ಡಿ ಪಂದ್ಯಾಟ ಸಂಘಟನಾ ಉಪಾಧ್ಯಕ್ಷ ದಿನೇಶ್ ಹಾಲೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲಕರ ವಿಭಾಗ ದಲ್ಲಿ 14 ತಂಡಗಳು ಹಾಗೂ ಬಾಲಕಿಯರು ವಿಭಾಗದಲ್ಲಿ 14 ತಂಡಗಳು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಭಾಗವಹಿಸಿದ್ದವು. ಅಂತೆಯೇ ಪ್ರೌಢಶಾಲಾ ವಿಭಾಗದಲ್ಲಿ ಕೂಡ ಬಾಲಕರ 7 ಹಾಗೂ ಬಾಲಕಿಯರ 7 ತಂಡಗಳು ಭಾಗವಹಿಸಲಿವೆ.
ವೇದಿಕೆಗೆ ಬರದ ಜನಪ್ರತಿನಿಧಿಗಳು: ಕರ್ನಾಟಕ ರಾಜ್ಯ ವಿಧಾನಪರಿಷತ್ತಿಗೆ ಚುನಾವಣೆ ನಿನ್ನೆ ತಾನೆ ಘೋಷಣೆಯಾಗಿದ್ದು ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವೊಬ್ಬ ಜನಪ್ರತಿನಿಧಿಗಳು ವೇದಿಕೆ ಏರಲಿಲ್ಲ. ಕೆಲವರಂತೂ ಸಭಾಂಗಣದಲ್ಲಿ ಕೂತು ವೀಕ್ಷಿಸಿದ್ದು ಉಂಟು.