
ಪದ್ಮನಾಭ ಅತ್ಯಾಡಿಯವರು ಪ್ರಸ್ತುತ ಗಾಂಧಿನಗರ ಕೆಪಿಎಸ್‌ನಲ್ಲಿ ಮುಖ್ಯಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 01-2-1965ರಲ್ಲಿ ಜನಸಿದರು. ಪ್ರಥಮವಾಗಿ ಇವರು ಸ.ಕಿ.ಪ್ರಾ ಶಾಲೆ ಪೈಂಬೆಚ್ಚಾಲಿನಲ್ಲಿ ಕರ್ತವ್ಯ ಆರಂಭಿಸಿದರು. 1993ರಲ್ಲಿ ಸ.ಹಿ.ಪ್ರಾ ಶಾಲೆ ಅಜ್ಜಾವರ, 2002ರಲ್ಲಿ ಸಿ.ಆರ್.ಪಿ ಆಗಿ ಅಜ್ಜಾವರ ಕ್ಲಸ್ಟರ್, 2007ರಲ್ಲಿ ಸಹ ಶಿಕ್ಷಕರಾಗಿ ಕೆ.ಪಿ.ಎಸ್ ಗಾಂಧಿನಗರ, 2011ರಲ್ಲಿ ಸಿ.ಆರ್.ಪಿಯಾಗಿ ಸುಳ್ಯ ಕ್ಲಸ್ಟರ್, 2014ರಲ್ಲಿ ಇಒ ಆಗಿ ಸುಳ್ಯ ಬಿಇಒ, 2019ರಲ್ಲಿ ಮುಖ್ಯ ಶಿಕ್ಷಕನಾಗಿ ಸ.ಹಿ.ಪ್ರಾ ಶಾಲೆ ಅಡ್ತಲೆ, 2020ರಲ್ಲಿ ಮುಖ್ಯಶಿಕ್ಷಕನಾಗಿ ಅಮೈಮಾಡಿಯಾರು ಹಾಗೂ ಪ್ರಸ್ತುತ ಗಾಂಧಿನಗರ ಕೆ.ಪಿ.ಎಸ್‌ನಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.