Ad Widget

ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಕೃಷ್ಣಾನಂತ ಶರಳಾಯರವರ ಪರಿಚಯ

ಸುಳ್ಯ ತಾಲೂಕಿನ ಅಜ್ಜಾವರ ಕ್ಲಸರಿನ ಸ.ಕಿ.ಪ್ರಾ.ಶಾಲೆ ದೊಡ್ಡೇರಿಯಲ್ಲಿ ಕಳೆದ 19 ವರ್ಷಗಳಿಂದಲೂ ಶಿಕ್ಷಕನಾಗಿ ಕೃಷ್ಣಾನಂತ ಶರಳಾಯರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕರ್ತವ್ಯ ನಿರ್ವಹಿಸುವ ಶಾಲೆಯು 1983 ರಲ್ಲಿ ಸ್ಥಾಪನೆಗೊಂಡು ಇದೀಗ 40 ವರ್ಷಗಳ ಇತಿಹಾಸವನ್ನು ಹೊಂದಿದೆ. ಇತ್ತೀಚೆಗೆ ಕಟ್ಟಡವು ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿತ್ತು. ಈ ಹಂತದಲ್ಲಿ ಊರವರ ಹಾಗೂ ಎಸ್.ಡಿ.ಎಂ.ಸಿಯವರ ಸತತ ಪ್ರಯತ್ನದಿಂದ ಶಾಸಕರ ಶಿಫಾರಸ್ಸಿನೊಂದಿಗೆ ಜಿಲ್ಲಾ ಪಂಚಾಯತ್ ಅನುದಾನದೊಂದಿಗೆ ಶಾಲೆಯನ್ನು ದುರಸ್ತಿಮಾಡುವ ಸಲುವಾಗಿ 2023-24 ನೇ ಸಾಲಿನಲ್ಲಿ ಕಟ್ಟಡ ದುರಸ್ತಿಯು ಪ್ರಾರಂಭಗೊಂಡಿತು. ಹೀಗೆ ಕಟ್ಟಡ ನಿರ್ಮಿಸಲು ನೀರಿನ ಅಭಾವ ಎದುರಾದಾಗ ಇವರು ಶಾಲೆಗೆ ಸುಸಜ್ಜಿತ ಕಟ್ಟಡದ ಕಾಮಗಾರಿಗಾಗಿ ಸ್ವಂತ ಖರ್ಚಿನಿಂದ ಒಂದು ಲಕ್ಷ ರೂಗಳನ್ನು ಖರ್ಚುಮಾಡಿ ಒಂದು ಹೊಸಬೋರ್‌ವೆಲ್ ಕೊರೆಸಿದರು. ನಂತರ ದೊರೆತ ನೀರನ್ನು ಎಸ್.ಡಿ.ಎಂ.ಸಿ ಮತ್ತು ಊರಿನವರೆಲ್ಲರ ಸಹಕಾರ ಪಡೆದು ಹೊಸ ಪಂಪು ಹಾಕಿ ನೀರು ಮೇಲೆ ಬರುವ ಹಾಗೆ ಮಾಡಿ ಸದೃಢವಾದ ಕಟ್ಟಡವನ್ನು ಕಟ್ಟಲು ಶ್ರಮಿಸಿದ್ದಾರೆ. ಪ್ರಸ್ತುತ ಅದೇ ನೀರನ್ನು ಶಾಲೆಯ ದೈನಂದಿನ ಅಡುಗೆಗೂ ಬಳಸಿಕೊಂಡು ಮಕ್ಕಳೆಲ್ಲರೂ ಶಿಕ್ಷಕರೂ ಸೇರಿ ಎಲ್ಲರೂ ಬಳಸುತ್ತಿದ್ದಾರೆ.
ಗ್ರಾಮೀಣ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ 2024-25 ನೇ ಸಾಲಿನಲ್ಲಿ ನನ್ನ ಶಾಲೆಗೆ ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಬೇಕಾದ ನೋಟ್ಸ್ ಬುಕ್, ಪೆನ್ನು,ಪೆನ್ಸಿಲ್, ಸ್ಟೇಲ್, ಡ್ರಾಯಿಂಗ್ ಪುಸ್ತಕ, ಕಲರ್ ಪೆನ್ಸಿಲ್ ಬಾಕ್ಸ್, ಜಾಮಿಟ್ರಿ ಬಾಕ್ಸ್, ಮಗ್ಗಿ ಪುಸ್ತಕ, ರಬ್ಬರ್, ಕಟ್ಟರ್, ಬ್ಯಾಗ್, ಕೊಡೆ, ಹೀಗೆ ಪ್ರತಿ ವಿದ್ಯಾರ್ಥಿಗೆ ತಲಾಒಂದು ಸಾವಿರ ರೂಪಾಯಿಯ ಕೊಡುಗೆಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಉಚಿತವಾಗಿ ವಿತರಿಸಿದ್ದಾರೆ. ಉಳಿದ ತರಗತಿಯ ಮಕ್ಕಳಿಗೂ ಬೇಕಾದ ಉಪಕರಣಗಳನ್ನು ವಿತರಿಸಿದ್ದಾರೆ. ಹೀಗೆ ೨೦೨೪-೨೫ ನೇ ಸಾಲಿಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿದ್ದಾರೆ. 11 ಮಕ್ಕಳು ಇದ್ದಲ್ಲಿ ಈಗ 15 ಮಕ್ಕಳು ಪ್ರಸ್ತುತ ಕಲಿಯುತ್ತಿದ್ದಾರೆ.

ಈ ಹಿಂದೆ ಕೊರೊನಾ ಸಮಯದಲ್ಲಿ ನನ್ನ ಶಾಲೆಯಲ್ಲೇ ಕಲಿತ ವಿಕಲಚೇತನ ವಿದ್ಯಾರ್ಥಿಯು 9ನೇ ತರಗತಿಯಲ್ಲಿ ಓದುತ್ತಿದ್ದಾಗ ಆನ್‌ಲೈನ್ ಕ್ಲಾಸಿಗೆ ಮೊಬೈಲ್ ಇಲ್ಲದೇ ಇದ್ದ ಪರಿಸ್ಥಿತಿಯನ್ನುಮನಗಂಡು ಬಡ ವಿದ್ಯಾರ್ಥಿಯಾದ ಆತನಿಗೆ ಸ್ವಂತ ಖರ್ಚಿನಿಂದ ಆಂಡ್ರಾಯ್ಡ್ ಮೊಬೈಲ್‌ನ್ನು ತೆಗೆದುಕೊಟ್ಟು ಆತನ ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದಾರೆ. ಪ್ರಸ್ತುತ ಆ ವಿದ್ಯಾರ್ಥಿಯು ಪಿಯುಸಿ ತೇರ್ಗಡೆಯಾಗಿರುತ್ತಾನೆ.

ಅದೇ ಸಮಯದಲ್ಲಿ ಸುಳ್ಯದ ವಾರಪತ್ರಿಕೆ ‘ಸುದ್ದಿ ಬಿಡುಗಡೆ’ ಯಲ್ಲಿ ಪ್ರಕಟಗೊಂಡ “ಬಡ ವಿದ್ಯಾರ್ಥಿನಿಗೆ ಮೊಬೈಲ್ ಬೇಕಾಗಿದೆ” ಎಂಬ ವರದಿಯನ್ನು ನೋಡಿ ಪತ್ರಿಕೆಯವರನ್ನು ಸಂಪರ್ಕಿಸಿ ನನ್ನ ಸ್ವಂತ ಖರ್ಚಿನಿಂದ ಭೂಮಿಕಾ ಎನ್ನುವ ಬಡ ವಿದ್ಯಾರ್ಥಿನಿಗೂ ಸಹ ಆಂಡ್ರಾಯ್ಡ್ ಮೊಬೈಲನ್ನು ತೆಗೆದುಕೊಟ್ಟು ಆಕೆಯ ವಿದ್ಯಾಭ್ಯಾಸಕ್ಕೂ ಸಹಕರಿಸಿದ್ದಾರೆ.

ಈ ನಡುವೆ ಜೊಕ್ಕಾಡಿಯ ಸತ್ಸಸೇವಾ ಸಂಸ್ಥೆಯವರಿಂದ ನಮ್ಮ ಶಾಲೆಗೆ ಹೊಸ ಕಂಪ್ಯೂಟರ್ ಮತ್ತು ಯುಪಿಎಸ್‌ನ್ನು ಸಹ ಕೊಡುಗೆಯಾಗಿ ಪಡೆದುಕೊಳ್ಳುವಲ್ಲಿ ಶ್ರಮವಹಿಸಿದ್ದಾರೆ. ಅದೇ ರೀತಿ ಸ್ಥಳೀಯರಿಂದ ಶಾಲೆಗೆ ಮಕ್ಕಳ ತೂಕದ ಯಂತ್ರವನ್ನು ಸಹ ಪಡೆಯುವಲ್ಲಿ ಶ್ರಮಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!