ಸರಕಾರದ ಆದೇಶದಂತೆ ಕೃಷಿ ಪಂಪ ಸೆಟ್ಟುಗಳ ಆರ್ ಆರ್ ನಂಬರಿಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ. ದಿನಾಂಕ 23/8/24 ಶುಕ್ರವಾರದಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಹಾಗೂ ಮೆಸ್ಕಾಂ ಸುಳ್ಯ ಉಪವಿಭಾಗದ ವತಿಯಿಂದ ವಿವೇಕಾನಂದ ವೃತ್ತ ಬಳಿ ಇರುವ ಸಮೃದ್ಧಿ ಸಂಕೀರ್ಣ ಕಚೇರಿಯಲ್ಲಿ ಕೃಷಿಕರ ಆರ್ ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆ ಮತ್ತು ಹೆಸರು ಬದಲಾವಣೆ ಕಾರ್ಯಕ್ರಮ ನಡೆಯಲಿದೆ. ದಿನಾಂಕ 25.08.24 ರಂದು ಕೊನೆಯ ದಿನ ಆಗಿದ್ದು ಕೃಷಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ ಪೈಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Friday
- November 22nd, 2024