Ad Widget

ಐವರ್ನಾಡು ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ – ಪ್ರತಿಭಾ ಪುರಸ್ಕಾರ

ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆ.15 ರಂದು ನಡೆಯಿತು. ದಿವಂಗತ ಐತಪ್ಪ ಗೌಡ ನಿವೃತ್ತ ಅಧ್ಯಾಪಕರು ಮತ್ತು ಶ್ರೀಮತಿ ದಿವಂಗತ ಶಿವಮ್ಮನವರು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ದತ್ತಿ ನಿಧಿ ರೂಪಾಯಿ 240, ದಿವಂಗತ ಐತಪ್ಪ ಗೌಡ ನಿವೃತ್ತ ಅಧ್ಯಾಪಕರು ತಮ್ಮ ಮಾತಾಪಿತರಾದ ಪಲ್ಲತಡ್ಕ ಅಣ್ಣು ಗೌಡ ಮತ್ತು ದಿವಂಗತ ಶೇಷಮ್ಮನವರ ಸವಿನೆನಪಿಗಾಗಿ ಸ್ಥಾಪಿಸಿದ ಸ್ಮಾರಕ ದತ್ತಿನಿಧಿ ರೂ.1050, ಸುಳ್ಯ ತಾಲೂಕು ಕಳಂಜ ಗ್ರಾಮದ ಧೂಮಣ್ಣ ರೈಯವರ ಮಗನಾದ ವಿಶ್ವನಾಥ ರೈ ಕಳಂಜ ಇವರು ತಮ್ಮ ಮಾತೃಶ್ರೀ ಶ್ರೀಮತಿ ದಿ. ದುಗ್ಗಮ್ಮನವರ ಹೆಸರಿನಲ್ಲಿ ಸ್ಥಾಪಿಸಿದ ಸ್ಮಾರಕ ದತ್ತಿನಿಧಿ ರೂ.500, ದಿ|ಎಂ. ಪುರುಷೋತ್ತಮ ಗೌಡ ನಿವೃತ್ತ ಶಿಕ್ಷಣ ಸಹಾಯಕರು ಸುಳ್ಯ ತಾಲೂಕು ಮತ್ತು ಶ್ರೀಮತಿ ಎಂ.ಪಿ ಶಿವಮ್ಮ ನಿವೃತ್ತ ಅಧ್ಯಾಪಿಕೆ ಮಡ್ತಿಲ ಇವರು ಮಡ್ತಿಲ ದಿ|ಸೀತಮ್ಮನವರ ಸವಿನೆನಪಿಗಾಗಿ ಸ್ಮಾರಕ ದತ್ತಿನಿಧಿ ರೂ.600, ದಿ ಕುಂಞ ರಾಮನ್ ಫಾರೆಸ್ಟರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ದಿ|ಮಾದೇವಿಯವರ ಸವಿನೆನಪಿಗಾಗಿ ಅವರ ಪುತ್ರ ಬಿ.ಕೆ.ಶಶಿಧರ ನಿಡುಬೆ, ಐವರ್ನಾಡು ಇವರು ನೀಡುವ ದತ್ತಿನಿಧಿ ರೂ.12000, ದಿ|ಬಾಬು ಭಂಡಾರಿ ಲಾವಂತಡ್ಕ ಅವರ ಸ್ಮರಣಾರ್ಥ ಅವರ ಧರ್ಮಪತ್ನಿ ಶ್ರೀಮತಿ ಜಾನಕಿ ಲಾವಂತಡ್ಕ ಹಾಗೂ ಅವರ ಪುತ್ರ ಧರ್ಮಪಾಲ ಲಾವಂತಡ್ಕ ಮತ್ತು ಮನೆಯವರು ನೀಡುವ ಕ್ರೀಡಾ ಪ್ರತಿಭಾ ಪುರಸ್ಕಾರ ದತ್ತಿನಿಧಿ ರೂ.1000, ಎಂ ವೀರಪ್ಪಗೌಡ ಮೊಟ್ಟೆ ಮನೆ ನಿವೃತ್ತ ಮುಖ್ಯೋಪಾಧ್ಯಾಯರು ನೀಡಿದ ದತ್ತಿನಿಧಿ ರೂ. 200ನ್ನು ನಿಯಮಾನುಸಾರ ಪ್ರತಿಭಾವಂತ ಮಕ್ಕಳಿಗೆ ವಿತರಿಸಲಾಯಿತು. ವೇದಿಕೆಯಲ್ಲಿ ಎಸ್. ಡಿ ಎಂ ಸಿ ಅಧ್ಯಕ್ಷರಾದ ನವೀನ ಕುಮಾರ್ ಅರಳಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದತ್ತಿನಿಧಿ ಸ್ಥಾಪಕರಾದ ಬಿ.ಕೆ.ಶಶಿಧರ ನಿಡುಬೆ, ಐವರ್ನಾಡು ಪೋಷಕರ ನಿಧಿಯ ಅಧ್ಯಕ್ಷರಾದ ಶ್ರೀ ನಾಗಪ್ಪ ಗೌಡ ಪಾಲೆಪ್ಪಾಡಿ, ಎಸ್.ಡಿ. ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಗೀತಾ, ನಿವೃತ್ತ ಮುಖ್ಯ ಶಿಕ್ಷಕ ಎಂ. ವೀರಪ್ಪ ಗೌಡ, ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ. ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು.ಶ್ವೇತಾ ಮತ್ತು ತಂಡ ಪ್ರಾರ್ಥನೆ ಮಾಡಿದರು. ಶ್ರೀಮತಿ ಸರಸ್ವತಿಯವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಮಾಲತಿ ಪ್ರತಿಭಾವಂತ ಮಕ್ಕಳ ಪಟ್ಟಿಯನ್ನು ವಾಚಿಸಿದರು. ನಂತರ ಸಂಚಾಯಿಕಾ ಖಾತೆಯಲ್ಲಿ ಹೆಚ್ಚು ಹಣ ಉಳಿತಾಯ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು. ಸಹಶಿಕ್ಷಕರಾದ ಅರವಿಂದ.ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಸಹಶಿಕ್ಷಕರಾದ ಭವಾನಿ ಶಂಕರ.ಕೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ಶ್ರೀಮತಿ ಹೇಮಲತಾ, ಶ್ರೀಮತಿ ಗುಣಶ್ರೀ, ಶ್ರೀಮತಿ ಶುೃತಿ ಸಹಕರಿಸಿದರು. ಮಧ್ಯಾಹ್ನದ ರುಚಿಯಾದ ಭೋಜನವನ್ನು ಪೋಷಕರು ನೀಡಿ ಸಹಕರಿಸಿದರು. ಚಿದಾನಂದ ಉದ್ದಂಪಾಡಿ ಮತ್ತು ಮನೆಯವರು ಪಾಯಸವನ್ನು ನೀಡಿ ಸಹಕರಿಸಿದರು. ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!