ರಕ್ಷಣೆಯ ಭಾರವನ್ನು ಪ್ರೀತಿ ಕಾಳಜಿಯಿಂದ ಹೆಗಲು ನೀಡಲು ತಯಾರಾಗಿರುವಂತಹ ಮನಸ್ಸು ಉಳ್ಳವರು ಯಾರೇ ಆಗಲಿ ಆ ಬಂಧನವೇ ಸಹೋದರತ್ವ.
ಮಾಧವನ ಕೈಗೆ ಗಾಯವಾಗಿ ರಕ್ತ ಸೋರುತ್ತಿರಲು ದ್ರೌಪದಿಯು ತನ್ನ ಬಟ್ಟೆಯ ಹರಿದು ಮಾಧವನ ಕೈಗೆ ಕಟ್ಟುತ್ತಾಳೆ. ರಕ್ತ ಹರಿಯುವುದು ನಿಂತ ಮೇಲೆ ಮಾಧವನು ವಚನ ನೀಡಿದ ನಿನ್ನನ್ನು ಕಾಪಾಡುವ ಹೊಣೆ ನನ್ನದೆಂದು. ಅಂದಿನಿಂದ ಅದೇ ಬಟ್ಟೆ ಸಹೋದರತ್ವದ ಬಂಧನವಾಯಿತು.
ತನ್ನ ಸಹೋದರಿಯನ್ನು ಸದಾ ಕಣ್ಣ ದೃಷ್ಟಿಯಲ್ಲಿ ಕಾಪಾಡಲು ಅಸಾಧ್ಯವಾದಾಗ ಆಕೆಯ ಕೈಗೆ ಕಟ್ಟಿರುವ ರಕ್ಷೆ ಎಂಬ ನಂಬಿಕೆಯ ದಾರದ ಅಗೋಚರ ಶಕ್ತಿಯಿಂದ ಆತ್ಮ ಸ್ಥೈರ್ಯವನ್ನು ಹೊಂದುತ್ತಾಳೆ ಹಾಗೂ ತನ್ನನ್ನು ತಾನೇ ಕಾಪಾಡಿ ಕೊಳ್ಳುವ ಸಾಮರ್ಥ್ಯವನ್ನು ಪಡೆಯಬಹುದು.
ಹಿಂದೂ ರಾಷ್ಟ್ರದಲ್ಲಿ ಇರುವ ಸಹೋದರತ್ವದ ಮಾನ್ಯತೆ ಯಾವ ದೇಶದಲ್ಲೂ ಕಂಡುಬರುವುದಿಲ್ಲ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ.
ಹಿಂದಿನವರು ರಕ್ಷೆಯನ್ನು ವರ್ಷದಲ್ಲಿ ಒಮ್ಮೆ ಕಟ್ಟಿದರೆ ಅದನ್ನು ಬಿಚ್ಚುವುದು ಇನ್ನೊಂದು ವರ್ಷ ಹೊಸ ರಕ್ಷೆಯನ್ನು ಧರಿಸುವಾಗ. ಆದರೆ ಈಗ ಸ್ವಚ್ಛತೆ ನೆಪದಲ್ಲಿ ಮಕ್ಕಳ ಕೈ ರಕ್ಷೆಯನ್ನು ನಮ್ಮ ಕೈಯಾರೆ ನಾವೇ ಬಿಚ್ಚಿಡುತ್ತೇವೆ. ನಮ್ಮ ಸಂಸ್ಕೃತಿಯನ್ನು ಆಚರಿಸುವಲ್ಲಿ ನಾವು ಎಷ್ಟು ಎಡವುತ್ತಿದ್ದೇವೆ ಎಂಬ ಸಣ್ಣ ಅರಿವು ಕೂಡ ಜ್ಞಾನವಂತರಿಗೆ ತಿಳಿಯುವುದಿಲ್ಲ.
ಅಣ್ಣ ತಂಗಿ ಮನೆಯಲ್ಲಿ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರ ಎದುರಲ್ಲಿ ತಂಗಿಗೆ ಸಿಹಿ ತಿನ್ನಿಸಿ ವಿಶೇಷ ಕಾಳಜಿಯ ಪ್ರೀತಿಯ ರಕ್ಷೆಯನ್ನು ಕೈಗೆ ಕಟ್ಟುತ್ತಾನೆ. ಹಾಗೆಯೇ ಅಣ್ಣನಿಗೆ ರಾಖಿ ಕಟ್ಟಿ ಸಾವಿರ ರೂಪಾಯಿಯನ್ನು ಅಂದು ಮಾತ್ರ ಕೇಳದೆ ಕೊಡುವ ಹಣವನ್ನು ಜೋಪಾನ ಮಾಡುತ್ತಾಳೆ.
ಆದರೆ ಅಣ್ಣ- ತಂಗಿ ಎಂಬುದು ಪವಿತ್ರ ಬಂಧನವಾಗಿದೆ. ವಾಸ್ತವದಲ್ಲಿ ಮನುಷ್ಯ ಸುಖವನ್ನು ಮಾತ್ರ ಬಯಸುತ್ತಾನೆ ಆದರೆ ಪ್ರಕೃತಿ ಮೌನವಾಗಿ ನಮ್ಮನ್ನೇ ದೃಷ್ಟಿಸುತ್ತಿದ್ದಾಳೆ. ನಾವು ಹೊಸದಾಗಿ ಯಾವುದೇ ಆಚರಣೆಗಳನ್ನು ಮಾಡಬೇಕಿಲ್ಲ ನಮ್ಮ ಹಿರಿಯರು ಜೋಪಾನ ಮಾಡಿ ನಮಗೆ ಎರವಲು ಕೊಟ್ಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳೋಣ.
ನಾವು ಸಣ್ಣವರಾಗಿದ್ದಾಗ ಕೇಸರಿ (ತ್ಯಾಗದ ಸಂಕೇತ) ಬಣ್ಣದ ರಕ್ಷೆಯನ್ನೇ ಧರಿಸುತ್ತಿದ್ದೆವು ಆದರೆ ತಂತ್ರಜ್ಞಾನ ಮುಂದುವರಿದಂತೆ ವ್ಯವಸ್ಥೆ ಕುಂಠಿತವಾಗುತ್ತದೆ ಬಣ್ಣ ಬಣ್ಣದ ಪ್ಲಾಸ್ಟಿಕ್ ರಕ್ಷೆಯನ್ನು ಧರಿಸುವಷ್ಟು ಕೆಟ್ಟ ಸ್ಥಿತಿ ನಮಗೆ ಒದಗಿ ಬಂದಿರುವುದು ಮಾತ್ರ ವಿಪರ್ಯಾಸ.1 ದಿನ ಅಥವಾ 1 ವಾರ ಮಾತ್ರ ಧರಿಸಲು ಯೋಗ್ಯವಾಗಿರುವ ರಕ್ಷೆಯನ್ನು ಧರಿಸಿದರೆ ಮತ್ತೆಲ್ಲಿ ಬಂಧನ ಉಳಿಯುತ್ತದೆ. ಅದಕ್ಕೆ ಆಗಿರಬಹುದೇನೋ ಅನ್ಯಾಯ ಅತ್ಯಾಚಾರ ಹೆಚ್ಚಾಗಿ ಸಂಭವಿಸುತ್ತಿರುವುದು. ಪ್ರಕೃತಿ ಸ್ವರೂಪ ಹೆಣ್ಣು ಮಕ್ಕಳೇ ಬದಲಾಗಬೇಕಿದೆ ಕೈ ತುಂಬಾ ಗಾಜಿನ ಬಳೆ, ಹಣೆಗೆ ಕುಂಕುಮ, ತಲೆಗೆ ಹೂ, ಮೈ ಮುಚ್ಚುವ ಬಟ್ಟೆ ಇವೆಲ್ಲವೂ ಶೂನ್ಯದತ್ತ ಸಾಗಿದಂತೆ ನಮ್ಮ ಅಂತ್ಯವನ್ನು ಪ್ರಕೃತಿ ನಿರ್ಭಯವಾಗಿ ದಹಿಸುತ್ತಿದ್ದಾಳೆ.
ಉಡುಗೆ -ಅಡುಗೆ ಎಲ್ಲಾ ವಿಧದಲ್ಲೂ ಪಾಶ್ಚಾತ್ಯ ಬದುಕಿನ ಶೈಲಿಯನ್ನು ಕಳಚಿ ನಮ್ಮ ಸಂಸ್ಕೃತಿ ಯನ್ನು ಆಚರಿಸೋಣ
ಎಲ್ಲರಿಗೂ ಶ್ರಾವಣ ಮಾಸದ ರಕ್ಷಾಬಂಧನ ಹಬ್ಬದ ಶುಭಾಶಯಗಳು
✍️ಅಕ್ಷತಾ ನಾಗನಕಜೆ