Ad Widget

ಕೊಲ್ಲಮೊಗ್ರು : ಶಿವತೀರ್ಥ ದೊಡ್ಡಣ್ಣ ಶೆಟ್ಟಿ ಕೆರೆಯ ಬಳಿ ಸ್ವಾತಂತ್ರ್ಯ ದಿನಾಚರಣೆ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಶಿವತೀರ್ಥ ದೊಡ್ಡಣ್ಣ ಶೆಟ್ಟಿ ಕೆರೆಯ ಬಳಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕೆರೆ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮಾಧವ ಚಾಂತಾಳ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ, ಉಪಾಧ್ಯಕ್ಷರಾದ ಅಶ್ವಥ್ ಯಳದಾಳು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪುಷ್ಪರಾಜ್ ಪಡ್ಪು, ಶ್ರೀಮತಿ ಶಿವಮ್ಮ ಕಟ್ಟ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ್ ಗಡಿಕಲ್ಲು, ಲೀಲಾವತಿ ಶಿರೂರು, ವಸಂತ ಕೊರಂಬಟ, ನವ್ಯಾ ನಡುಗಲ್ಲು, ಮಮತಾ ಚಾರ್ಮತ, ಆಶಿಶ್ ಕಟ್ಟೆಮನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚೆನ್ನಪ್ಪ ನಾಯ್ಕ್.ಬಿ ಸ್ವಾಗತಿಸಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್.ಕೆ ಕಡ್ತಲ್ ಕಜೆ ವಂದಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!