ಜಯನಗರ ಮಿಲಿಟರಿ ಗ್ರೌಂಡ್ ನಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ ಯನ್ನೂ ಸಂಭ್ರಮಾಚರಣೆಯಿಂದ ನಡೆಸಲಾಯಿತು.
ಧ್ವಜಾರೋಹಣವನ್ನು ಭಾರತೀಯ ಮಿಲಿಟರಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಸುಳ್ಯದ ಹೆಮ್ಮೆಯ ಮಾಜಿ ಸೈನಿಕರಾದ ಭವಾನಿ ಶಂಕರ್ ನೆರವೇರಿಸಿ ಶುಭಾಶಯ ಕೋರಿದರು ಸುಳ್ಯದ ಯುವಕ ಯುವತಿಯರು ಶಿಕ್ಷಣದ ಜೊತೆಗೆ ಸೇನೆಯ ಕಡೆ ಒಲವು ತೋರಿಸಿ ಸುಳ್ಯದ ಪುಣ್ಯ ಭೂಮಿಯಿಂದ ಅತೀ ಹೆಚ್ಚು ಸೈನಿಕರು ಮೂಡಿ ಬರಬೇಕಾಗಿದೆ. ಆಯಾ ನಿಟ್ಟಿನಲ್ಲಿ ಸುಳ್ಯ ದ ಹೆಸರನ್ನು ಅಜರಾಮರ ಆಗುವಂತೆ ಮಾಡಬೇಕಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆಯ ಸದಸ್ಯರು, ವಿದ್ಯಾರ್ಥಿನಿಯರು ,ಹಿರಿಯರು. ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು