Ad Widget

ಆಲೆಟ್ಟಿ ರಸ್ತೆಯ ಗುರುಂಪು ಬಳಿ ಜೀಪಿಗೆ ಬೈಕ್ ಡಿಕ್ಕಿ – ಅಪಘಾತದ ರಭಸಕ್ಕೆ ಜೀಪು ಪಲ್ಟಿ – ಹಲವರಿಗೆ ಗಾಯ

ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕೊಂದು ಡಿಕ್ಕಿಯಾಗಿ ಬೈಕ್‌ ಮತ್ತು ಜೀಪು ಪಲ್ಟಿಯಾಗಿ ಹಲವರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.

ಜೀಪಿನಲ್ಲಿ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಅಪಘಾತ ಸಂಭವಿಸಿದ ಪರಿಣಾಮವಾಗಿ ಜೀಪು ಪಲ್ಟಿಯಾಗಿದೆ. ಬೈಕ್‌ ಸವಾರ ಆಲೆಟ್ಟಿಯ ಕಂಟ್ರಾಕ್ಟರ್ ಶಶಿಧರನ್ ಎಂದು ತಿಳಿದು ಬಂದಿದೆ. ಗಾಯಗೊಂಡ ಬೈಕ್ ಸವಾರ ಹಾಗೂ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!