Ad Widget

ಬೆಳ್ಳಾರೆ ಟೌನ್‌ ರೋಟರಿ ಕ್ಲಬ್ಬಿಗೆ ನೂತನ ಸಾರಥ್ಯ



ಅಧ್ಯಕ್ಷರಾಗಿ ಚಂದ್ರಶೇಖರ ರೈ, ಕಾರ್ಯದರ್ಶಿ ಎ.ಕೆ.ಮಣಿಯಾಣಿ, ಕೋಶಾಧಿಕಾರಿಯಾಗಿ ಕೇಶವಮೂರ್ತಿ ಆಯ್ಕೆ

2024-25ನೇ ಸಾಲಿಗೆ ‌ಬೆಳ್ಳಾರೆ ಟೌನ್ ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿ ರೊ| ಚಂದ್ರಶೇಖರ ರೈ ಬಜನಿ, ಕಾರ್ಯದರ್ಶಿಯಾಗಿ ರೊ| ಎ.ಕೆ. ಮಣಿಯಾಣಿ, ಕೋಶಾಧಿಕಾರಿಯಾಗಿ ರೊ| ಕೇಶವಮೂರ್ತಿ, ನಿಕಟಪೂರ್ವಾಧ್ಯಕ್ಷರಾಗಿ ರೊ| ಶಶಿಧರ್‌, 25-26ರ ನಿಯೋಜಿತ ಅಧ್ಯಕ್ಷರಾಗಿ ರೊ| ವಿಶ್ವನಾಥ, ಸಾರ್ಜೆಂಟ್‌ ಅಟ್‌ ಆರ್ಮ್ಸ್‌ ಆಗಿ ರೊ| ಬಾಲಕೃಷ್ಣ ಮಡ್ತಿಲ, ಸಂಘ ಸೇವೆ ನಿರ್ದೇಶಕರಾಗಿ ರೊ| ರವೀಂದ್ರ ಗೌಡ, ವೃತ್ತಿ ಸೇವೆ ನಿರ್ದೇಶಕರಾಗಿ ರೊ|
ನಾಗೇಶ್‌ ಕುಲಾಲ್‌, ಸಮಾಜ ಸೇವೆ ನಿರ್ದೇಶಕರಾಗಿ ರೊ| ನವೀನ್‌ ಕುಮಾರ್‌ ರೈ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ರೊ| ಸತ್ಯನಾರಾಯಣ, ಯುವ ಸೇವೆ ನಿರ್ದೇಶಕರಾಗಿ ರೊ| ಪ್ರಸಾದ್‌, ಮೆಂಬರ್ಶಿಪ್‌ ಡೆವಲಪ್ಮೆಂಟ್‌ ಚೇರ್ಮೆನ್‌ ಆಗಿ ರೊ| ಪದ್ಮನಾಭ ಬೀಡು, ರೋಟರಿ ಫೌಂಡೇಶನ್‌ ಚೇರ್ಮೆನ್‌ ಆಗಿ ರೊ| ಪ್ರಭಾಕರ ಆಳ್ವ, ಪಬ್ಲಿಕ್‌ ಇಮೇಜ್‌ ಚೇರ್ಮೆನ್‌ ಆಗಿ ರೊ| ಕರುಣಾಕರ ಆಳ್ವ, ಡಿಸ್ಟ್ರಿಕ್ಟ್‌ ಪ್ರಾಜೆಕ್ಟ್‌ ಚೇರ್ಮೆನ್‌ ಆಗಿ ರೊ| ಆರಿಫ್‌, ಲರ್ನಿಂಗ್‌ ಫೆಸಿಲಿಟೇಟರ್‌ ಆಗಿ ರೊ| ಶ್ಯಾಮಸುಂದರ ರೈ ಆಯ್ಕೆಯಾಗಿದ್ದಾರೆ.

ನೂತನ ತಂಡದ ಪದಗ್ರಹಣ ಕಾರ್ಯಕ್ರಮವು ಜು. 27 ರಂದು ಸಂಜೆ ಗಂಟೆ 7-00ಕ್ಕೆ ದೇವಿ ಹೈಟ್ಸ್‌ನಲ್ಲಿ ನಡೆಯಲಿದೆ. ಪೂರ್ವ ಜಿಲ್ಲಾ ಗವರ್ನರ್‌ ರೊ| ಆರ್.‌ ಎಸ್‌. ನಾಗರ್ಜುನ್‌ ಪದಪ್ರದಾನವನ್ನು ನೆರವೇರಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಹಾಯಕ ಗವರ್ನರ್‌ ರೊ| ವಿನಯಕುಮಾರ್‌, ಝೋನಲ್‌ ಲೆಫ್ಟಿನೆಂಟ್‌ ರೊ| ವಿಶ್ವನಾಥ ನಡುತೋಟ ಹಾಗೂ ಸುಳ್ಯ ರೋಟರಿ ಕ್ಲಬ್‌ ಅಧ್ಯಕ್ಷೆ ರೊ| ಯೋಗಿತಾ ಗೋಪಿನಾಥ್‌ ರವರು ಭಾಗವಹಿಸಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!