ಸುಳ್ಯ ತಾಲೂಕು ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕದ ವತಿಯಿಂದ ಕಥಾ ರಚನೆ ಮತ್ತು ಕವನ ರಚನಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಜು.13ರಂದು ಪ್ರಶಸ್ತಿ ವಿತರಣಾ ಕಾರ್ಯಕ್ರಮ ಗುತ್ತಿಗಾರು ಸ.ಪ.ಪೂ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಪ್ರಾಥಮಿಕ, ಎರಡು ಪ್ರೌಢ ಶಾಲೆ ಹಾಗೂ ಪದವಿಪೂರ್ವ ತರಗತಿಗಳ 180 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಕ್ರಪ್ಪಾಡಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಪ್ರಾಚಾರ್ಯೆ ಶ್ರೀಮತಿ ಚೆನ್ನಮ್ಮ ಭಾಗವಹಿಸಿ ಬಹುಮಾನ ವಿತರಣೆ ಮಾಡಿದರು. ವೇದಿಕೆಯಲ್ಲಿ ಘಟಕದ ಕೋಶಾಧಿಕಾರಿ ನಿವೃತ್ತ ಪ್ರಾಧ್ಯಾಪಕ ಪ್ರಭಾಕರ ಕಿರಿಭಾಗ, ಹಾಗು ನಿರ್ದೇಶಕರಾದ ಲ|ಕುಶಾಲಪ್ಪ ತುಂಬತ್ತಾಜೆ, ಲ|ಬಿಟ್ಟಿ ನೆಡುನೀಲಂ, ಪೂರ್ಣಿಮಾ, ಸಕ್ರಿಯವಾಗಿ ಭಾಗವಹಿಸಿದರು. ರಮೇಶ ಮೆಟ್ಟಿನಡ್ಕ ಆಶಯ ಗೀತೆ ಹಾಡಿದರು ಹಾಗು ಕಾರ್ಯದರ್ಶಿ ರೂಪವಾಣಿ ವಂದಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ನೆಲ್ಸನ್ ಕ್ಯಾಸ್ಟಲಿನೋ ಕಾರ್ಯಕ್ರಮ ನಿರೂಪಿಸಿದರು. ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲ್ ಶಾಲು ಹೊದಿಸಿ ಪ್ರಶಸ್ತಿ ಪತ್ರ, ಬಹುಮಾನಗಳನ್ನು ವಿತರಿಸಿದರು.