Ad Widget

ಬಾಳಿಲ : ವಿದ್ಯಾರ್ಥಿ ಸರಕಾರದ ಪದಗ್ರಹಣ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ 2024 –25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ಜು.02ರಂದು ನಡೆಯಿತು. ವಿದ್ಯಾರ್ಥಿ ಸರಕಾರದ ರಾಜ್ಯಪಾಲರು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಯಶೋಧರ ಎನ್ ಸಮಾರಂಭದಲ್ಲಿ ಭಾಗವಹಿಸಿ ಸಭಾಪತಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಂಪುಟ ದರ್ಜೆಯ ಸಚಿವರು ಮತ್ತು ಸಹಾಯಕ ಸಚಿವರುಗಳಿಗೆ ಶಾಲಾ ಸಂವಿಧಾನದಂತೆ ಪಂಚ ಭಾಷೆಗಳಾದ ಸಂಸ್ಕೃತ, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತುಳು ಭಾಷೆಗಳಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ರಾಜ್ಯಪಾಲರ ನೆಲೆಯಿಂದ ಮುಖ್ಯೋಪಾಧ್ಯಾಯರು ಮಾತನಾಡುತ್ತಾ ಶಾಲಾ ಸಂವಿಧಾನದ ರಕ್ಷಣೆ, ವಿದ್ಯಾರ್ಥಿ ಸರಕಾರದ ಕರ್ತವ್ಯ ,ಶಾಲೆಯ ವ್ಯವಸ್ಥೆ ಮತ್ತು ಜವಾಬ್ದಾರಿಯುತ ವಿದ್ಯಾರ್ಥಿಯಾಗಿ ಪ್ರತಿಯೊಬ್ಬರು ಶಾಲೆಯ ನಿಯಮದಂತೆ ನಡೆದುಕೊಳ್ಳಬೇಕಾದ ಅಗತ್ಯತೆಯನ್ನು ವಿವರಿಸಿದರು. ವಿಪಕ್ಷ ನಾಯಕಿ , ಉಪನಾಯಕ ಮತ್ತು ವಿಪಕ್ಷ ಸದಸ್ಯರಿಗೆ ಸಭಾಪತಿಯಾದ ಕುಲದೀಪ್ ಜಿ. ಎನ್ (10 ಬಿ)ಇವರು ಪಂಚಭಾಷೆಗಳಲ್ಲಿ ಪ್ರತಿಜ್ಞೆಯನ್ನು ಬೋಧಿಸಿದರು. ಮುಖ್ಯಮಂತ್ರಿಯಾದ ಜಶ್ಮಿ ಎಸ್ ಸಿ (10 ಬಿ) ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯವನ್ನು ಮಂಡಿಸಿದರು. ವಿಪಕ್ಷ ನಾಯಕಿ ಕ್ಷಮಾ (10 ಎ) ವಂದನಾ ನಿರ್ಣಯವನ್ನು ಅನುಮೋದಿಸಿದರು. ಮುಖ್ಯಮಂತ್ರಿಯವರು ವಿವಿಧ ಖಾತೆಗಳನ್ನು ಸಂಪುಟ ದರ್ಜೆ ಸಚಿವರಿಗೆ ಹಂಚಿಕೆ ಮಾಡಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ವಿಪಕ್ಷ ನಾಯಕಿ ಸರಕಾರದ ಕಾರ್ಯಕ್ರಮಗಳಿಗೆ ಪೂರ್ಣ ಪ್ರಮಾಣದ ಬೆಂಬಲವನ್ನು ತನ್ನ ಭಾಷಣ ದಲ್ಲಿ ಘೋಷಿಸಿದರು. ಸಭಾಪತಿಯವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading