Ad Widget

ಅಕ್ವಾ ಇಂಜಿನಿಯರ್‍ಸ್ ಪ್ರೈವೇಟ್ ಲಿಮಿಟೆಡ್ ಸುಳ್ಯದಲ್ಲಿ ಶುಭಾರಂಭ

ಬೆಂಗಳೂರು ಅಕ್ವಾ ಸಲ್ಯೂಶನ್ ಇಂಜಿನಿಯರ್‍ಸ್ ಪ್ರೈವೇಟ್ ಲಿಮಿಟೆಡ್ ಇದರ ಸುಳ್ಯದ ಶಾಖೆಯು ಜೆಪಿ ಬಿಲ್ಡಿಂಡ್ ಅಂಬೆಟೆಡ್ಕದಲ್ಲಿ ಜೂ.೩೦ರಂದು ಶುಭಾರಂಭಗೊಂಡಿತು.

. . . . . . . . .




ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯದ ವರ್ತಕ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ರವರು ಉದ್ಘಾಟಿಸಿದರು. ದೀಪ ಪ್ರಜ್ವಲನೆಯನ್ನು ದಾಮೋದರ ಗೌಡ ಕುಯಿಂತೋಡು ಮತ್ತು ಕೆ.ಆರ್ ಗಂಗಾಧರ್ ನಿವೃತ್ತ ಪ್ರಾಂಶುಪಾಲರು, ಎನ್ ಎಮ್ ಪಿ ಯು ಅರಂತೋಡು ಇವರು ನೆರವೇರಿಸಿದರು.


ಮುಖ್ಯ ಅತಿಥಿಗಳಾಗಿ ಜಯಪ್ರಕಾಶ್ ಕೆ, ಅಧ್ಯಕ್ಷರು ಜೆ.ಸಿ ಚಾರಿಟೇಬಲ್ ಟ್ರಸ್ಟ್ ಸುಳ್ಯ, ಗುರುಪ್ರಸಾದ್ ಅಧ್ಯಕ್ಷರು ಜೆ.ಸಿ.ಐ ಛೇಂಬರ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳು ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಚೌಟಾಜೆ ಅಕ್ವಾ ಸಲ್ಯೂಶನ್ ಇಂಜಿನಿಯರ್‍ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಹಿಸುವ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಬಿ.ಆರ್ ಪದ್ಮಯ್ಯ, ದಿನೇಶ್ ಮಡಪ್ಪಾಡಿ, ಲತಾ ಪ್ರಸಾದ್, ನೆಡಿಂಜಿ ವಿಜಯ, ಸುಬ್ರಾಯ ಕದಿಕಡ್ಕ, ಶೇಷಪ್ಪ ಚೌಟಾಜೆ, ಕುಶಾಲಪ್ಪ ಚೌಟಾಜೆ, ಶ್ರೀಮತಿ ಕಲಾ ಶೇಷಪ್ಪ, ಚೌಟಾಜೆ ಲಕ್ಷ್ಮಣ, ಪಿಗ್ಮಿ ಸಂಗ್ರಾಹಕ ವೆಂಕಟ್ರಮಣ ಚೌಟಾಜೆ, ಕುಶಾಲಪ್ಪ ಬೊಳ್ಳೂರು, ಗಿರೀಶ್ ಕಲ್ಲಗದ್ದೆ, ಲೋಕೇಶ್ ಚೌಟಾಜೆ, ಕಛೇರಿ ವ್ಯವಸ್ಥಾಪಕ ಹಿಮಕರ ಎಂ ಶುಭಹಾರೈಸಿದರು. ಜಯರಾಮ ಚೌಟಾಜೆ ಮತ್ತು ಶ್ರೀಮತಿ ವಾರಿಜಾ ಜಯರಾಮ ಚೌಟಾಜೆ ಬಂದವರನ್ನು ಸ್ವಾಗತಿಸಿ ವಂದನಾರ್ಪಣಾ ಗೈದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading