ಜಾಲ್ಸೂರಿನಿಂದ ಮಂಡೆಕೋಲು ಸಂಪರ್ಕಿಸುವ ಪಂಜಿಕಲ್ಲು ತೂಗುಸೇತುವೆಯ ಮೇಲ್ಭಾಗದ ಸಿಮೆಂಟಿನ ಸ್ಲ್ಯಾಬ್ ಗಳು ಬಿರುಕು ಬಿಟ್ಟಿದ್ದು ಅಪಾಯ ಆಹ್ವಾನಿಸುತ್ತಿದೆ. ಇದರ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶವಿರುವುದರಿಂದ ಸ್ಲ್ಯಾಬ್ ಗಳು ಬೇಗ ಬಿರುಕು ಬಿಟ್ಟಿರಬಹುದು ಎನ್ನಲಾಗಿದೆ. ಮಳೆಗಾಲವಾದ್ದರಿಂದ ಪಯಸ್ವಿನಿ ಹೊಳೆ ತುಂಬಿ ಹರಿಯುತ್ತಿದ್ದು, ಅಪಾಯ ಸಂಭವಿಸುವ ಮೊದಲು ಆದಷ್ಟೂ ಶೀಘ್ರ ದುರಸ್ತಿ ಪಡಿಸುವುದು ಒಳಿತು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
- Thursday
- November 21st, 2024