ಸುಳ್ಯ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸುಳ್ಯ ನೇತೃತ್ವದಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ ಆಚರಣೆಯು ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ ಜರುಗಿತು. ಕಾರ್ಯಕ್ರಮ ಸಭಾ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಿ ದೀಪ ಬೆಳಗಿ , ಪುಸ್ಪಾರ್ಚನೆಗೈದು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಸುಳ್ಯ ತಾಲೂಕು ಅತೀ ಹೆಚ್ಚು ಗೌಡ ಸಮುದಾಯದ ಜನತೆ ಇರುವ ತಾಲೂಕು ಇಂತಹ ತಾಲೂಕಿನಲ್ಲಿ ಇಂತಹ ಸಾಂಕೇತಿಕವಾಗಿ ಅಲ್ಲ ಇಂತಹ ಮಹಾತ್ಮರ ಕಾರ್ಯಕ್ರಮಗಳನ್ನು ಭಹಳಷ್ಟು ವಿಜ್ರಂಭಣೆಯಿಂದ ಮಾಡಬೇಕು, ಅಲ್ಲದೇ ಕೆಂಪೇ ಗೌಡರ ಮಾದರಿಯಲ್ಲಿ ಕೈ ಕಾಲುಗಳು ಹೋದಲ್ಲಿ ಎಲ್ಲ ನಮ್ಮ ಸಾಧನೆಗಳನ್ನು ಮಾಡಬಹುದು ಎಂದು ಹೇಳಿದರು. ತಹಾಶೀಲ್ದಾರ್ ಮಂಜುನಾಥ್ ಜಿ ನಾಡ ಪ್ರಭು ಕೆಂಪೇಗೌಡರ ವ್ಯಕ್ರಿತ್ವದ ಕುರಿತಾಗಿ ಮಾತನಾಡಿ ನಾಡಿನ ಸಮಸ್ತ ಜನತೆಗೆ ಶುಭಹಾರೈಸಿದರು. ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಅರೆಭಾಷೆ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ , ಯುವ ಗೌಡ ಸಂಘದ ಅಧ್ಯಕ್ಷರಾದ ಚಂದ್ರಕೋಲ್ಚಾರ್ , ಸಂಜೀವ ಕುದ್ಪಾಜೆ ಕನ್ನಡ ಪ್ರಾಧ್ಯಾಪಕರು ಎನ್ ಎಂ ಸಿ ಸುಳ್ಯ , ತಹಾಶೀಲ್ದಾರ್ ಮಂಜುನಾಥ್ ಜಿ , ಇ ಒ ರಾಜಣ್ಣ , ಕಾಲೇಜು ಪ್ರಾಂಶುಪಾಲೆ ದಯಾಮಣಿ ಉಪಸ್ಥಿತರಿದ್ದರು.
- Thursday
- November 21st, 2024