ಯುವಕನೊಬ್ಬನನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಎಳೆದು ಹಾಕಿದ ಘಟನೆ ನಡೆದಿದ್ದು ವೀಡಿಯೋ ವೈರಲ್ ಆಗಿದೆ.
ಸುಬ್ರಹ್ಮಣ್ಯದ ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಸ್ವಾಗತಿಸಲು ಹೋಗುವ ಸಲುವಾಗಿ ನಿಂತಿತ್ತು. ಈ ವೇಳೆ ಒಂದಿಬ್ಬರು ಪೊಲೀಸರು ಕೂಡ ಆನೆಯ ಬಳಿಯಲ್ಲಿ ನಿಂತು ಪೋಟೋ ತೆಗೆಯಲು ಬಂದಿದ್ದರು.
ಇದೇ ವೇಳೆಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರ ರೂಂ ಬಾಯ್ ಆನೆಯ ಹತ್ತಿರ ಬಂದಿದ್ದು ತಕ್ಷಣ ಆನೆ ತನ್ನ ಸೊಂಡಿಲಿನಿಂದ ಎಳೆದು ಹಾಕಿರುವುದಾಗಿ ತಿಳಿದು ಬಂದಿದೆ. ಈತ ಮದ್ಯಪಾನ ಸೇವಿಸಿ ಬಂದಿರುವುದಕ್ಕೆ ಆನೆ ಈ ರೀತಿ ವರ್ತಿಸಿದೆ ಎನ್ನಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಗೆ ಕೆಲವೇ ಸಮಯದ ಮೊದಲು ಈ ಘಟನೆ ನಡೆದಿದೆ.
- Wednesday
- December 4th, 2024