ಸುಳ್ಯ: ಸುಳ್ಯ ತಾಲೂಕಿನಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜೆಜೆಎಂ ಕುಡಿಯುವ ನೀರಿನ ಕುರಿತಾದ ಸಮಸ್ಯೆಗಳು ಗಮನಕ್ಕೆ ಬರುತ್ತಿದ್ದಂತೆ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ನಡೆಸಲಾಯಿತು.
ಜೆಜೆಎಂ ನಲ್ಲಿ ಸಂಪೂರ್ಣ ಅವ್ಯವಹಾರ ಆಗಿದೆ ಗ್ರಾ.ಪಂ ಅಧ್ಯಕ್ಷರು ಸದಸ್ಯರುಗಳ ಆರೊಪ:
ಸಭೆ ಆರಂಭವಾಗುತ್ತಿದ್ದಂತೆ ಎಂಜಿನಿಯರ್ ವಿಭಾಗದ ಅಧಿಕಾರಿಗಳು ಪ್ರಥಮ ಹಂತದ ಏಳು ಪಂಚಾಯತ್ ಗಳು ಮತ್ತು ದ್ವಿತೀಯ ಹಂತದ ಪಂಚಾಯತ್ ಗಳ ಮಾಹಿತಿ ನೀಡಲು ಮುಂದಾದರು. ಈ ಸಂದರ್ಭದಲ್ಲಿ ಪ್ರತಿ ಗ್ರಾಮಗಳ ಕುರಿತು ಮಾಹಿತಿ ಒದಗಿಸಬೇಕು ಎಂಬ ಆಗ್ರಹ ಕೇಳಿ ಬಂದಾಗ ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಲ್ಲಿ ಒಂದೊಂದು ಗ್ರಾಮಗಳ ಹೆಸರು ಹೇಳಿ ಅಲ್ಲಿನ ಸಮಸ್ಯೆಗಳು ಮತ್ತು ಪಂಚಾಯತ್ ಗೆ ವರ್ಗಾವಣೆ ಮಾಡಲಾಗಿದೆಯೇ ಎಂಬೆಲ್ಲ ಪ್ರಶ್ನೆಗಳನ್ನು ಎತ್ತಿದರು. ಈ ಸಂದರ್ಭದಲ್ಲಿ ಪ್ರಥಮ ಹಂತದ ಗ್ರಾ.ಪಂಗಳಾದ ಅರಂತೋಡು ತೊಡಿಕಾನ, ಕಲ್ಮಡ್ಕ , ಮಂಡೆಕೋಲು , ಮರ್ಕಂಜ , ಬಾಳಿಲ , ಹೆಸರು ಪ್ರಸ್ತಾಪ ಪಡಿಸುತ್ತಿದ್ದಂತೆ ಅಧ್ಯಕ್ಷರುಗಳು ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೆ ಗೈದರು. ಅಲ್ಲದೆ ಈ ಕಾಮಗಾರಿಯ ಕುರಿತು ಸಂಪೂರ್ಣ ಮಾಹಿತಿ ಯಾರಿಗೆ ಇದೆ? ಯಾರಿಗೆ ನೀಡಿದ್ದಿರಿ? ಒಟ್ಟಾರೆ ತಾಲೂಕಿನಲ್ಲಿ ಎಷ್ಟು ಅನುಧಾನ ಬಂದಿದೆ? ಅಲ್ಲದೆ ಕೊಳವೆ ಬಾವಿ , ಟ್ಯಾಂಕ್ , ಪೈಪ್ ಲೈನ್ ಗಳ ಕುರಿತ ಪ್ರಶ್ನೆಗಳ ಸುರಿಮಳೆಯನ್ನೆ ಕಲ್ಮಡ್ಕ , ಅರಂತೋಡು ತೊಡಿಕಾನ ಪಂಚಾಯತ್ ಅಧ್ಯಕ್ಷರುಗಳು ಪ್ರಶ್ನಿಸಿದಾಗ ಅಧಿಕಾರಿಗಳು ಇಲ್ಲಿ ಇಲ್ಲಾ ಕಛೇರಿಯಲ್ಲಿ ಇದೆ, ಮಾಹಿತಿ ನೀಡುತ್ತೆವೆ ಎಂದರು. ಅಲ್ಲದೇ ಈ ಸಂದರ್ಭದಲ್ಲಿ ಹೆಚ್ಚವರಿ ಅನುದಾನವನ್ನು ಗ್ರಾ.ಪಂ ಬಳಸಲಾಗಿದೆ ಇದನ್ನು ಹೇಗೆ ಸರಿ ಹೊಂದಿಸುವಿರಿ ಎಂದು ಪ್ರಶ್ನಿಸಿದಾಗ ಅದನ್ನು ಗ್ರಾಮದಿಂದಲೇ ಮಾಡಬೇಕು ಎಂದು ಉತ್ತರಿಸಿದರು.
ಅಧ್ಯಕ್ಷರುಗಳಲ್ಲಿ ದೂರಿನ ಪಟ್ಟಿಯೇ ಸಿದ್ದ:
ತಾಲೂಕು ಪಂಚಾಯತ್ ಅನುದಾನದಲ್ಲಿ ಕಲ್ಮಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ಹದಿನಾಲ್ಕು ಸೋಲಾರ್ ದೀಪ ಅಳವಡಿಸಲಾಗಿದೆ. ಆದರೆ ಹಾಕಿದ ದಿನದಿಂದ ಅದು ಚಾಲನೆಯಲ್ಲಿ ಇಲ್ಲಾ ಅದನ್ನು ಪಂಚಾಯತ್ ಗೆ ಕೂಡ ವರ್ಗಾವಣೆ ಮಾಡಿಲ್ಲಾ ಅದಕ್ಕೆ ಗ್ಯಾರಂಟಿ ಕಾರ್ಡ್ ಮತ್ತು ಸೋಲಾರ್ ಅಳವಡಿಸಲು ಕೆಲವು ನಿಯಮಗಳು ಇವೆ. ಇವೆಲ್ಲವನ್ನು ಗಾಳಿಗೆ ತೂರಿದ್ದು ಇದನ್ನು ಇನ್ನು ಹೇಗೆ ಸರಿ ಪಡಿಸುತ್ತಿರಾ ಎಂದು ಪ್ರಶ್ನಿಸಿದರು. ಅಲ್ಲದೇ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ದಿನಾಂಕ ನಿಗದಿ ಪಡಿಸಿ ಗ್ರಾ.ಪಂ ಸದಸ್ಯರುಗಳು ಊರವರಿಗೆ ಎಂಜಿನಿಯರ್ ಮತ್ತು ಕಾಂಟ್ರಾಕ್ಟ್ ದಾರರು ತೆರಳಿ ಸಂಪೂರ್ಣ ಮಾಹಿತಿ ಒದಗಿಸಬೇಕು. ಅಲ್ಲದೇ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಸುಪರ್ದಿಗೆ ವಹಿಸಿ ನೀಡುವಾಗ ಒಡಂಬಡಿಕೆ , ಎಷ್ಟೀಮೇಟ್ ಗಳನ್ನು ನೀಡಿ ಅವರಿಗೆ ಹಸ್ತಾಂತರಿಸಿ ಎಂದು ಖಡಕ್ ಆಗಿ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ಕೊರತೆ ನೀಗಿಸಿ ಶಾಸಕರಿಗೆ ಒತ್ತಾಯ:
ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರುಗಳು ಶಾಸಕರಿಗೆ ಪಂಚಾಯತ್ ಗಳಲ್ಲಿ ಸಿಬ್ಬಂದಿ , ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಗಳ ಕೊರತೆ ಇದೆ. ಅದನ್ನು ಸರಕಾರದ ಗಮನಕ್ಕೆ ತಂದು ಬಗೆ ಹರಿಸಬೇಕು. ಅಲ್ಲದೇ ವಿದ್ಯುತ್ ಸಮಸ್ಯೆಗಳು ಅತೀ ಹೆಚ್ಚು ಕಾಡುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು ಇದಕ್ಕೆ ಉತ್ತರಿಸುತ್ತಾ ಸುಳ್ಯಕ್ಕೆ ಒಟ್ಟಾರೆ 80 ಲೈನ್ ಮ್ಯಾನ್ ಗಳ ಅವಶ್ಯಕತೆ ಇದೆ. ಆದರೆ ನಮ್ಮಲ್ಲಿ ಇರುವುದು ಕೇವಲ 30 ಎಂದು ಉತ್ತರಿಸಿದರು . ಅಲ್ಲದೇ ಜೆಜೆಎಂ ಕುರಿತಾಗಿ ಎಲ್ಲಾ ಗ್ರಾಮಗಳಲ್ಲಿ ಒಂದೇ ತರನದ ಸಮಸ್ಯೆಗಳು ಲಾಣಿಸುತ್ತಿರುವ ಕಾರಣ ಆಯಾ ಗ್ರಾ.ಪಂ ತೆರಳಿ ಸಮಗ್ರ ಮಾಹಿತಿ ನೀಡಬೇಕು ಎಂದು ಹೇಳಿದರು. ಅಲ್ಲದೇ ಕಳಪೆಯಾಗಿರುವ ಕಾಮಗಾರಿಯನ್ನು ಗುರುತಿಸಿ ತಕ್ಷಣವೇ ಅದನ್ನು ಏನು ಯಾವ ರೀತಿಯಲ್ಲಿ ಮಾಡಬೇಕು ಎಂಬೆಲ್ಲಾ ಪ್ರಶ್ನೆಗಳು ಇವೆ ಇದಕ್ಕೆ ಜುಲೈ ಅಂತ್ಯದಲ್ಲಿ ಮತ್ತೊಮ್ಮೆ ಸಭೆ ಕರೆಯಲಾಗುವುದು, ಆ ಸಂದರ್ಭದಲ್ಲಿ ಎಲ್ಲರಿಗು ಸರಿಯಾದ ಮಾಹಿತಿ ಸಿಗಬೇಕು ಮತ್ತು ಅಂದು ಈ ಸಮಸ್ಯೆಗಳ ಪರಿಹಾರದ ಕುರಿತ ಮಾಹಿತಿಗಳು ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭಾವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ , ಉಪತಾಹಶೀಲ್ದಾರ್ ಮಂಜುನಾಥ್ , ಎಂಜಿನಿಯರ್ ರುಕ್ಕು , ತಾಲೂಕು ಪಂಚಾಯತ್ ಮ್ಯಾನೇಜರ್ ಉಪಸ್ಥಿತರಿದ್ದರು. ಗ್ರಾ.ಪಂ ಅಧ್ಯಕ್ಷರುಗಳ ಪ್ರಶ್ನೆಗಳಿಗೆ ಮಣಿಕಂಠ ಮತ್ತು ಜನಾರ್ದನ ಉತ್ತರಿಸಿದರು.