Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಪ್ಲಾಟಿನಮ್ ಅವಾರ್ಡ್



ಸುಬ್ರಹ್ಮಣ್ಯ ಜೂನ್ 22 : ಅಂತರಾಷ್ಟ್ರೀಯ ಸಂಸ್ಥೆಯಾದ ಸುಬ್ರಹ್ಮಣ್ಯ ರೋಟರಿ ಕ್ಲಬ್ 2023-24ನೇ ಸಾಲಿನಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಸಮಾಜ ಸೇವೆಗೆ ರೋಟರಿ ಜಿಲ್ಲೆ  31 81 ಇದರ ಅತ್ಯುನ್ನತ  ಪ್ರಶಸ್ತಿ ಪ್ಲಾಟಿನಮ್ ಅವಾರ್ಡ್ ಲಭಿಸಿದೆ.
ಜೂನ್ 8 ಹಾಗೂ 9ರಂದು ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಕೋಡಿಬೈಲ್ ಹಾಗೂ ಕಾರ್ಯದರ್ಶಿ ಮೋಹನದಾಸ್ ಎಣ್ಣೆ ಮಜಲ್ ಅವರು ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಿಕ್ರಮದತ್ತ, ನಿಕಟಪೂರ್ವ ಗವರ್ನರ್ ಪ್ರಕಾಶ್ ಕಾರಂತ್, ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಜಿಲ್ಲಾ ಪದಾಧಿಕಾರಿಗಳು, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!