Ad Widget

ಕೆವಿಜಿ ಐಪಿಎಸ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಚರಣೆ

ಕೆವಿಜಿ ಐಪಿಎಸ್ ಶಾಲೆಯಲ್ಲಿ ಜೂನ್ 21 ಅಂತರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಶಾಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಶುಭ ಹಾರೈಸಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ  ಭಾಸ್ಕರ್ ಬೆಳಗದ್ದೆ  ಮುಖ್ಯ ಅತಿಥಿಯಾಗಿ, ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾಸ್ಕರ್ ಸರ್ ಅವರು ಮಕ್ಕಳಿಗೆ ಯೋಗದ ಮಹತ್ವವನ್ನು ಸ್ವಸ್ಥ ಜೀವನಕ್ಕೆ  ಯೋಗದ ಅವಶ್ಯಕತೆ ಯನ್ನು ತಿಳಿಯಪಡಿಸಿದರು. ಯೋಗ ಮಾಡಿ ಆರೋಗ್ಯ ಪಡೆಯಿರಿ ಎಂಬ ಸಲಹೆಯನ್ನು ನೀಡಿದರು. ಸದೃಢ ಆರೋಗ್ಯದಿಂದ ಸದೃಢ ದೇಶವನ್ನು ಕಟ್ಟಲು ಸ್ವಾಸ್ಥ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ ಎಂಬ ಮಾತನ್ನು ಪ್ರಾಂಶುಪಾಲರಾದ ಅರುಣ್ ಕುಮಾರ್ ಪ್ರಸ್ತುತಪಡಿಸಿದರು. ಶಾಲಾ ಯೋಗ ಗುರುಗಳಾದ ಸಂತೋಷ್ ಮುಂಡಕಜೆ, ಪ್ರಶ್ಮಿಜ ಕೆಎಫ್ ,ದೈಹಿಕ ಶಿಕ್ಷಕರಾದ ಆಶಾ ಜ್ಯೋತಿ, ತೀರ್ಥವರ್ಣ ಬಳ್ಳಡ್ಕ ಇವರ ಮಾರ್ಗದರ್ಶನದಲ್ಲಿ  ಮಕ್ಕಳಿಗೆ ಹಲವಾರು ಯೋಗ ಭಂಗಿಗಳನ್ನು ಹಮ್ಮಿಕೊಳ್ಳಲಾಯಿತು, ಎಂಟನೇ ತರಗತಿಯ ವಿದ್ಯಾರ್ಥಿನಿಯಾದ ನಿಯಾ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿ, ಮಾನ್ವಿ ದಿನದ ಮಹತ್ವವನ್ನು ಪ್ರಸ್ತುತಪಡಿಸಿ, ಪ್ರಫುಲ್ಲ ಸುರೇಶ್ ಯೋಗಾಸನದ ಪ್ರಯೋಜನಗಳನ್ನು ಹಾಗೂ ಲಕ್ಷ್ಮಣ್ ಅಂಬೆಕಲ್ಲು ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!