“ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ಅಂಕಗಳ ಆಧಾರದಿಂದ ಅಳೆಯಲಾಗದು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಸ್ವಂತಿಕೆಯಿಂದ ಕಲಿತಾಗ ಯಶಸ್ಸು ಕಾಣಬಹುದು. ಪ್ರಾಮಾಣಿಕವಾದ ಜೀವನದಿಂದ ನಿಖರವಾದ ಗುರಿ ತಲುಪಲು ಸಾಧ್ಯವಿದೆ” ಎಂದು ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಹೇಳಿದರು.
ಅವರು ಜೂ .19 ರಂದು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಂತಿಮ ಬಿ ಎ ವಿದ್ಯಾರ್ಥಿ ವಿಜೇತ್, ಅಂತಿಮ ಬಿ. ಕಾಂ. ಹವ್ಯಶ್ರೀ, ಸಂತೋಷ್, ದಿವ್ಯಶ್ರೀ, ಶ್ರೀಪ್ರಸಾದ್, ಅಂತಿಮ ಬಿ ಎಸ್ಸಿ ಯ ಪ್ರತೀಕ್ಷ ಕೆ ಆರ್, ಅಂತಿಮ ಬಿ. ಬಿ. ಎ ವಿದ್ಯಾರ್ಥಿ ಮೇಘನಾ ಕಾಲೇಜು ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸಕ ಉದಯಶಂಕರ್ ಹೆಚ್, ವಾಣಿಜ್ಯ ಶಾಸ್ತ್ರ ವಿಭಾಗದ ಶೈಲಜಾ ಎನ್ ಆರ್, ಗಣಕ ವಿಜ್ಞಾನ ವಿಭಾಗದ ಸುರೇಶ್ ಕುಮಾರ್ ಎಚ್. ಎಂ, ರಾಜ್ಯ ಶಾಸ್ತ್ರ ವಿಭಾಗದ ಜಯಶ್ರೀ ನಿರ್ವಹಣಾ ಶಾಸ್ತ್ರ ವಿಭಾಗದ ಗೀತಾ, ಅರ್ಥ ಶಾಸ್ತ್ರ ವಿಭಾಗದ ವಿಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಉಪನ್ಯಾಸಕ ಶಿವಪ್ರಸಾದ್ ಸ್ವಾಗತಿಸಿ, ಮುತ್ತು ಶೆಟ್ಟಿ ವಂದಿಸಿದರು.
ರಾಮಕೃಷ್ಣ ಕೆ ಕಾರ್ಯಕ್ರಮ ನಿರೂಪಿಸಿದರು.
- Friday
- November 22nd, 2024