ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸಾಮನ್ಯ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಬಳಿಕ ಪತ್ರಕರ್ತರ ಜೊತೆಗೆ ಮತನಾಡುತ್ತಾ ನಗರ ಪ್ರದೇಶಗಳಿಗೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತದಿಂದ ಘನತ್ಯಾಜ್ಯ ನಿರ್ವಹಣೆಗೆ ಬೇಕಾಗುವ ಅನುದಾನವು ಸಿಗುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಲು ಸ್ಥಳದ ಅವಶ್ಯಕತೆ ಇದ್ದು ಅದನ್ನು ಮೊದಲು ಮಾಡಿಕೊಂಡು ಬೆಳೆಯುವ ನಗರವಾದ ಸುಳ್ಯವು ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ವಿಲೇವಾರಿ ನಡೆಸಲು ಕಾರ್ಯ ಯೋಜನೆಯನ್ನು ಮಾಡಿಕೊಳ್ಳಬೇಕು. ಅಲ್ಲದೇ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಕೋಟ್ಯಾಂತರ ಅನುದಾನವು ಬರುತ್ತಿದೆ ಇದಕ್ಕೆ ಪ್ರತಿ ಗ್ರಾಮ ಪಂಚಾಯತ್ ಗಳ ಮಾದರಿಯಲ್ಲಿ ಮನೆ ಮನೆಗಳಲ್ಲಿ ಕಾಂಪೋಸ್ಟ್ ಮಾದರಿಯಲ್ಲಿ ಮಾಡಲು ಸಲಹೆ ನೀಡಿದರು. ಅಲ್ಲದೇ ಅಜ್ಜಾವರದಲ್ಲಿ ಕಾದಿರಿಸಿದ ಸ್ಥಳವನ್ನು ತಮ್ಮ ವಶಕ್ಕೆ ಪಡೆದು ತ್ಯಾಜ್ಯ ವಿಂಗಡಣೆ ಮಾಡಲು ಬೇಕಾದ ಕ್ರಮ ಕೈಗೊಳ್ಳುವಂತೆ ಮಾಡಲಾಗುವುದು. ಅಲ್ಲದೇ ಪ್ಲಾಸ್ಟಿಕ್ ಗಳನ್ನು ವಿಂಗಡಿಸಿ ಅತೀ ಹೆಚ್ಚಿನ ಪ್ಲಾಸ್ಟಿಕ್ ತಯಾರಿಕಾ ಕಂಪೆನಿಗಳಿಗೆ ಮಾಹಿತಿ ನೀಡಿ ಇಲ್ಲಿನ ಪ್ಲಾಸ್ಟಿಕ್ ಗಳನ್ನು ಹಿಂತುರುಗಿಸಿ ನೀಡುವುದು ಇಲ್ಲವೇ ಅವರಿಂದ ತೆರಿಗೆಯನ್ನು ಪಡೆದುಕೊಂಡು ಅವುಗಳನ್ನು ಇತರೆ ಕಂಪನಿಗಳಿಗೆ ನೀಡುವಂತಹ ಕೆಲಸ ಸೇರಿದಂತೆ ಹಲವಾರುವ ವಿಚಾರಗಳನ್ನು ಪತ್ರಕರ್ತರ ಜೊತೆ ಮಾತನಾಡುತ್ತಾ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.
- Thursday
- November 21st, 2024