Ad Widget

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನೇರವಾಗಿ II ND  P.U.C SCIENCE, COMMERCE, ARTS, S.S.L.C, DMEd/NTT 2024-25 ತರಗತಿಗಳಿಗೆ ಅವಕಾಶ

. . . . . . . . .

ಪುತ್ತೂರು: 2023-24 ನೇ ಸಾಲಿನ 10 ನೇ ತರಗತಿಯಲ್ಲಿ ಶೇಕಡ 98, ಪಿಯುಸಿಯಲ್ಲಿ ಶೇಕಡ 100 ಫಲಿತಾಂಶವನ್ನು ನೀಡಿದ ಪ್ರಗತಿ ಎಜುಕೇಶನಲ್ ಫೌಂಡೇಶನ್ (ರಿ.) ಇದರ ಅಧೀನದಲ್ಲಿ ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಲಿಕೆಯಲ್ಲಿ ಹಿಂದುಳಿದು ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆಯ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಎಂಬ ಶಿರೋನಾಮೆಯಲ್ಲಿ ಕಳೆದ 17 ವರ್ಷಗಳಿಂದ ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಎಸ್.ಎಸ್.ಎಲ್.ಸಿ., ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಮತ್ತು ಫೇಲ್ ಆಗಿರುವ ವಿಷಯವನ್ನು ಪಾಸ್ ಮಾಡಿಕೊಳ್ಳಲು ಉತ್ತಮ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ.
ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ : ಮಾರ್ಚ್ 2025 ಕ್ಕೆ 15 ಅಥವಾ 17 ವರ್ಷ ಭರ್ತಿಯಾಗುವ ವಿದ್ಯಾರ್ಥಿಗಳು ಹಾಗೂ ಪ್ರಥಮ ಪಿಯುಸಿ ಅನುತ್ತೀರ್ಣಗೊಂಡವರು ಖಾಸಗಿಯಾಗಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಇವರಿಗೆ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ದಾಖಲಾತಿಗೆ ಅವಕಾಶವಿರುತ್ತದೆ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಖಾಸಗಿಯಾಗಿ ನೋಂದಾಯಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಮಾರ್ಚ್ 2025 ಕ್ಕೆ 15 ವರ್ಷ ಭರ್ತಿಗೊಂಡಿರಬೇಕು. ಅಂತಹ ವಿದ್ಯಾರ್ಥಿಗಳಿಗೆ ದಾಖಲಾತಿಗೆ ಅವಕಾಶವಿರುತ್ತದೆ.
DMEd Teachers Training / NTT : ಎಸ್.ಎಸ್.ಎಲ್.ಸಿ., ಪಿಯುಸಿ, ಡಿಗ್ರಿಯಾದ ವಿದ್ಯಾರ್ಥಿಗಳಿಗೆDMEd Teachers Training/ NTT ಕೋರ್ಸುಗಳಿಗೆ ದಾಖಲಾತಿಗೆ ಅವಕಾಶವಿರುತ್ತದೆ. 35 ವರ್ಷಕ್ಕಿಂತಲೂ ಹೆಚ್ಚು ಅನುಭವಿ ನುರಿತ ಶಿಕ್ಷಕಿಯರಿಂದ ತರಬೇತಿ, 1 ವರ್ಷದ ಉಚಿತ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಗತಿಗಳು ನಡೆಯಲಿವೆ.
ಟ್ಯೂಷನ್ ತರಗತಿಗಳು: ಒಂದನೇ ತರಗತಿಯಿಂದ ಪದವಿಯವರೆಗೆ ಟ್ಯೂಷನ್ ತರಗತಿಗಳು, ನವೋದಯ ಪರೀಕ್ಷೆ ತಯಾರಿ, NTSE/NMMS, ದಕ್ಷಿಣ ಕನ್ನಡದ ನುರಿತ ಉಪನ್ಯಾಸಕ ವೃಂದದವರಿ0ದ CET/NEET/JEE ತರಗತಿಗಳು ಅಲ್ಲದೇ ವಿವಿಧ ಇಲಾಖೆಯಲ್ಲಿ ಜರಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುವುದು.
2024-25 ನೇ ಸಾಲಿನ ಶೈಕ್ಷಣಿಕ ವರ್ಷದ ದೈನಂದಿನ ತರಗತಿಗಳಲ್ಲಿ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳು ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಟೇಬಲ್ ಟ್ಯೂಷನ್ ತರಗತಿಯನ್ನು ನೀಡಲಾಗುವುದು. ತರಗತಿಗಳು ಬೆಳಗ್ಗೆ 09.30 ರಿಂದ ಸಂಜೆ 04.30 ರವರೆಗೆ ಹಾಗೂ ಭಾನುವಾರ ಬೆಳಗ್ಗೆ 09.30 ರಿಂದ ಸಂಜೆ 03.00 ಗಂಟೆಯವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು/ ಪೋಷಕರು ತಮ್ಮ ಮಕ್ಕಳಿಗೆ ತರಬೇತಿ/ ಟ್ಯೂಷನ್ ತರಬೇತಿ ಬೇಕಾದಲ್ಲಿ ಮುಖತಃ ಬಂದು ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ಕಛೇರಿಯ ಸಮಯ ಬೆಳಗ್ಗೆ 9.00 ರಿಂದ ಸಂಜೆ 5.00. ದೂರವಾಣಿ ಸಂಖ್ಯೆ: 9900109490, 9480106274, 8123899490. ನಮ್ಮ ಸಂಸ್ಥೆಯು ಭಾನುವಾರವು ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್‌ನಾಥ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading