Ad Widget

ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಏಂಜಲ್ ಜೆ – ಉಪನಾಯಕರಾಗಿ ಲಾನಿಶ್ ರಿಶೋನ್ ಡಿಸೋಜಾ

ವಿದ್ಯಾರ್ಥಿಗಳಲ್ಲಿ ಚುನಾವಣಾ ಪ್ರಕ್ರಿಯೆಯ ಅರಿವು ಮೂಡಿಸುವ ನಿಟ್ಟಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಚುನಾವಣೆಯು ಮಂಗಳವಾರ ನಡೆಯಿತು. ಪ್ರಜಾಪ್ರಭುತ್ವದ ರೀತಿಯಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ ಮತ್ತು ಚುನಾವಣಾ ಪ್ರಚಾರದೊಂದಿಗೆ ಮತದಾನವು ನಡೆಯಿತು. ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿದರು. ವಿದ್ಯಾರ್ಥಿ ಸಂಘದ ನಾಯಕಿಯಾಗಿ 10ನೇ ತರಗತಿಯ ಏಂಜಲ್ ಜೆ ಹಾಗೂ ಉಪನಾಯಕರಾಗಿ 9ನೇ ತರಗತಿಯ ಲಾನಿಶ್ ರಿಶೋನ್ ಡಿಸೋಜಾರವರು ಆಯ್ಕೆಯಾದರು. ಚುನಾವಣೆಯು ಮುಖ್ಯೋಪಾಧ್ಯಾಯರಾದ ಅನಿತಾ ಫೆರ್ನಾಂಡಿಸ್ ರವರ ಮಾರ್ಗದರ್ಶನ ಹಾಗೂ ಸಹಶಿಕ್ಷಕರ ಸಹಕಾರದೊಂದಿಗೆ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!