Ad Widget

ಮಂಡೆಕೋಲು: ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ ದೃಢ ಕಲಶಾಭಿಶೇಕ

ಸುಳ್ಯ: ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಸೋಮವಾರ ನಡೆಯಿತು.

ದೃಢ ಕಲಶಾಭಿಶೇಕದ ವಿಧಿ ವಿಧಾನಗಳು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಿತು. ಭಾನುವಾರ ಸಂಜೆ 6 ಕ್ಕೆ ದೇವತಾ ಪ್ರಾರ್ಥನೆ, ಬಳಿಕ ಆಚಾರ್ಯವರಣ, ರಾಕ್ಷೋಘ್ನ ಹೋಮ, ವಾಸ್ತುಹೋಮ ಹಾಗೂ ವಾಸ್ತುಬಲಿ ನಡೆಯಿತು.

ಸೋಮವಾರ ಬೆಳಿಗ್ಗೆ 7 ಕ್ಕೆ ಗಣಪತಿ ಹವನ ಹಾಗೂ ಕಲಶ ಪೂಜೆ ನಡೆದು ನಂತರ ಸತ್ಯನಾರಾಯಣ ಪೂಜೆ ಹಾಗೂ ಕಲಶಾಭಿಶೇಕ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿಯ ಬಳಿಕ ಅನ್ನ ಸಂತರ್ಪಣೆ ನಡೆದಾಗ ಸಾವಿರರು ಭಗವದ್ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!