Ad Widget

ಕುಕ್ಕೆ:  ಕುಮಾರಧಾರ ಸ್ಥಾನಗಟ್ಟ ನದಿಯಲ್ಲಿ ಸ್ವಚ್ಛತಾ ಕಾರ್ಯ

           ಸುಬ್ರಹ್ಮಣ್ಯ, ಜೂನ್ 16: ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿ ಸ್ನಾನಘಟ್ಟ ನದಿಯಲ್ಲಿ ಸಾವಿರಾರು ಸಂಖ್ಯೆಯ ಬಟ್ಟೆ ಬರೆಗಳು ನದಿಯಲ್ಲಿ ಬಿದ್ದಿದ್ದು ಇಡೀ ನದಿಯ ನೀರು ಮಲಿನ  ಗೊಂಡಿರುವುದಲ್ಲದೆ ಪಕ್ಕದ ಹರಿಯುತ್ತಿರುವ ನದಿಯ ಭಾಗಗಳಲ್ಲಿ ಕೂಡ ವಸ್ತ್ರಗಳು ತೇಲಿಕೊಂಡು ಬಂದು ಇಕ್ಕೆಲಗಳಲ್ಲಿ ಶೇಖರಣೆ ಗೊಂಡಿರುತ್ತದೆ. ಇದನ್ನು ಮನಗಂಡ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸ್ವಚ್ಛತಾ ಕಾರ್ಯಕ್ಕೆ ರವಿವಾರ ತೊಡಗಿದರು.   

             

  ನದಿಯಲ್ಲಿ ಸ್ನಾನ ಮಾಡತಕ್ಕಂತಹ ತಳಭಾಗದಲ್ಲಿ ಬಿದ್ದಿದ್ದ ಸಾವಿರಾರು ಬಟ್ಟೆಗಳನ್ನ ಮೇಲಕ್ಕೆ ತಂದ ಸ್ವಯಂಸೇವಕರು ಟ್ರ್ಯಾಕ್ಟರ್ ನಲ್ಲಿ ಅದನ್ನು ತುಂಬಿಸಿ ಕೊಂಡೊಯ್ದರು. ಭಕ್ತಾದಿಗಳು ತೀರ್ಥ ಸ್ಥಾನ ಮಾಡಿದ ಕಂತ ಸಂದರ್ಭದಲ್ಲಿ ದೇವಳದ ವತಿಯಿಂದ ಪ್ರತಿವರ್ಧಕದ ಮೂಲಕ ಎಷ್ಟೇ ಎಚ್ಚರಿಕೆ ನೀಡಿದರು ಮತ್ತೆ ಅದೇ ಚಾಳಿಯನ್ನು ಸ್ಥಾನ ಮಾಡತಕ್ಕಂಥ ಭಕ್ತಾದಿಗಳು

ಮಾಡುತ್ತಿರುವುದು ವಿಷಾದನೆಯಾಗಿದೆ. ಈ ನಿಟ್ಟಿನಲ್ಲಿ ಶ್ರೀ ದೇವಳದ ವತಿಯಿಂದ ಕಠಿಣ ಕ್ರಮವನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕರು ತಿಳಿಯಪಡಿಸಿರುತ್ತಾರೆ. ಇಂದು ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕರು ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ನ ಅಧ್ಯಕ್ಷರಾದ ಡಾ. ರವಿ ಕಕ್ಕೆ ಪದವು, ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ, ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳು ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!