ಉಚಿತ ಉಚಿತ ಎಂದ ಸರಕಾರದ ನಿಲುವು ಈಗ ಬೆಲೆ ಏರಿಕೆ ಖಚಿತ ಖಚಿತ ಖಚಿತ. ಕಳೆದ ವರುಷ ಬಡವರ ಸರಕಾರ ಎಂದು ಪ್ರಚಾರ ಪಡೆದು ಅಧಿಕಾರಕ್ಕೆ ಬಂದ ಈ ಸರಕಾರ ಈಗ ಏಕಾಏಕಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಬರೆಎಳೆದಿದೆ. ಹಿಂದಿನ ಬಾಗಿಲಿನಿಂದ ಕದ್ದು ಎದುರು ಬಾಗಿಲಿನಿಂದ ಉಚಿತವಾಗಿ ಕೊಡುವ ನಾಟಕವನ್ನು ಮಾಡುತ್ತ ಬಂದಿದೆ ಈ ಮೊದಲು ಠಸೆ ಪೇಪರ್ ಬೆಲೆಯನ್ನು ಹೆಚ್ಚಿಸಿತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಹತಾಶೆಯಲ್ಲಿದೆ ದೇಶದಲ್ಲಿ ನೂರ ಗಡಿ ದಾಟದ ಕಾಂಗ್ರೆಸ್ ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ ನೂರ ದಾಟಿಸಿ ಜನತಗೆ ಶಾಕ್ ನೀಡಿದೆ.ಮುಂದಿನ ದಿನಗಳಲ್ಲಿ ಈ ಸರಕಾರದ ವಿರುದ್ಧ ಜನಬೀದಿಗೆ ಇಳಿದು ಹೋರಾಟವನ್ನು ಮಾಡಿ ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡಲಿದ್ದಾರೆ.
ಸರಕಾರ ಏರಿಸಿ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಅಗ್ರಹಿಸುತ್ತೆನೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024