ಕರ್ನಾಟಕ ಸರ್ಕಾರದ ಜನವಿರೋಧಿ ನೀತಿಯಿಂದ ಸಾಮಾನ್ಯ ಜನರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಸಹಕಾರಿ ಸಂಘಗಳಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯಾದ ಕೃಷಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುತ್ತೇವೆ ಎಂದು ಹೇಳಿ ಜನರಿಗೆ ಮೋಸ ಮಾಡಿದ್ದಲ್ಲದೇ ಹಾಲಿನ ಸಹಾಯಧನವಾದ ಲೀಟರ್ ಗೆ 5 ರೂಪಾಯಿ ಇನ್ನೂ ಯಾರಿಗೂ ನೀಡುತ್ತಿಲ್ಲ. ರಿಜಿಸ್ಟ್ರೇಷನ್ ಫೀಸು ದುಪ್ಪಟ್ಟು, ಚಾಪಾಕಾಗದ ಮೂರುಪಟ್ಟು ಮಾಡಿದ್ದಲ್ಲದೇ ಇದೀಗ ಕಳೆದ 2 ವರ್ಷಗಳಿಂದ ಕೇಂದ್ರ ಸರ್ಕಾರ ಸ್ಥಿರತೆ ಕಾಯ್ದುಕೊಂಡು ಬರುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇದೀಗ ರಾಜ್ಯಸರ್ಕಾರ ಏಕಾಏಕಿ ಏರಿಕೆ ಮಾಡಿ ಪೆಟ್ರೋಲ್ ಗೆ 3 ರೂಪಾಯಿ ಹಾಗೂ ಡೀಸೆಲ್ ಗೆ 3.50 ರೂಪಾಯಿ ಹೆಚ್ಚುವರಿ ತೆರಿಗೆ ಹಾಕಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿದ್ದು, ಇದು ಕಾಂಗ್ರೆಸ್ ಗ್ಯಾರೆಂಟಿಯೇ ಎಂದು ಪ್ರಶ್ನಿಸಿದ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಇದನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದು, ಇಂಧನ ದರ ಏರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಸುಳ್ಯ ಮಂಡಲ ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024