ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ. ಇದರ ವತಿಯಿಂದ ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೋರ್ ಕಮಿಟಿ ಸಭೆಯನ್ನು ತಾಲೂಕು ಕ್ಷೇತ್ರ ಯೋಜನಾಧಿಕಾರಿಯವರಾದ ಮಾಧವರವರು ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಿ, ಈ ವರ್ಷದಲ್ಲಿ ಪ್ರತಿಯೊಂದು ವಿಪತ್ತು ನಿರ್ವಹಣಾ ಘಟಕಗಳು ಉತ್ತಮವಾದ ಸೇವೆಯನ್ನು ಮಾಡಬೇಕು. ನಾವು ಮಾಡುವ ಕೆಲಸ ಕಾರ್ಯ ಸೇವೆಯಲ್ಲಿ ರಾಜ್ಯದಲ್ಲಿ ಸುಳ್ಯ ತಾಲೂಕು ಪ್ರಥಮ ಸ್ಥಾನ ಬರಬೇಕೆಂದು ಹೇಳಿದರು.
ದಕ್ಷಿಣ ಕನ್ನಡ 2 ರ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಮಾತನಾಡುತ್ತ, ಕಳೆದ ನಾಲ್ಕು ವರ್ಷಗಳಿಂದ ಎಲ್ಲಾ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಉತ್ತಮವಾದ ಸೇವೆಯನ್ನು ಮಾಡಿದ್ದಾರೆ. ಆಪತ್ತು, ಗಂಡಾಂತರಗಳು ಬಂದಾಗ ಎಲ್ಲಾ ಸ್ವಯಂ ಸೇವಕರು ಕೈ ಜೋಡಿಸುವ ಕೆಲಸ ಮಾಡಬೇಕೆಂದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಕೇಂದ್ರ ಕಛೇರಿ ಜನಜಾಗೃತಿ ವೇದಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿಯವರಾದ ಜೈವಂತ್ ಪಟಗಾರರವರು ತಾಲೂಕಿನ ಎಲ್ಲಾ ವಿಪತ್ತು ನಿರ್ವಹಣಾ ಘಟಕದ ಪರಿಸ್ಥಿತಿಗಳ ಬಗ್ಗೆ ಅವಲೋಕನ ಮಾಡಿ, ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ವ್ಯಾಪಿಯ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಯವರಾದ ಗಣೇಶ್ ರವರು, ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ನಿತೇಶ್ ಕೆ ರವರು, ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಜಯರಾಮ ಪಿ ಜಿ ಸುಳ್ಯ, ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಸತೀಶ್ ನಾಲ್ಕೂರುರವರು, ಉಪಸ್ಥಿತರಿದ್ದರು.
ಈ ಕೋರ್ ಸಮಿತಿ ಸಭೆಯಲ್ಲಿ ತಾಲೂಕಿನ ಎಲ್ಲಾ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು, ಪ್ರತಿನಿಧಿಗಳು, ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಆಡಳಿತ ಪ್ರಬಂಧಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಬೆಳ್ಳಾರೆ ಮೇಲ್ವಿಚಾರಕರಾದ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಜಾಲ್ಸೂರು ಮೇಲ್ವಿಚಾರಕರಾದ ತೀರ್ಥರಾಮ ಸ್ವಾಗತವನ್ನು ಮಾಡಿದರು. ಸಂಪಾಜೆ ಮೇಲ್ವಿಚಾರಕರಾದ ಗಂಗಾಧರ ಧನ್ಯವಾದವಿತ್ತರು.
- Saturday
- November 23rd, 2024