ಅರೋಗ್ಯ ಪ್ರಸಾದಿನೀ ಆರೋಗ್ಯ ಮಾಹಿತಿ ಕಾರ್ಯಾಗಾರವು , ಜೂನ್ 9 ರಂದು ನರಿಮೊಗರಿನ ಪಾದೆ ಎಂಬಲ್ಲಿರುವ ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಿತು. ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಎನ್. ದುಗ್ಗಪ್ಪ ಇವರು “ಆರೋಗ್ಯದ ಕುರಿತ ಇಂತಹ ಕಾರ್ಯಕ್ರಮಗಳನ್ನು ಮಾಡುವ , ಬರಹಗಳ ಮೂಲಕ ಜನಜಾಗೃತಿ ಮೂಡಿಸುವ , ಹಲವಾರು ರೋಗಿಗಳನ್ನು ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಪಡಿಸಿದ ಜನಪ್ರೇಮಿ ವೈದ್ಯ ಡಾ . ಬಂಗಾರಡ್ಕ ಇವರು ಅಭಿನಂದನಾರ್ಹರು ” ಎಂದರು.
ಸಂಸ್ಕರಿಸಿದ ಆಹಾರ ಮತ್ತು ನಮ್ಮ ಅರೋಗ್ಯ ವಿಷಯದ ಬಗ್ಗೆ ವಿಸ್ತೃತವಾಗಿ ಮಾತನಾಡಿದ ಆಸ್ಪತ್ರೆಯ ಆಡಳಿತ ನಿರ್ದೇಶಕರೂ , ಖ್ಯಾತ ಆಯುರ್ವೇದ ತಜ್ಞ ವೈದ್ಯರೂ ಆಗಿರುವ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ “ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ಯಾಕ್ ಮಾಡಿದ , ಕೃತಕ ಬಣ್ಣ ಪರಿಮಳಗಳನ್ನು ಸುರಿದ , ಆರೋಗ್ಯಕ್ಕೆ ಮಾರಕವಾದ ಸಂಸ್ಕರಿತ ಆಹಾರಗಳ ಚಟಕ್ಕೆ ಎಲ್ಲರೂ ದಾಸರಾಗಿದ್ದಾರೆ .ಇದರಿಂದ ಹೊರಬರದೆ ಅರೋಗ್ಯ ಎಂಬುದು ಮರೀಚಿಕೆ ” ಎಂದರು.
ಕು . ಸುನಿಧಿ ಪ್ರಾರ್ಥನೆಗೈದು , ಕು . ಸುದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು . ಆಸ್ಪತ್ರೆಯ ಆಡಳಿತ ಮಂಡಳಿಯ ವ್ಯವಸ್ಥಾಪನಾ ಮುಖ್ಯಸ್ಥೆ ಡಾ. ಶ್ರುತಿ . ಎಂ .ಎಸ್ . ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ,”ಪ್ರಸಾದಿನೀ ಆಸ್ಪತ್ರೆಯು ಇಂದು ಒಳರೋಗಿ ವಿಭಾಗ , ಪಂಚಕರ್ಮ ಚಿಕಿತ್ಸಾ ಸೌಲಭ್ಯ, ಕಿರುಶಾಸ್ತ್ರ ಚಿಕಿತ್ಸಾ ವಿಭಾಗ , ಯೋಗ ಹಾಲ್ ಎಲ್ಲಾ ಸುಸಜ್ಜಿತ ವ್ಯಸ್ಥೆಯೊಂದಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟ್ಟು ಕಾರ್ಯನಿರ್ವಹಿಸುತ್ತಿರುವುದಕ್ಕೆ ಇಲ್ಲಿ ಚಿಕಿತ್ಸೆ ಪಡೆದು ಗುಣಹೊಂದಿದ ಜನರ ಆಶೀರ್ವಾದವೇ ಕಾರಣ ” ಎಂದರು . ಮುಖ್ಯ ಜೀವವಿಮಾ ಸಲಹೆಗಾರರೂ , ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರೂ ಆದ ಎಂ . ಸುಬ್ರಮಣ್ಯ ಭಟ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಧನ್ಯವಾದ ಸಲ್ಲಿಸಿದರು . ಪ್ರಶ್ನೋತ್ತರದಲ್ಲಿ ಸಾಮಾಜಿಕ ಕಾರ್ಯಕರ್ತ ಸುರೇಶ್ ಪ್ರಭು ಶೆಟ್ಟಿಮಜಲು , ಡಾ. ಸೀತಾರಾಮ ಭಟ್ ಕಲ್ಲಮ , ಡಾ . ರಾಜಾರಾಮ್ ನೆಲ್ಲಿತ್ತಾಯ , ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಎನ್. ಸರ್ವೇದೋಳಗುತ್ತು , ನವಚೇತನ ನಿವಾಸಿ ಶ್ರೀಮತಿ ಗೀತಾ ಸದಾಶಿವ ಮುಂತಾದವರು ಭಾಗವಹಿದರು. ಜಯರಾಮ ಪ್ರಭು ಶೆಟ್ಟಿಮಜಲು ಉಪಹಾರ ನೀಡುವಲ್ಲಿ ಸಹಕರಿಸಿದರು. ಆಸ್ಪತ್ರೆಯ ಸಿಬ್ಬಂದಿಗಳಾದ ರಂಜಿನಿ , ತುಳಸಿ , ಸ್ವಾತಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಬರೆದ ಪುಸ್ತಕ “ಅರೋಗ್ಯ ಪ್ರಸಾದಿನೀ “, ಪೇಯ ಕಷಾಯ ಹುಡಿ, ಸ್ವರ್ಣಪ್ರಾಶ ಇತ್ಯಾದಿ ಪ್ರಸಾದಿನೀ ಆಯುರ್ವೇದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ ವಿತರಿಸಲಾಯಿತು.
- Saturday
- November 23rd, 2024