ಅಮರ ಸಂಘಟನಾ ಸಮಿತಿ ಸುಳ್ಯ ಮತ್ತು ಅರಕ್ಷಕ ಠಾಣೆ ಬೆಳ್ಳಾರೆ ಇದರ ಸಹಯೋಗದಲ್ಲಿ ಕಾಡು ಬೆಳಿಸಿ ನಾಡು ಉಳಿಸಿ ಎಂಬ ಧೈಯ ವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಜೂ.09 ರಂದು ಆರಕ್ಷಕ ಠಾಣೆ ಬೆಳ್ಳಾರೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪ್ರಗತಿಪರ ಕೃಷಿಕ ಕಿಶೋರ್ ಅಗರಿ, ಬೆಳ್ಳಾರೆ ಠಾಣೆಯ ಪಿಎಸ್ಐ ಸಂತೋಷ್. ಬಿ, ಹಾಗೂ ಅಮರ ಸಂಘಟನಾ ಸಮಿತಿ ಅಧ್ಯಕ್ಷ ಸಾತ್ವಿಕ್ ಮಡಪ್ಪಾಡಿ ಇವರುಗಳು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಆರಕ್ಷಕ ಠಾಣೆ ಬೆಳ್ಳಾರೆ ಇಲ್ಲಿಯ ಸಿಬ್ಬಂದಿ ವರ್ಗದವರು ಹಾಗೂ ಅಮರ ಸಂಘಟನಾ ಸಮಿತಿಯ ಸದಸ್ಯರುಗಳಾದ ಹರ್ಷಿತ್ ಜಿ. ಜೆ, ರಜನಿಕಾಂತ್ ಉಮ್ಮಡ್ಕ, ಜಯಪ್ರಸಾದ್ ಸಂಕೇಶ, ಪ್ರವೀಣ್ ಕುಲಾಲ್, ಕುಸುಮಾಧರ ಮುಕ್ಕೂರು, ಶಶಿಕಾಂತ್ ಮಿತ್ತೂರು, ಪ್ರಸಾದ್ ಬೊಳ್ಳೂರು, ಪ್ರಶಾಂತ್ ಕುದ್ಮಾರು, ಮನೀಶ್ ಕಡಪಳ, ರಾಜೀವಿ ಗೋಳ್ಯಾಡಿ, ಹಸ್ತವಿ ಮಡಪ್ಪಾಡಿ ಹಾಗೂ ಅನಿತಾ ಕುಕ್ಕುಜಡ್ಕ ಇವರುಗಳು ಕಾರ್ಯಕ್ರಮ ಯಶಸ್ವಿಗೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಶ್ರೀಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
- Sunday
- November 24th, 2024