ಭವ್ಯ ಭಾರತದ ನೂತನ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಜತೆಗೆ ಕರ್ನಾಟಕದ ಸಂಸದರಾಗಿರುವ ಪ್ರಹ್ಲಾದ್ ಜೋಷಿ, ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ ಮತ್ತು ಶೋಭ ಕರಂದ್ಲಾಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಎನ್.ಡಿ.ಎ. ನೇತೃತ್ವದ ಮೋದಿ ಸರಕಾರದಲ್ಲಿ ಸಚಿವರಾಗಲಿರುವ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ಪ್ರಕಾಶ್ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್ , ಡಾ. ಸುಬ್ರಹ್ಮಣ್ಯಂ ಜಯಶಂಕರ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕರ್ನಾಟಕದ ಮಾಜಿ ಸಿಎಂ ಹೆ್.ಡಿ. ಕುಮಾರಸ್ವಾಮಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಹಿಂದೂಸ್ಥಾನಿ ಅವಾಮ್ ಮೋರ್ಛಾ ಪಕ್ಷದ ಜಿತನ್ ರಾಮ್ ಮಾಂಝಿ, ಜೆಡಿಯು ಪಕ್ಷದ ರಾಜೀವ್ ಲಾಲನ್ ಸಿಂಗ್, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ , ಡಾ. ವಿರೇಂದ್ರ ಕುಮಾರ್, ರಾಮ್ ಮೋಹನ್ ನಾಯ್ಡು, ಪ್ರಹ್ಲಾದ್ ಜೋಷಿ, ಜಹಲ್ ಓರಾಮ್ , ಗಿರಿರಾಜ್ ಸಿಂಗ್ , ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಭೂಪೇಂದ್ರ ಯಾದವ್, ಗಜೇಂದ್ರ ಸಿಂಗ್ ಶೇಖಾವತ್, ಶ್ರೀಮತಿ ಅನ್ನಪೂರ್ಣ ದೇವಿ, ಕಿರಣ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಡಾ. ಮನ್ ಸುಖ್ ಮಾಂಡವೀಯಾ, ಜಿ.ಕಿಶನ್ ರೆಡ್ಡಿ, ಎಲ್.ಜೆ.ಪಿ ಪಕ್ಷದ ಚಿರಾಗ್ ಪಾಸ್ವಾನ್ , ಸಿ.ಆರ್. ಪಾಟೀಲ್, ಇಂದ್ರಜಿತ್ ಸಿಂಗ್, ಡಾ.ಜಿತೇಂದ್ರ ಸಿಂಗ್ , ಅರ್ಜುನ್ ರಾಮ್ ಮೇಘವಾಲ್, ಪ್ರತಾಪ್ ರಾವ್ ಜಾಧವ್, ಜಯಂತ್ ಚೌಧರಿ, ಜಿತಿನ್ ಪ್ರಸಾದ್, ಪಂಕಜ್ ಚೌಧರಿ, ವಿ.ಸೋಮಣ್ಣ, ಶೋಭ ಕರಂದ್ಲಾಜೆ ಸೇರಿದಂತೆ 71 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.