Ad Widget

ಇಂಡಿಯಾ ಒಕ್ಕೂಟ ಆಶಯದ ರೀತಿಯಲ್ಲಿ ಎನ್ ಡಿ ಎ ಆಡಳಿತ ನಡೆಯಲಿದೆ – ಯನ್ ಜಯಪ್ರಕಾಶ್ ರೈ


ಲೋಕಸಭಾ ಚುನಾವಣೆ ಸಂವಿಧಾನ , ಪ್ರಜಾತಂತ್ರದ ಗೆಲುವು – ಪಿ ಸಿ ಜಯರಾಮ್ 


ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಈ ಬಾರಿಯ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ಕಾಂಗ್ರೆಸ್ ಈ ಹಿಂದೆ ಎರಡು ಭಾರಿಯು ಅಧಿಕೃತ ವಿಪಕ್ಷ ಸ್ಥಾನವನ್ನು ಉಳಿಸುವಲ್ಲಿ ವಿಫಲವಾಗಿತ್ತು ಆದರೆ ಈ ಭಾರಿ ತಮ್ಮ ಸಂಖ್ಯೆಯನ್ನು ಮೂರಂಕಿ ತಲುಪಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಯನ್ ಜಯಪ್ರಕಾಶ್ ರೈ ಹೇಳಿದರು.

ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಲೋಕಸಭಾ ಚುನಾವಣೆ ಮತ್ತು ರಾಜ್ಯದ ಚುನಾವಣೆಗೆ ಬಹಳಷ್ಟು ವ್ಯತ್ಯಾಸಗಳು ಇವೆ ಈ ಭಾರಿ ಎನ್ ಡಿ ಎ ಸರಕಾರದಲ್ಲಿ ನಾಯ್ಡು ಮತ್ತು ನಿತೀಶ್ ಕುಮಾರ್ ಸರಕಾರಕ್ಕೆ ಎಚ್ಚರಿಕೆಯ ಮಾದರಿಯಲ್ಲಿ ಕೆಲವೊಂದು ಇಂಡಿಯಾ ಒಕ್ಕೂಟದ ಆಶಯದ ಪ್ರಕಾರವೇ ಜಾತಿಗಣತಿ , ಅಗ್ನಿಪತ್ ಸೇರಿದಂತೆ ಇತರೆ ವಿಷಯಗಳ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದು ಅಲ್ಲದೇ ಸಂವಿಧಾನದ ಬದಲಾವಣೆ ಮಾತುಗಳನ್ನು ಆಡುತ್ತಿದ್ದ ಮೋದಿ ಸಂವಿಧಾನಕ್ಕೆ ನಮಸ್ಕರಿಸುವ ಮಟ್ಟಕ್ಕೆ ಅವರನ್ನು ತರಲಾಗಿದೆ ಅಲ್ಲದೇ ಬಿಜೆಪಿ ತನ್ನ ಬಹುಮತವನ್ನು ಕಳೆದುಕೊಂಡಿದ್ದು ಇದೀಗ ಇಂಡಿಯಾ ಒಕ್ಕೂಟದ ಅಜೆಂಡ ಮಾದರಿಯಲ್ಲಿ ಸರಕಾರ ಸಾಗಲಿದೆ ಎಂದು ಹೇಳಿದರು . ಜಿಲ್ಲೆಯ ವಿಷಯದಲ್ಲಿ ಮತನಾಡುತ್ತಾ ಜಿಲ್ಲೆಯಲ್ಲಿ ಸಭಾದ್ಯಕ್ಷರ ಕ್ಷೇತ್ರ ಹೊರತುಪಡಿಸಿ ಮಿಕ್ಕೆಲ್ಲ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಪಡೆದಿದೆ ಅದು ಅಲ್ಲದೇ ಸುಳ್ಯದಲ್ಲಿ ಲೀಡ್ ಕಡಿಮೆಗೊಳಿಸಲು ನಾಯಕರ ಒಗ್ಗಟ್ಟಿನಿಂದ ಸಹಕಾರಿಯಾಗಿದೆ ಎಂದು ಹೇಳಿದರು . ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಪ್ರಧಾನಮಂತ್ರಿ ಪಟ್ಟವನ್ನು ಅಲಂಕರಿಸಲಿದ್ದಾರೆ ಎಂದು ಅವರು ವಿಶ್ವಾಸದ ಮಾತುಗಳನ್ನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ಮತನಾಡುತ್ತಾ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಮೂಲಕ ನಾವು ತೀವ್ರ ರೀತಿಯಲ್ಲಿ ಪೈಪೋಟಿ ನೀಡಿ ಉತ್ತಮ ಪಲಿತಾಂಶವನ್ನು ಪಡೆದಿದ್ದು ಲೋಕದಲ್ಲಿ ವಿಪಕ್ಷವಾಗಿ ಸರಕಾರವನ್ನು ತಿದ್ದುವ ಕೆಲಸ ಕಾರ್ಯಗಳನ್ನು ಮಾಡುತ್ತೆವೆ ಎಂದು ಹೇಳಿದರು . ಅಲ್ಲದೇ ಗ್ಯಾರಂಟಿ ಯೋಜನೆಯ ಮೂಲಕ ಮತಗಳಿಗೆ ಸಾಧ್ಯವಾಗಿಲ್ಲ ಹಾಗಿದ್ದರು ನಾವು ನುಡಿದಂತೆ ಐದು ವರ್ಷಗಳ ಕಾಲ  ಗ್ಯಾರಂಟಿಗಳನ್ನು ನೀಡುತ್ತೆವೆ ಎಂದು ಹೇಳಿದರು . ಅಲ್ಲದೇ ಬಿಜೆಪಿಯ ಮತೀಯ ವಾದಗಳಿಗೆ ಈ ಭಾರಿಯು ಸೋಲಾಗಿದ್ದು ಜನತೆ ಒಕ್ಕೂಟದ ವ್ಯವಸ್ಥೆಗಳು ಮತ್ತು ಸಂವಿಧಾನ ಗಾಂಧಿಜಿಯವರ ಆಶಯಕ್ಕೆ ಮತ ನೀಡಿದ್ದಾರೆ ಎಂದು ಹೇಳಿದರು .

ಪಂಜದ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಗೆ ಆಗ್ರಹ , ಅಂಗಡಿ ಬಂದ್ ಮಾಡಿಸುವುದು ಸರಿಯಲ್ಲ.

ಪಂಜದಲ್ಲಿ ಅಂಗಡಿಯ ವ್ಯಕ್ತಿ ಯೋರ್ವರು ಅವಾಚ್ಯ ಶಬ್ದಗಳಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಬೈದಿದ್ದು ಇದರ ಕುರಿತಾಗಿ ಪೋಲಿಸ್ ಠಾಣೆಗೆ ದೂರು ನೀಡಿ ಮುಚ್ಚಳಿಕೆ ಬರೆದು ಪ್ರಸಂಗ ಮುಕ್ತಾಯವಾಗಿತ್ತು ಅಲ್ಲದೇ ಅಂಗಡಿಯ ವ್ಯಕ್ತಿಯು ತನ್ನ ತಪ್ಪಿನ ಅರಿವಾಗಿ ಮೂರು ದಿನಗಳ ಕಾಲ ಅಂಗಡಿ ಬಂದ್ ಮಾಡುತ್ತಿರುವುದಾಗಿ ತಿಳಿಸಿದ್ದರು ಅದರಂತೆ ಬಂದ್ ಮಾಡಲಾಗಿದ್ದು ಮಾಧ್ಯಮಗಳಲ್ಲಿ ವಿಚಾರ ಗೊತ್ತಾದಗ ಬಿಜೆಪಿ ಇದನ್ನು ಇದೀಗ ರಾಜಕೀಯ ಪ್ರೇರಿತರಾಗಿ ಪ್ರತಿಭಟನೆ ನಡೆಸುತ್ತಿದ್ದು ಇದರ ವಿರುದ್ದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕೂಡ ಹೋರಾಟ ನಡೆಸಲಿದೆ ಎಂದು ಹೇಳಿದರು . ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಸಮಾಜಿಕ ಜಾಲತಾಣಗಳಲ್ಲಿ ರಾಜಿನಾಮೆ ಕೇಳುವ ಕಾರ್ಯಕರ್ತರು ಕೆಲಸ ಮಾಡದೇ ವಿದೇಶದಲ್ಲಿ ಅಥವಾ ಪಕ್ಷಕ್ಕಾಗಿ ಕೆಲಸ ಮಾಡದೇ ಇಂತಹುದೇ ಕೆಲಸಗಳನ್ನು ಮಾಡುತ್ತಾ ಇರುವವರು ಎಂದು ಹೇಳಿದರು . ಅಲ್ಲದೇ ಪಂಜದ ಘಟನೆಯ ಕುರಿತಾಗಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಲ್ಲಿ ಬರೆಯುವುದು ಯಾವುದೇ ಪಕ್ಷ ಜಾತಿಯಾದರು ಸರಿಯಲ್ಲ ಎಂದು ಹೇಳಿದರು . ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ ಎಸ್ ಗಂಗಾಧರ , ನಗರ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ ಎಂ ಜೆ , ಸುಳ್ಯ ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್ , ಸಾಮಾಜಿಕ ಜಾಲತಾಣದ ಕಾರ್ಯಕರ್ತರಾದ ಭವಾನಿಶಂಕರ್ ಕಲ್ಮಡ್ಕ , ಗ್ರಾಮ ಪಂಚಾಯತ್ ಸದಸ್ಯರಾದ ಮುತ್ತಪ್ಪ ಪೂಜಾರಿ ,ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!