Ad Widget

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ವಿಶ್ವ ಪರಿಸರ ದಿನದ ಆಚರಣೆ

ಪುತ್ತೂರಿನ ಹೃದಯ ಭಾಗದಲ್ಲಿ ಕರ‍್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ಹಣ್ಣುಗಳ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ಶ್ರೀಯುತ ಗೋಕುಲ್‌ನಾಥ್ ಪಿ.ವಿ. ಇವರು ಮಾತನಾಡುತ್ತಾ ನಮ್ಮ ಪರಿಸರದ ಸಂರಕ್ಷಣೆ ನಮ್ಮ ಜವಾಬ್ದಾರಿ ಆದುದರಿಂದ ಎಲ್ಲರು ಪರಿಸರವನ್ನು ಉಳಿಸಿ ಬೆಳೆಸೋಣ ಎಂದು ಕರೆನೀಡಿದರು. ಸಂಸ್ಥೆಯ ಮುಖ್ಯಗುರು ಶ್ರೀಮತಿ ಪ್ರಮೀಳಾ ಎನ್.ಡಿ. ಇವರು ಅರಣ್ಯದ ಜೊತೆಗೆ ನೀರು,ಗಾಳಿ,ಮಣ್ಣು ಇವುಗಳನ್ನು ಸಂರಕ್ಷಿಸೋಣ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿ ಕೋಡೋಣ ಎಂದು ತಿಳಿಸಿದರು. ರಸಾಯನಶಾಸ್ತçದ ಉಪನ್ಯಾಸಕಿ ಕು. ಅಕ್ಷತಾ ಇವರು ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳಾದ ಶೌರ್ಯ, ಸಾತ್ವಿಕ್,ವಿಭವ್, ಅರ್ಷಕ್ ಇವರು ಪರಿಸರದ ಸಂರಕ್ಷಣಾ ದಿನದ ಕುರಿತು ಭಾಷಣವನ್ನು ಮಾಡಿದರು. ನಂತರ ಪರಿಸರ ಸಂರಕ್ಷಣೆಯ ಕುರಿತು ನೃತ್ಯ ರೂಪಕದ ಮೂಲಕ ವಿದ್ಯಾರ್ಥಿಗಳು ರಂಜಿಸಿದರು. ಪರಿಸರದ ಕುರಿತು ಚಿತ್ರ ಬಿಡಿಸುವುದು, ಪ್ರಬಂಧ ಸ್ಪರ್ಧೆ, ಪರಿಸರದ ಕುರಿತು Sಟogಚಿಟಿ ಬರೆಯುವುದು ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕವೃಂದ, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕರ‍್ಯಕ್ರಮವನ್ನು ಉಪನ್ಯಾಸಕಿ ಕು. ಶಿವಾನಿ ವಿರ್ವಹಿಸಿದರು.

. . . . . . .

Related Posts

error: Content is protected !!