Ad Widget

ಗೀತಾ ಗುಡ್ಡೆಮನೆ ಅವರಿಗೆ ಪಿ ಎಚ್ ಡಿ ಪದವಿ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಡಾ.ಸಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಗೀತಾ ಜಿ. ಗುಡ್ಡೆಮನೆ ಅವರು ಮಂಡಿಸಿದ “Performance of Female Kabaddi Players in Relation to Selected Psychological and Psychomotor Variables” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು.‌ ದೈಹಿಕ ಶಿಕ್ಷಣ ವಿಷಯದಲ್ಲಿ ಇವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್.ಡಿ ಪದವಿ ನೀಡಿದೆ.

ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ, ದಾವಣಗೆರೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಗೀತಾ ಅವರು ರಾಷ್ಟ್ರೀಯ ಕಬಡ್ಡಿ ಆಟಗಾರ್ತಿಯಾಗಿದ್ದು, ರಾಜ್ಯ ಮಹಿಳಾ ಕಬಡ್ಡಿ ತಂಡದಲ್ಲಿ ಆಡಿದ್ದರಲ್ಲದೆ, ಮಹಿಳಾ ಕಬಡ್ಡಿ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಮೈಸೂರು ಹಾಗೂ ಮಂಗಳೂರು ವಿ.ವಿ.ಪರವಾಗಿಯೂ ಆಡಿದ್ದರು.

ಇವರು ಕಂದಡ್ಕದ ದಿ.ಆನಂದ ಗೌಡ ಮತ್ತು ಶ್ರೀಮತಿ ಜಯ ದಂಪತಿಯ ಪುತ್ರಿ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!