Ad Widget

ಮಂಗಳೂರಿನಲ್ಲಿ ಗಣಕ ವಿಜ್ಞಾನ ಉಪನ್ಯಾಸಕರುಗಳಿಗೆ ತರಬೇತಿ ಕಾರ್ಯಾಗಾರ


ಮಂಗಳೂರು: ರಜೆಯಲ್ಲಿಯೂ ತಮ್ಮ ಸಮಯವನ್ನು ಬಿಡುವುಗೊಳಿಸಿ ಕಾರ್ಯಾಗಾರದಲ್ಲಿ ಉಪನ್ಯಾಸಕರು ಪಾಲ್ಗೊಂಡಿರುವುದು ಶ್ಲಾಘನೀಯ. ಇಂತಹ ಉಪನ್ಯಾಸಕರ ಕಾರ್ಯತತ್ಪರ ಕರ್ತವ್ಯವು ಜಿಲ್ಲೆಯ ದ್ವಿತೀಯ ಪಿಯುಸಿಯ ಫಲಿತಾಂಶ ಉನ್ನತ ಮಟ್ಟಕ್ಕೆ ಏರಿಕೆಯಾಗಲು ಭೂಷಣವಾಗಿದೆ.ಉಪನ್ಯಾಸಕರ ನಿಷ್ಠೆಯ ಶ್ರಮ ವಾರ್ಷಿಕ ಪರೀಕ್ಷಾ ಫಲಿತಾಂಶ ಉನ್ನತಿಗೆ ಅಡಿಗಲ್ಲಾಗಿದೆ.ವಿದ್ಯಾರ್ಥಿಗಳ ಭವಿಷ್ಯದ ಔನತ್ಯಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ಪಡೆಯಲು ಇಂತಹ ಕಾರ್ಯಾಗಾರಗಳು ಬುನಾದಿಯಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಹೇಳಿದರು.
ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಕ ವಿಜ್ಞಾನ ಉಪನ್ಯಾಸಕರ ಸಂಘದ ವತಿಯಿಂದ ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಕ ವಿಜ್ಞಾನ ಉಪನ್ಯಾಸಕರಿಗಾಗಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ದೀಪ ಬೇಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬೇಕಾದ ಪೂರ್ವಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಲು ಬೇಕಾದ ಉತ್ಕೃಷ್ಠ ಸಲಹೆ ಸೂಚನೆಗಳನ್ನು ನೀಡಿದುದು ಕೂಡಾ ಫಲಿತಾಂಶದ ಹೆಚ್ಚಳಕ್ಕೆ ಕಾರಣವಾಗಿದೆ.ಉಪನ್ಯಾಸಕರು ನೂತನ ಪಠ್ಯಕ್ರಮದ ಬಗ್ಗೆ ವಿಫುಲ ಮಾಹಿತಿ ಮತ್ತು ನಿರ್ದೇಶನಗಳನ್ನು ಪಡೆಯಲು ಇಂತಹ ಕಾರ್ಯಾಗಾರಗಳು ಅತ್ಯಗತ್ಯ.ಉಪನ್ಯಾಸಕರು ತರಬೇತಿ ಪಡೆಯುವುದರಿಂದ ಮಕ್ಕಳಿಗೆ ಸೂಕ್ತವಾದ ಜ್ಞಾನವನ್ನು ಬೋದಿಸಲು ಅನುಕೂಲಕರವಾಗುತ್ತದೆ ಎಂದರು.
ಇಂತಹ ಕಾರ್ಯಗಾರದಿಂದ ಉಪನ್ಯಾಸಕರು ತಮ್ಮ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.ಜ್ಞಾನ ಬೋಧನೆಗೆ ತರಬೇತಿಗಳು ಅತ್ಯವಶ್ಯಕ ಎಂದು ಮುಖ್ಯ ಅತಿಥಿಗಳಾಗಿದ್ದ ದ.ಕ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ ಹೇಳಿದರು.
ಮಂಗಳೂರು ಕೆನರಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲತಾಮಹೇಶ್ವರಿ ಕೆ.ಬಿ ಕಾರ್ಯಗಾರದ ಪ್ರಾಮುಖ್ಯತೆ ತಿಳಿಸಿದರು. ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಕೆನರಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗಿರೀಶ್.ಕೆ ಮುಖ್ಯಅತಿಥಿಗಳಾಗಿದ್ದರು.ದ.ಕ ಜಿಲ್ಲಾ ಗಣಕ ವಿಜ್ಞಾನ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀಧರ್ ಪುತ್ರನ್, ಕಾರ್ಯದರ್ಶಿ ನಿವೇದಿತಾ.ವಿ.ನಾಯಕ್, ಕೋಶಾಧಿಕಾರಿ ಸುಮಾ ಹೆಗ್ಡೆ ವೇದಿಕೆಯಲ್ಲಿದ್ದರು. ಪದಾಧಿಕಾರಿ ರಮ್ಯಾ ಹಾಗೂ ಸುಚಿತ್ರ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಪ್ರಥಮ ಪಿಯುಸಿ ತರಗತಿಗೆ ಅಳವಡಿಸಲಾದ ನೂತನ ಗಣಕ ವಿಜ್ಞಾನ ಪಠ್ಯಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿ ಗಿರೀಶ್.ಕೆ ಸೂಕ್ತ ಮಾಹಿತಿ ನೀಡಿದರು. ಜಿಲ್ಲೆಯ ಸರಕಾರಿ, ಅನುದಾನಿತ,ಅನುದಾನ ರಹಿತ ಗಣಕ ವಿಜ್ಞಾನ ಉಪನ್ಯಾಸಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕ ಪ್ರದೀಪ್.ಕೆ.ವೈ ಸ್ವಾಗತಿಸಿದರು. ಸಂಘದ ಪದಾಧಿಕಾರಿಗಳಾದ ಶರಣ್ಯ ಆಳ್ವ, ಸುಧೀರ್, ರಾಕೇಶ್ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸಂಘದ ಕೋಶಾಧಿಕಾರಿ ಸುಮಾ ಹೆಗ್ಡೆ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!