ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ “ಶತ ಸಂಭ್ರಮ” ಕಾರ್ಯಕ್ರಮವು ಮೇ.31 ರಂದು ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.
ಶತಮಾನೋತ್ಸವದ ಅಂಗವಾಗಿ ಸಹಕಾರ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ನೆರವೇರಿಸಿದರು. ಶತಮಾನೋತ್ಸವದ ನಾಮಫಲಕವನ್ನು ಪ್ರಸಾದ್ ಕೌಶಲ್ ಶೆಟ್ಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ನೆರವೇರಿಸಿದರು. ನೂತನ ಪೆಟ್ರೋಲ್ ಪಂಪ್ ಕಟ್ಟಡದ ಶಿಲಾನ್ಯಾಸವನ್ನು ಶಶಿಕುಮಾರ್ ರೈ ಬಾಲ್ಯೋಟ್ಟು ನೆರವೇರಿಸಿದರು. ನಂತರ ಹರಿಹರ ಪೇಟೆಯಿಂದ ಹರಿಹರೇಶ್ವರ ಕಲಾಮಂದಿರದವರೆಗೆ ನಡೆದ ಮೆರವಣಿಗೆಗೆ ಕೆ.ಎಂ.ಎಫ್ ಮಂಗಳೂರು ಇದರ ಅಧ್ಯಕ್ಷರಾದ ಸುಚರಿತ ಶೆಟ್ಟಿ ಚಾಲನೆ ನೀಡಿದರು.
ಮೆರವಣಿಗೆಯ ನಂತರ ಪ್ರಾರಂಭಗೊಂಡ ಶತಮಾನೋತ್ಸವ ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಅಧ್ಯಕ್ಷರಾದ ಹರ್ಷಕುಮಾರ್.ಡಿ.ಎಸ್ ಸ್ವಾಗತ ಮತ್ತು ಪ್ರಸ್ತಾವನೆಯನ್ನು ನೆರವೇರಿಸಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ ವರದಿ ವಾಚನ ಮಾಡಿದರು.
“ಶತ ಸಂಭ್ರಮ”ದ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾದ ಪ್ರಭಾಕರ ಕಿರಿಭಾಗ ಪ್ರಸ್ತಾವನೆ ನೆರವೇರಿಸಿ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆದು ಸನ್ಮಾನ ಕಾರ್ಯಕ್ರಮ ಪ್ರಾರಂಭಗೊಂಡು ಸ್ಥಳದಾನಿಗಳನ್ನು ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಸಂಘದ ಪೂರ್ವಾಧ್ಯಕ್ಷರುಗಳನ್ನು ಶಶಿಕುಮಾರ್ ರೈ ಬಾಲ್ಯೋಟ್ಟು ಸನ್ಮಾನಿಸಿ ಗೌರವಿಸಿದರು. ವಿಶ್ರಾಂತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಎಸ್.ಎನ್ ಮನ್ಮಥ ಸನ್ಮಾನಿಸಿ ಗೌರವಿಸಿದರು. ಸಂಘದ ಪ್ರಾರಂಭದಿಂದಲೂ ವ್ಯವಹರಿಸುತ್ತಿರುವ ಹಿರಿಯ ಸಹಕಾರಿಗಳನ್ನು ಶಶಿಕುಮಾರ್ ರೈ ಬಾಲ್ಯೋಟ್ಟು ಸನ್ಮಾನಿಸಿ ಗೌರವಿಸಿದರು. ನಂತರ ಎಸ್.ಎನ್ ಮನ್ಮಥ ಅವರು ಸಂಘದ ನಿವೃತ್ತ ಸಿಬ್ಬಂದಿಗಳನ್ನು ಗೌರವಿಸುವುದರೊಂದಿಗೆ ಸಹಕಾರ ಸಂಘದ ಶತಮಾನೋತ್ಸವದ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು.
ಮರಣ ಸಾಂತ್ವನ ನಿಧಿಯನ್ನು ಎಸ್.ಆರ್.ಕೆ ಲ್ಯಾಡರ್ಸ್ ಪುತ್ತೂರು ಇದರ ಮಾಲಕರಾದ ಕೇಶವ ಅಮೈ ನೆರವೇರಿಸಿದರು. ಕೃಷಿ ಸಾಧಕರನ್ನು ಹಾಗೂ ಹೈನುಗಾರಿಕಾ ಸಾಧಕರನ್ನು ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸನ್ಮಾನಿಸಿ ಗೌರವಿಸಿದರು.
ನಂತರ ಸಾಮಾಜಿಕ, ವೈದ್ಯಕೀಯ ಹಾಗೂ ವಿಶಿಷ್ಟ ಸಾಧನೆಯನ್ನು ಮಾಡಿದಂತಹ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ವಿವಿಧ ಸಂಘಸಂಸ್ಥೆಗಳನ್ನು ಹಾಗೂ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳನ್ನು ಗೌರವಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ರಾಮಚಂದ್ರ ಪಳಂಗಾಯ ಸ್ಮರಣಿಕೆ ನೀಡಿ ಗೌರವಿಸಿದರು.
ಸಂಘದ ಉಪಾಧ್ಯಕ್ಷರಾದ ಶೇಖರ ಅಂಬೆಕಲ್ಲು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಸ್ಮರಣ ಸಂಚಿಕೆ ಸಂಪಾದಕರಾದ ಪ್ರಭಾಕರ ಕಿರಿಭಾಗ, ಉಪ ಸಂಪಾದಕರಾದ ಶ್ರೀಧರ ಭಾಗವತ್, ಸಂಘದ ನಿರ್ದೇಶಕರುಗಳಾದ ವಿನೂಪ್ ಮಲ್ಲಾರ, ಮಣಿಕಂಠ ಕೊಳಗೆ, ಗಿರೀಶ್ ಕಟ್ಟೆಮನೆ, ತಾರನಾಥ ಮುಂಡಾಜೆ, ಶ್ರೀಮತಿ ವಿಜಯ ಶಿವರಾಮ್ ಕಜ್ಜೋಡಿ, ಶ್ರೀಮತಿ ವಿಜಯ.ಕೆ.ಜೆ, ರಾಜೇಶ್ ಪರಮಲೆ, ಸುರೇಶ್.ಕೆ, ಮೋನಪ್ಪ.ಕೆ, ಬೊಳಿಯ ಬೆಂಡೋಡಿ, ವಲಯ ಮೇಲ್ವಿಚಾರಕರಾದ ಮನೋಜ್ ಕುಮಾರ್.ಎಂ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಕಮಲಾಕ್ಷ ಮುಳ್ಳುಬಾಗಿಲು, ರಾಧಾಕೃಷ್ಣ ಬಿಲ್ಲಾರಮಜಲು, ಸಹ ಕಾರ್ಯದರ್ಶಿ ಶೇಷಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಪರಾಹ್ನ ಸಂಘದ ಅಧ್ಯಕ್ಷರಾದ ಹರ್ಷಕುಮಾರ್.ಡಿ.ಯಸ್ ರವರ ಅಧ್ಯಕ್ಷತೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅಡಿಕೆ ಪತ್ರಿಕೆಯ ಶ್ರೀಪಡ್ರೆ, ದಯಾಪ್ರಸನ್ನ ಚೀಮುಳ್ಳು ಅವರಿಂದ ಕೃಷಿ ವಿಚಾರ ಗೋಷ್ಠಿ ನಡೆಯಿತು. ವೇದಿಕೆಯಲ್ಲಿ ರಾಮಚಂದ್ರ ಪಳಂಗಾಯ ಉಪಸ್ಥಿತರಿದ್ದರು. ವಿಚಾರಗೋಷ್ಠಿ ಕಾರ್ಯಕ್ರಮವನ್ನು ಡಾ| ಎನ್.ಎಸ್ ಗೋವಿಂದ ಅವರು ಸಂಯೋಜಿಸಿದರು.
ಸಂಜೆ ಜಾದೂಗಾರ ಗಣೇಶ್ ಕುದ್ರೋಳಿ ಹಾಗೂ ಬಳಗದವರಿಂದ ಜಾದೂ ಪ್ರದರ್ಶನ ಹಾಗೂ ರಾತ್ರಿ ಲ| ದೇವಿದಾಸ್ ಕಾಪಿಕಾಡ್ ಅಭಿನಯದ “ಪನಿಯರೆ ಆವಂದಿನ” ತುಳು ಹಾಸ್ಯಮಯ ನಾಟಕ ನಡೆಯಿತು.
- Thursday
- November 21st, 2024