Ad Widget

ಕುಕ್ಕೆ ದೇವಸ್ಥಾನದ ಇಒ ಡಾ.ನಿಂಗಯ್ಯ ಅವರಿಗೆ ಗೌರವಾರ್ಪಣೆ

. . . . . .

ಸಂಘ ಸಂಸ್ಥೆಗಳಿ0ದ ಅಭಿಮಾನಿಗಳಿಂದ ಸನ್ಮಾನಗಳ ಮಹಾಪೂರ: ಶುಭ ಹಾರೈಕೆಯ ಹೊನಲು
ಸುಬ್ರಹ್ಮಣ್ಯ: ತನ್ನ ೩೫ ವರ್ಷಗಳ ಸರಕಾರಿ ಸೇವೆಯಿಂದ ಸೇವಾ ನಿವೃತ್ತಿ ಹೊಂದಲಿರುವ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಮತ್ತು ಸಾರ್ವಜನಿಕ ಸನ್ಮಾನ ಸುಬ್ರಹ್ಮಣ್ಯದ ವಲ್ಲೀಶ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಅನೇಕ ಸಂಘ ಸಂಸ್ಥೆಗಳು, ನೂರಾರು ಅಭಿಮಾನಿಗಳು ಸನ್ಮಾನಿಸಿ ಶುಭ ಹಾರೈಸಿದರು.
ಡಾ.ನಿಂಗಯ್ಯ ಅವರ ಪತ್ನಿ ನಾಗರತ್ನ,ಅವರ ಪುತ್ತಿಯರಾದ ನವ್ಯಶ್ರೀ, ನಿಧಿಶ್ರೀ, ಶ್ರೀ ದೇವಳದ ಎಇಒ ಯೇಸುರಾಜ್, ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ., ಎಸ್.ಎಸ್.ಪಿ.ಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಯಶವಂತ ರೈ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಉತ್ಕೃಷ್ಠ ಸೇವೆಯು ಸದಾ ಜನತೆಯ ಮನಸಿನಲ್ಲಿ ಹಸಿರಾಗಿರುತ್ತದೆ.ನಾವು ಯಾವ ರೀತಿ ಇರುತ್ತೇವೆ ಎನ್ನುವುದನ್ನು ಜನ ಗುರುತಿಸುತ್ತಾರೆ.ಉತ್ತಮವಾದ ಸ್ಪಂಧನೆಯು ಅಧಿಕಾರಿಗಳಿಗೆ ಗೌರವವನ್ನು ನೀಡುತ್ತದೆ.ಸೇವಾಕಾಂಕ್ಷಿತ್ವವು ಸರಕಾರಿ ಸೇವೆಯಲ್ಲಿ ಅತ್ಯುತ್ತಮವಾದ ಧ್ಯೇಯವಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ, ಸರಕಾರಿ ಸೇವೆಯಲ್ಲಿ ನಿವೃತ್ತಿಯು ಒಂದು ಅಂಗ.ಸೇವಾವಧಿಯಲ್ಲಿ ಅಧಿಕಾರಿಗಳ ನಡೆನುಡಿಯು ಗೌರವವನ್ನು ತಂದು ಕೊಡುತ್ತದೆ.ಹಿಂದಿನ ಅನುಭವಗಳನ್ನು ನೆನಪಿಸಿಕೊಂಡರೆ ನಿವೃತ್ತಿ ನಂತರವೂ ನೆಮ್ಮದಿ ಇರಲಿದೆ ಎಂದರು.
ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಕಾರ್ಯತತ್ಪರ ಅಧಿಕಾರಿಗಳು ಸದಾ ಜನರ ಮನಸಿನಲ್ಲಿ ಹಸಿರಾಗಿರುತ್ತಾರೆ.ಸೇವಾವಧಿಯಲ್ಲಿ ನೆರವೇರಿಸಿದ ಕರ್ತವ್ಯ ನಿಷ್ಠೆಯು ಅಭಿಮಾನಿಗಳನ್ನು ಹುಟ್ಟು ಹಾಕುತ್ತದೆ.ಇದಕ್ಕೆ ಇಲ್ಲಿ ಸೇರಿರುವ ಜನತೆಯೇ ಸಾಕ್ಷಿ.ಡಾ.ನಿಂಗಯ್ಯ ಅವರು ಮೂರು ದಶಕಗಳಿಂದ ವಿವಿಧ ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿರುವುದು ಭಾಗ್ಯವೇ ಸರಿ ಎಂದು ಹೇಳಿದರು.
ಶುಭ ಹಾರೈಕೆ:
ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್, ಮಾಜಿ ತಾ.ಪಂ.ಅಧ್ಯಕ್ಷ ಅಶೋಕ್ ನೆಕ್ರಾಜೆ, ಮಾಜಿ ಗ್ರಾ.ಪಂ.ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ಮೊದಲಾದವರು ಶುಭ ಹಾರೈಸಿದರು. ಗೌರವಿಸಿದರು. ಡಾ.ನಿಂಗಯ್ಯ ಸ್ವಾಗತಿಸಿದರು. ಪ್ರಾಚಾರ್ಯ ಸೋಮಶೇಖರ ನಾಯಕ್ ಅಭಿನಂದನಾ ಭಾಷಣ ಮಾಡಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ವಂದಿಸಿದರು.
ಹುಟ್ಟೂರಿನಿಂದ ಬೃಹತ್ ಹಾರ:
ಸನ್ಮಾನ ಸಮಾರಂಭಕ್ಕೆ ಅವರ ಹುಟ್ಟೂರಿನಿಂದ ನೂರಾರು ಅಭಿಮಾನಿಗಳು ಆಗಮಿಸಿದ್ದರು.ಅಲ್ಲದೆ ಬೃಹತ್ ಹಾರ ಹಾಕಿ ಡಾ.ನಿಂಗಯ್ಯ ಅವರನ್ನು ಸನ್ಮಾನಿಸಿ ಸಂತಸಪಟ್ಟರು.ಪ್ರೆಸ್ ಕ್ಲಬ್ ಸುಬ್ರಹ್ಮಣ್ಯ, ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘ, ಲೋಕೋಪಯೋಗಿ ಇಲಾಖೆ, ವಿವಿಧ ಬ್ಯಾಂಕುಗಳು, ಸಹಕಾರಿ ಸಂಘಗಳು, ಡಾ.ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್, ಕುಕ್ಕೆ ದೇವಳದ ನೌಕರರ ವೃಂದ ಸೇರಿದಂತೆ ಸಂಘ ಸಂಸ್ಥೆಗಳು, ನೂರಾರು ಅಭಿಮಾನಿಗಳು ಡಾ.ನಿಂಗಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Posts

error: Content is protected !!