ಬಾಳುಗೋಡು ಗ್ರಾಮದ ಪದಕ ನಿವಾಸಿ ವ್ಯಕ್ತಿಯೊಬ್ಬ ತನ್ನ ಮನೆಯಿಂದು ಸೂಮಾರು 4 ಕಿ .ಮಿ ದೂರದಲ್ಲಿರುವ ಮಾನಡ್ಕ ಎಂಬಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ದಿl ರಾಮಚಂದ್ರ ಆಚಾರ್ಯ ಅವರ ಪುತ್ರ, ಹರಿಹರ ಪ್ರೌಢಶಾಲಾ ಬಳಿ ಬಡಗಿ ವೃತ್ತಿ ನಡೆಸುತಿದ್ದ ಪ್ರಕಾಶ್ ಆಚಾರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು.
ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಸಮೀಪವೇ ಆತನ ಬೈಕ್ ಪತ್ತೆಯಾಗಿದ್ದು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ತಾಯಿ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.