2024 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ 75% ಗಿಂತ ಹೆಚ್ಚಿನ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಎನ್.ಎಸ್.ಯು.ಐ ಸುಳ್ಯ ವಿಧಾನಸಭಾ ಕ್ಷೇತ್ರ ವತಿಯಿಂದ ಪ್ರತಿಭಾ ಪುರಸ್ಕಾರ ಸನ್ಮಾನ ಹಾಗು ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ನಡೆಯಲಿಕ್ಕಿದೆ. ವಿಧ್ಯಾರ್ಥಿಗಳು ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರಬೇಕು. ಅರ್ಜಿ ಸಲಿಸುವ ಕೊನೆಯ ದಿನಾಂಕ ಜೂನ್ 15 2024 ವಾಗಿರುತ್ತದೆ. ಕಾರ್ಯಕ್ರಮ ನಡೆಯುವ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದೆಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನಸಭಾ ಕ್ಷೇತ್ರ ತಿಳಿಸಿದೆ.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು www.nsuisullia.site ಫಾರಂ ಬರ್ತಿ ಮಾಡಬೇಕಾಗಿ ತಿಳಿಸಲಾಗಿದೆ.
ಅಭಿಯಾನದ ಚಾಲನೆಯನ್ನು ಸುಳ್ಯ ಎನ್.ಎಸ್.ಯು.ಐ ಘಟಕದ ನೂತನ ಅಧ್ಯಕ್ಷರಾದ ಧನುಷ್ ಕುಕ್ಕೇಟಿ ಅವರ ನೇತೃತ್ವದ ಜೂಮ್ ಮೀಟಿಂಗ್ನಲ್ಲಿ ಜಿಲ್ಲಾ ಮುಖಂಡರುಗಳಾದ ಕೀರ್ತನ್ ಗೌಡ ಕೊಡಪಾಲ, ಆಶಿಕ್ ಅರಂತೋಡು, ಪವನ್ ಅಂಬೇಕಲ್ಲು, ರಿಯಾಜ್ ಸುಳ್ಯ, ಉಬೈಸ್ ಗೂನಡ್ಕ ತಾಲೂಕ್ ಪ್ರಧಾನ ಕಾರ್ಯದರ್ಶಿ ಆಸಿಫ್ ಬಾಳಿಲ, ಶಹಾಲ್ ಸುಳ್ಯ , ರಕ್ಷೀತ್ ಗೌಡ, ಸಂತೋಷ್ ಮತ್ತು ಇತರರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.
- Friday
- November 1st, 2024