Ad Widget

ಹಾಲು ಹಲ್ಲು ಎಂಬ ಬ್ರಹ್ಮಾಸ್ತ್ರ

ಮಕ್ಕಳಲ್ಲಿ ಮೊದಲು ಹುಟ್ಟುವ ಹಲ್ಲುಗಳು ಹಾಲಿನಷ್ಟೇ ಶುಭ್ರವಾಗಿ ಇರುವುದರಿಂದ ಅದನ್ನು ಹಾಲು ಹಲ್ಲು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ 20 ಹಾಲು ಹಲ್ಲುಗಳು ಮಕ್ಕಳಲ್ಲಿ ಇದ್ದು, ಅವುಗಳು ಬಿದ್ದು ಹೋದಾಗ ಶಾಶ್ವತ ಹಲ್ಲುಗಳು ಅವುಗಳ ಜಾಗದಲ್ಲಿ ಹುಟ್ಟುತ್ತದೆ. ಸಾಮಾನ್ಯವಾಗಿ ಆಡು ಮಾತಿನಲ್ಲಿ ಹೇಳುವುದಾದರೆ 32 ಶಾಶ್ವತ ಹಲ್ಲುಗಳು ಇವೆಯಾದರೂ, ಇತ್ತೀಚಿನ ದಿನಗಳಲ್ಲಿ ಕೊನೆಯ ನಾಲ್ಕು ದವಡೆ ಹಲ್ಲುಗಳು ಅಥವಾ ಮೂರನೇ ದವಡೆ ಹಲ್ಲುಗಳು ಹುಟ್ಟುವುದಿಲ್ಲವಾದ್ದರಿಂದ ಈಗಿನ ಯುವಕ ಯುವತಿಯರಿಗೆ 28 ಶಾಶ್ವತ ಹಲ್ಲುಗಳು ಮಾತ್ರ ಇರುತ್ತದೆ. ಇದು ಪ್ರಕೃತಿಯ ಸೋಜಿಗವಾಗಿದ್ದು ಜೀವ ವಿಕಾಸವಾದಂತೆ ಅಗತ್ಯವಿಲ್ಲದ ಅಂಗಗಳನ್ನು ಪ್ರಕೃತಿ

. . . . . . .

ನಿರ್ದಾಕ್ಷಿಣ್ಯವಾಗಿ ನಿವಾಳಿಸಿ ಹಾಕುತ್ತದೆ ಎಂದರೂ ತಪ್ಪಾಗಲಾರದು. ಹುಟ್ಟುವಾಗಲೇ ಕೆಲವು ಮಕ್ಕಳಿಗೆ ಒಂದೆರಡು ಹಾಲು ಹಲ್ಲು ಇರುತ್ತದೆಯಾದರೂ ಸಾಮಾನ್ಯವಾಗಿ 6ರಿಂದ 8 ತಿಂಗಳಿಗೆ ಹಾಲು ಹಲ್ಲುಗಳು ಹುಟ್ಟಲು ಆರಂಭವಾಗಿ ಸುಮಾರು 3 ವರ್ಷದ ಹೊತ್ತಿಗೆ ಎಲ್ಲಾ 20 ಹಾಲು ಹಲ್ಲುಗಳು ಹುಟ್ಟಿರುತ್ತದೆ. ಮಕ್ಕಳಲ್ಲಿ ಒಟ್ಟು 8 ಬಾಚಿ ಹಲ್ಲುಗಳು, 4 ಕೋರೆ ಹಲ್ಲುಗಳು ಮತ್ತು 8 ದವಡೆ ಹಲ್ಲುಗಳು ಇರತ್ತದೆ. ಮಕ್ಕಳಲ್ಲಿ ಮುಂದವಡೆ ಹಲ್ಲುಗಳು ಇರುವುದಿಲ್ಲ.

ಸಾಮಾನ್ಯವಾಗಿ ಹೆಚ್ಚಿನ ಹೆತ್ತವರು ಮತ್ತು ಜನರಲ್ಲಿ ಹಾಲು ಹಲ್ಲಿನ ಬಗ್ಗೆ ತಾತ್ಸಾರ ಭಾವನೆ ಇದೆ. ಹೇಗಾದರೂ ಬಿದ್ದು ಹೋಗುವ ಹಲ್ಲು ಎಂಬ ದಿವ್ಯ ನಿರ್ಲಕ್ಷ್ಯ ಮಗುವಿಗೆ ನಗಲು, ತಿನ್ನಲು ಜಗಿಯಲು, ಮಾತನಾಡಲು ಈ ಹಲ್ಲುಗಳು ಅತೀ ಅವಶ್ಯಕ. ಮಗುವಿನ ದೈಹಿಕ, ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಈ ಹಾಲುಗಳು ಅತೀ ಅನಿವಾರ್ಯ ಎಂಬುದನ್ನು ಹೆತ್ತವರು ಮನಗಾಣಬೇಕು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಬಿದ್ದು ಹೋಗುವ ಈ ಹಾಲು ಹಲ್ಲುಗಳಲ್ಲಿ ಲಕ್ಷಾಂತರ ಆಕರ ಜೀವ ಕೋಶಗಳು ಇದೆ ಎಂದು ತಿಳಿದು ಬಂದಿದೆ. ಇಂತಹಾ ಆಕರ ಕೋಶದ ಜೀವಕೋಶಗಳಿಂದ ನೂರಾರು ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿದೆ ಎಂದೂ ತಿಳಿದು ಬಂದಿದೆ.

ಏನಿದು ಆಕರ ಕೋಶಗಳು ? ;-

ಆಕರ ಕೋಶಗಳನ್ನು ಆಂಗ್ಲಭಾಷೆಯಲ್ಲಿ “ಸ್ಟೈಮ್ ಸೆಲ್” ಎಂದು ಕರೆಯುತ್ತಾರೆ. ಈ ಜೀವಕೋಶಗಳು ದೇಹದ ಎಲ್ಲಾ ರೀತಿಯ ಆಂಗಾಂಶಗಳನ್ನು ಮತ್ತು ಅಂಗಗಳನ್ನು ಪುನರ್ ನಿರ್ಮಾಣ ಮಾಡುವಲ್ಲಿ ಸಹಕರಿಸುತ್ತದೆ ಎಂದು ತಿಳಿದು ಬಂದಿದೆ. ದೇಹದ ಯಾವುದೇ ಹಾಳಾದ ಅಂಗಗಳನ್ನು ಪುನಃ ಉತ್ಪಾದಿಸುವ ಸಾಮಥ್ರ್ಯ ಈ ಆಕರ ಕೋಶಗಳಿಗೆ ಇದೆ. ಈ ಆಕರ ಕೋಶಗಳು ಹೆಚ್ಚಾಗಿ ಎಲುಬಿನೊಳಗಿನ ಅಸ್ಥಿಮಜ್ಚೆ, ಹಲ್ಲಿನೊಳಗೆ ದಂತ ಮಜ್ಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ ಎಂದೂ ತಿಳಿದುಬಂದಿದೆ. ಹೊಕ್ಕಳಬಳ್ಳಿ ಅಥವಾ ಪ್ಲಾಸೆಂಟಾದಲ್ಲಿಯೂ ಈ ಆಕರ ಕೋಶಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ಮಗು ಹುಟ್ಟಿದಾಗ ಹೊಕ್ಕಳ ಬಳ್ಳಿಯನ್ನು ಕತ್ತರಿಸಿ ಎಸೆಯುತ್ತಾರೆ. ಆದರೆ ಅದೇ ಹೊಕ್ಕಳ ಬಳ್ಳಿಯನ್ನು ಶೇಖರಿಸಿ, ಅದರಲ್ಲಿರುವ ಆಕರ ಕೋಶಗಳನ್ನು ಶೇಖರಿಸಿ ಇಟ್ಟು ಮುಂದೆ ಅಗತ್ಯ ಬಿದ್ದಾಗ ಕಳೆದು ಹೋದ ಅಂಗಗಳನ್ನು ಪುನರ್ ಸೃಷ್ಟಿಸಲು ಪ್ರಯತ್ನಗಳು ನಡೆಯುತ್ತಿದೆ. ನೀವು ನಿಮ್ಮ ಹೊಕ್ಕಳ ಬಳ್ಳಿಯನ್ನು ಶೇಖರಿಸಿಟ್ಟಿಲ್ಲವಾಗಿದ್ದಲ್ಲಿ ಯಾವುದೇ ಚಿಂತೆ ಬೇಡ ನಿಮ್ಮ ಮಕ್ಕಳ ಹೇಗಾದರೂ ಬಿದ್ದು ಹೋಗುವ ಹಾಲು ಹಲ್ಲಿನ ಮಜ್ಜೆಯಲ್ಲಿ ಲಕ್ಷಾಂತರ ಆಕರ ಕೋಶಗಳು ಇರುವ ಕಾರಣದಿಂದ, ಅದೇ ಹಾಲು ಹಲ್ಲನ್ನು ವೈಜ್ಞಾನಿಕವಾಗಿ ಶೇಖರಣೆ ಮಾಡಿ ಮುಂದೆ ಅಗತ್ಯ ಬಿದ್ದಾಗ ಬಳಸಬಹುದು.

ಎಲ್ಲಿ ಬಳಸಲಾಗುತ್ತದೆ. ?

ಸುಮಾರು 75 ಬಗೆಯ ರೋಗಗಳಲ್ಲಿ ಈ ಆಕರ ಕೋಶಗಳನ್ನು ಬಳಸಲಾಗುತ್ತದೆ. ರಕ್ತದ ಕ್ಯಾನ್ಸರ್, ಎಲುಬಿನ ಕ್ಯಾನ್ಸರ್, ಮಧುಮೇಹ, ನರದ ರೋಗ, ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡಹುವ ಆಟೋ ಇಮ್ಯೂನ್ ರೋಗಗಳು, ಹೃದಯದ ತೊಂದರೆಗಳು, ಆಲ್‍ಝೈಮರ್ ರೋಗ, ಪಾರ್ಕಿನ್‍ಸನ್ಸ ರೋಗ, ಮೆದುಳು ಬಳ್ಳಿ ತುಂಡಾದಾಗ, ಸ್ನಾಯುಗಳು ನಿಷ್ಕಿøಯವಾದಾಗ, ಸೆರೆಬ್ರಲ್ ಪಾಲ್ಸಿ, ಕಾರ್ಟಿಲೇಜ್ ಪುನರ್‍ಸೃಷ್ಟಿ, ಕಾರ್ನಿಯ ಮರುಸೃಷ್ಟಿ, ಕಿಡ್ನಿ ಮರುಸೃಷ್ಟಿ, ಸ್ಲಿರೋಡರ್ಮಾ, ಕ್ರೊನ್ಸ್ ರೋಗ, ಹಂಟಿಂಗ್ಟನ್ ರೋಗ ಹೀಗೆ 70ಕ್ಕೂ ಹೆಚ್ಚು ರೋಗಗಳಿಗೆ ಈ ಆಕರ ಕೋಶಗಳನ್ನು ಬ್ರಹ್ಮಾಸ್ತ್ರವಾಗಿ ಬಳಸಲು ಸಾಧ್ಯವಿದೆ.

ದಂತ ಮಜ್ಜೆ ಆಕರ ಕೋಶಗಳು

ಹಾಲು ಹಲ್ಲಿನ ಒಳಭಾಗದಲ್ಲಿರುವ ದಂತ ಮಜ್ಜೆಯಲ್ಲಿ ಲಕ್ಷಾಂತರ ಆಕರ ಕೋಶಗಳು ಇರುತ್ತದೆ. ಇದು ಮಿಸೇನ್‍ಕೈಮ್ ಎಂಬ ಆಕರ ಕೋಶಗಳಗಳಾಗಿದ್ದು ಇದರಿಂದ ಹಲವಾರು ರೀತಿಯ ಅಂಗಾಗಗಳನ್ನು ಸೃಷ್ಟಿ ಮಾಡಬಹುದು. ಉದಾಹರಣೆ ನರಕೋಶಗಳ ಮೂಲವಾದ ನ್ಯೂರಾನ್ ಜೀವ ಕೋಶಗಳು, ಹೃದಯದ ಸ್ನಾಯುಗಳನ್ನು ಪುನರ್ ಸೃಷ್ಟಿಸುವ ಮಯೋ ಕಾರ್ಡಿಯೋಸೈಟ್‍ಗಳು, ಎಲುಬನ್ನು ಉತ್ಪಾದಿಸುವ ಆಸ್ಟಿಯೋಸೈಟ್, ಸ್ನಾಯಗಳನ್ನು ಉತ್ಪಾದಿಸುವ ಮಯೋಸೈಟ್, ಕಾರ್ಟಿಲೇಜ್ ಉತ್ಪಾದಿಸುವ ಕಾಂಡ್ರಿಯೋಸೈಟ್, ಕೊಬ್ಬಿನಲ್ಲಿ ಉತ್ಪಾದಿಸು. ಆಡಿಪೋಸೈಟ್ ಹೀಗೆ ಹತ್ತು ಹಲವು ಅಂಗಾಂಶಗಳನ್ನು ಪುನರ್ ಸೃಷ್ಟಿ ಮಾಡಬಹುದಾಗಿದೆ.

ಹೇಗೆ ಸಂಗ್ರಹಿಸಲಾಗುತ್ತದೆ :-

ಸಾಮಾನ್ಯವಾಗಿ 6ರಿಂದ 11 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಹಾಲು ಹಲ್ಲಿನಿಂದ ದಂತ ಮಜ್ಜೆಯನ್ನು ಸಂಗ್ರಹಿಸಲಾಗುತ್ತದೆ. ಹಾಲು ಹಲ್ಲು ಬೀಳುವ ಸಮಯಕ್ಕಿಂತ 3 ತಿಂಗಳ ಮೊದಲು ಔPಉ ದಂತಕ್ಷಕಿರಣ ತೆಗೆದು ಹಲ್ಲಿನ ರಚನೆ, ಗಾತ್ರ, ಬೇರುಗಳ ಗಾತ್ರವನ್ನು ಅಭ್ಯಸಿಸಲಾಗುತ್ತದೆ. ಸಂಪೂರ್ಣವಾಗಿ ಅಲುಗಾಡುವ ಹಲ್ಲನ್ನು ಉಪಯೋಗಿಸಲಾಗುವುದಿಲ್ಲ. ಆರೊಗ್ಯವಂಥ ಹಾಲು ಹಲ್ಲಿನ ದಂತ ಮಜ್ಜೆಯನ್ನು ವಿಶೇಷ ಸಲಕರಣೆಗಳ ಮುಖಾಂತರ ಸಂಗ್ರಹ ಮಾಡಲಾಗುತ್ತದೆ. ಆಯ್ಕೆಯಾದ ಮಗುವಿನ ಹಲ್ಲನ್ನು ವಿಶೇಷ ತಜ್ಞರ ತಂಡ ಹಲ್ಲು ಕಿತ್ತ ಕೂಡಲೇ ಶೇಖರಿಸಿ 72 ಗಂಟೆಗಳ ಒಳಗೆ ದಂತ ಆಸ್ಥಿಮಜ್ಜೆಯನ್ನು ಆಕರ ಕೋಶದ ಬ್ಯಾಂಕ್‍ಗೆ ವರ್ಗಾವಣೆ ಮಾಡಲಾಗುತ್ತದೆÀ. ಹೀಗೆ ಸಂಗ್ರಹಿಸಲಾದ ದಂತ ಮಜ್ಜೆ ಆಕರ ಕೋಶಗಳನ್ನು 2000ಅನಲ್ಲಿ ಸುಮಾರು 50 ವರ್ಷಗಳ ಕಾಲ ಇಟ್ಟುಕೊಳ್ಳಬಹುದು ಮತ್ತು ಅಗತ್ಯ ಬಿದ್ದಾಗ ಈ ಆಕರ ಕೋಶಗಳನ್ನು ಬಳಸಿ ಬೇಕಾದ ಅಂಗಗಳನ್ನು ಪುನರ್ ಸೃಷ್ಟಿಸಲು ಸಾಧ್ಯವಿದೆ. ಹೀಗೆ ಸಂಗ್ರಹಿಸಲಾದ ದಂತ ಆಕರ ಕೋಶಗಳನ್ನು ವಿಶೇಷ ಬಾರ್‍ಕೋಡು ಮುಖಾಂತರ ಶೇಖರಸಿ ಅದಲು ಬದಲಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ಮತ್ತು ವಿಶೇಷ ಪ್ರಮಾಣ ಪತ್ರ ನೀಡಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಹೈದರಾಬಾದ್‍ನಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ದಂತ ಆಕರ ಕೋಶಗಳ ಬ್ಯಾಂಕ್ ಮದರ್ ಸೆಲ್ ಎಂಬ ಹೆಸರಿನಲ್ಲಿ 2016ರಿಂದ ಕಾರ್ಯಾಚರಣೆ ನಡೆಸುತ್ತಿದೆ. ಹೆಚ್ಚಿನ ವಿವರಗಳನ್ನು www.mothercell.com ಎಂಬ ಜಾಲತಾಣದಲ್ಲಿ ಪಡೆಯಬಹುದಾಗಿದೆ.

ಕೊನೆಮಾತು :-

ಹಾಲು ಹಲ್ಲುಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತಿ ಅಗತ್ಯ. ಹೇಗಿದ್ದರೂ ಬಿದ್ದು ಹೋಗುವ ಹಲ್ಲು ಎಂದು ತಾತ್ಸಾರ ಭಾವನೆ ಸರ್ವತಾ ಸಹ್ಯವಲ್ಲ. ಇಂತಹ ಬಿದ್ದು ಹೋಗುವ ಹಾಲು ಹಲ್ಲುಗಳ ಒಳಗಿನ ದಂತ ಮಜ್ಜೆಯಲ್ಲಿ ಲಕ್ಷಾಂತರ ಆಕರ ಕೋಶಗಳು ಇರುವುದರಿಂದ ಗುಣ ಪಡಿಸಲಾಗದಂತಹ ನೂರಾರು ರೋಗಗಳನ್ನು ಈ ಆಕರ ಕೋಶಗಳು ಒಳಗೆ ಗುಣಪಡಿಸಬಹುದು ಎಂಬ ಹೊಸತೊಂದು ಆಶಾಕಿರಣವನ್ನು ವಿಜ್ಞಾನಿಗಳು ನಮ್ಮೆದುರು ತೆರೆದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆದು ಬಿದ್ದು ಹೋಗುವ ಹಾಲು ಹಲ್ಲುಗಳು ಸರ್ವರೋಗಕ್ಕೂ ಶಮನ ಮಾಡುವ ಬ್ರಹ್ಮಾಸ್ತ್ರವಾಗಿ ವೈದ್ಯರ ಬತ್ತಳಿಕೆಗೆ ಸೇರಿದಲ್ಲಿ, ಮನುಕುಲ ರೋಗ ರುಜಿನಗಳಿಂದ ಮುಕ್ತವಾಗಿ ಸುಂದರ, ಸುದೃಡ, ಆರೊಗ್ಯವಂಥ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಹಾಗಾಗಲಿ ಎಂದು ನಾವೆಲ್ಲ ತುಂಬು ಹೃದಯದಿಂದ ಹಾರೈಸೋಣ.

ಡಾ| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon
drmuraleechoontharu@gmail.com
9845135787

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!