ಸುಳ್ಯ: ಅಪ್ರಾಪ್ತೆ ಯುವತಿಯ ಭಾವಚಿತ್ರ ಸೆರೆ ಹಿಡಿದ ಪ್ರಕರಣದಲ್ಲಿ ಇದೀಗ ಅನ್ಯ ಕೋಮಿನ ಯುವಕನ ಬಂಧನವಾದ ಘಟನೆ ಇದೀಗ ವರದಿಯಾಗಿದೆ .
ಸುಳ್ಯದ ಅಪ್ರಾತ್ತೆ ಯುವತಿಯು ಸುಳ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಸುಳ್ಯದ ಏರಟೆಲ್ ಕಛೇರಿಯಲ್ಲಿ ರೀಚಾರ್ಜ್ ಮಾಡುವ ಸಲುವಾಗಿ ತೆರಳಿದಾಗ ಅಲ್ಲಿನ ಉದ್ಯೋಗಿಯಾದ ಮಾಫಜ್ ಎಂಬಾತನು ಭಾವಚಿತ್ರ ಕ್ಲಿಕ್ಕಿಸದ್ದು ಇದನ್ನು ಗಮನಿಸಿದ ಕಾಸರಗೋಡು ಮೂಲದ ಅಪ್ರಾಪ್ತೆಯು ಈತನ ವಿರುದ್ದ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿತ ಯುವಕನು ಕಲ್ಲುಮುಟ್ಲು ನಿವಾಸಿ ಎಂದು ತಿಳಿದು ಬಂದಿದ್ದು ಇದೀಗ ಆತನನ್ನು ದಸ್ತಗಿರಿ ಮಾಡಲಾಗಿದ್ದು ಸುಳ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್ 2012 ರ ಪ್ರಕಾರ ಪೋಸ್ಕೋ ಪ್ರಕರಣ ದಾಖಲಾಗಿದೆ .
ಅಪ್ರಾಪ್ತೆ ಲೈಂಗಿಕ ದೌರ್ಜನ್ಯ ಕುರಿತಂತೆ ವಿಶ್ವ ಹಿಂದು ಪರಿಷದ್ ಭಗರಂಗದಳವು ಈ ರೀತಿಯಲ್ಲಿ ಮಹಿಳೆಯ ಚಿತ್ರವನ್ನು ಚಿತ್ರಿಕರಿಸಿ ಮಾನ ಹಾನಿ ಮಾಡುವುದನ್ನು ಖಂಡಿಸುತ್ತಾ ಅಲ್ಲದೇ ದೂರುದಾರೆಯು ಅಪ್ರಾಪ್ತೆಯಾಗಿದ್ದು ಆಕೆಯನ್ನು ಅಧಿಕಾರಿಗಳು ನ್ಯಾಯಲಯಕ್ಕೆ ಹೋಗಬೇಕು ಎಂದು ಬೆದರಿಸಿ ದೂರನ್ನು ಹಿಂಪಡೆಯುವಂತೆ ಹೇಳಿರುವುದು ಸರಿಯಲ್ಲ ಅದಲ್ಲದೆ ಈ ಕುರಿತಂತೆ ಅಧಿಕಾರಿಗಳು ನಿರ್ಧಾಕ್ಯಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೆವೆ ಎಂದು ಆಗ್ರಹಿಸಿದರು.
ಸಂತ್ರಸ್ತೆ ಯುವತಿಯು ನಮ್ಮ ಸಮುದಾಯದ ಯುವತಿಯಾಗಿದ್ದು ಇಂತಹ ಚಿಕ್ಕ ಇಳಿ ವಯಸ್ಸಿನ ಯುವತಿಯರ ಚಿತ್ರ ಸೆರೆ ಹಿಡಿದು ಇಂತಹ ಕ್ರೂರವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಬ್ಲಾಕ್ ಮೇಲ್ ಮಾಡುವ ಕೆಲಸಗಳು ಆಗುತ್ತವೆ ಆ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತದೆ ಎಂದು ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ ತಿಳಿಸಿದೆ.